ನಾಡಿನ ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖವಾಗಿ ಕಾಣಬರುವ ಆರಂಭಿಕ ಅರಸು ಮನೆತನಗಳಲ್ಲಿ ಗಂಗರು ಪ್ರಮುಖರಾ ದವರು. ಅವರ ರಾಜಧಾನಿಯಾಗಿ ಮೆರೆದಿದ್ದ ತಲಕಾಡಿನ ಹಲವು ದೇವಾಲಯಗಳು ಗಂಗರ ಹಾಗೂ ಹೊಯ್ಸಳರ ಕೊಡುಗೆಗೂ ಸಾಕ್ಷಿಯಾ ಗಿ ನಿಂತಿದೆ. ಇಲ್ಲಿನ ಪಂಚಲಿಂಗಗಳ ದೇವಾಲ ಯಗಳು ಸೇರಿ ದಂತೆ ಹಲವು ಪುರಾತನ ದೇವಾಲಯಗಳಿವೆ.
ಇತಿಹಾಸ ಪುಟದಲ್ಲಿ ಪ್ರಮುಖವಾಗಿ ಗುರುತಿಸಿ ಕೊಂಡ ಈ ತಲಕಾಡು ಗ್ರಾಮದಲ್ಲಿ ಸುಮಾರು 100 ಕ್ಕೂ ಅಧಿಕ ಶಾಸನಗಳು ಸಿಕ್ಕಿದ್ದು ಪ್ರಮುಖ ದೇವಾಲಯವಾದ ವೈದೇಶ್ವರ ಹಾಗು ಕೀರ್ತಿ ನಾರಾಯಣ ದೇವಾಲಯಗಳಿಗೆ ಸಂಭಂದಿಸಿ ದಂತೆ ತಲಾ 20 ಕ್ಕೂ ಅಧಿಕ ಶಾಸನಗಳು ದೊರೆತಿದೆ. ಇಲ್ಲಿನ 909 ರ ಶಾಸನದಲ್ಲಿ ಇಲ್ಲಿನ ದೇವಾಲಯದ ಉಲ್ಲೇಖ ನೋಡಬಹುದು. ನಂತರ ಚೋಳರ ಹಾಗು ಹೊಯ್ಸಳರ, ವಿಜಯ ನಗರ ಹಾಗೂ ಮೈಸೂರು ಅರಸರ ಹಲವು ಶಾಸನಗಳು ಇಲ್ಲಿ ದೊರೆತಿದ್ದು ಗಂಗರ ಕಾಲದಲ್ಲಿ ವೈಭವದಿಂದ ಮೆರದಿದ್ದು ಪದೇ ಪದೇ ದಾಳಿಗೆ ತುತ್ತಾದರೂ ತನ್ನ ಇತಿಹಾಸದ ಕೊಂಡಿಯನ್ನ ಹಾಗೇ ಉಳಿಸಿಕೊಂಡಿದೆ. ಇನ್ನು ಇಲ್ಲಿ ನಡೆದ ಉತ್ಖನ ನದಲ್ಲಿ ಸಿಕ್ಕ ಶಾತವಾಹನರ ಕಾಲದ ಹಲವು ಅವಶೇಷಗಳು ಹಾಗು ಗಂಗರ ಕಾಲದ ಹಲವು ಪಳೆಯುಳಿಕೆಗಳು ತಲಕಾಡಿನ ಪರಂಪ ರೆಯನ್ನು ಎತ್ತಿ ಹಿಡಿದಿದೆ.
ವೈದ್ಯನಾಥೇಶ್ವರ ದೇವಾಲಯ

ತಲಕಾಡಿನ ಪ್ರಮುಖ ದೇವಾಲಯವಾದ ಇದರ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೆಚ್ಚಿನ ಶಾಸನಗಳಲ್ಲಿ ರಾಜರಾಜೇಶ್ವರ ದೇವಾಲಯ ಉಲ್ಲೇಖವಿದ್ದು ಇದೇ ವೈದ್ಯನಾಥೇಶ್ವರ ದೇವಾ ಲಯವೆಂದು ಎಂ.ಎ.ಆರ್ ನಲ್ಲಿ ದಾಖಲಾಗಿದೆ. ಪ್ರಸ್ತುತ ಈಗ ಇರುವ ದೇವಾಲಯ ಸುಮಾರು 14ನೇ ಶತಮಾನದಲ್ಲಿ ಮರು ನಿರ್ಮಾಣವಾಗಿರ ಬಹುದು ಎಂಬ ಅಭಿಪ್ರಾಯ ವಿದ್ವಾಂಸರ ಲ್ಲಿದೆ. ಗಂಗರ ಬಗ್ಗೆ ಅಧ್ಯಯನ ಮಾಡಿರುವ ಶ್ರೀ ದೇವರಕೊಂಡಾರೆಡ್ಡಿ ಅವರು ಹಲವು ಗಂಗರ ಶಿಲ್ಪದ ಪ್ರಭಾವ ಗುರುತಿಸಿದ್ದು ಮೂಲತ: ಗಂಗರ ದೇವಾಲಯವಾಗಿದ್ದು, ನಂತರ ಕಾಲದಲ್ಲಿ ವಿಸ್ತಾರವಾಗಿದೆ ಅಥವಾ ನವೀಕರಣಗೊಂಡಿದೆ. ಈ ದೇವಾಲಯ ಗರ್ಭಗುಡಿ, ಆಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದೆ. ಜಗತಿಯ ಮೇಲೆ ನಿರ್ಮಾಣವಾಗಿದ್ದು ಗಂಗರ ದೇವಾಲಯ ಹೊಯ್ಸಳರ ಕಾಲದಲ್ಲಿ ಮರು ನಿರ್ಮಾಣ ಅಗಿರಬಹುದು. ಗರ್ಭಗುಡಿಯಲ್ಲಿ ವೈದ್ಯನಾಥೇಶ್ವರ ಎಂದು ಕರೆಯುವ ಉದ್ಭವ ಶಿವಲಿಂಗವಿದ್ದು (ಶಿವನ ಈಶಾನ್ಯ ಸ್ವರೂಪ) ತಲಕಾಡಿನ ವ್ಯಾಪ್ತಿಯ ಪಂಚಲಿಂಗೇಶ್ವರಗಳಲ್ಲಿ ಒಂದು.

ನವರಂಗದಲ್ಲಿ ಸುಮಾರು 12 ಅಂಕಣಗಳಿದ್ದು, ಇಲ್ಲಿನ ಚಂಡಿಕೇಶ್ವರ ಹಾಗು ತಾಂಡವ ಮೂರ್ತಿ ಯ ಶಿಲ್ಪಗಳಿವೆ. ಪ್ರವೇಶ ದ್ವಾರದಲ್ಲಿ ಸುಮಾರು 17ನೇ ಶತಮಾನದಲ್ಲಿ ರಚಿತವಾದ ಎತ್ತರವಾದ ಬೃಹತ್ ಶೈವ ದ್ವಾರಪಾಲಕರ ಶಿಲ್ಪಗಳಿವೆ.

ಪ್ರವೇಶದ್ವಾರದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದ್ದು ಇಲ್ಲಿನ ಕಂಭಗಳಲ್ಲಿನ ಚಂಡಿಕೇಶ್ವರ, ಗಣಪತಿ, ಉಮಾಮಹೇಶ್ವರ ಮುಂತಾದ ಕೆತ್ತನೆ ಇದೆ. ಹೊರಭಿತ್ತಿಯಲ್ಲಿ ಹಲವು ಕೆತ್ತನೆ ಇದ್ದು ಮಹಿಷಾ ಸುರಮರ್ದಿನಿ, ಸೂರ್ಯನಾರಾಯಣ, ಬೈರವ, ಲಕ್ಷ್ಮೀ ವೀರಭದ್ರ, ಅಂದಕಾಸುರ ವಧೆ, ಸರಸ್ವತಿ, ಗಣಪತಿ ಮತ್ತು ಅಂಬೆಗಾಲು ಕೃಷ್ಣನ ಕೆತ್ತನೆ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಡ್ರಾವಿಡ ಮಾದರಿಯ ಶಿಖರವಿದೆ.

ದೇವಾಲಯ ಹಿಂಭಾಗದಲ್ಲಿ ಸುಮಾರು 1633 ರಲ್ಲಿ ಮೈಸೂರು ಅರಸರ ಕಾಲದಲ್ಲಿ ಐದು ಶಿವ ಲಿಂಗಗಳನ್ನು ಹೊಂದಿರುವ ದೇವಾಲಯಗಳಿ ದ್ದು ಒಂದೇ ಮುಖಮಂಟಪ ಹೊಂದಿದೆ. ಸ್ಥಳ ಪುರಾಣದಂತೆ ಒಮ್ಮೆ ಬೇಡರು ಇಲ್ಲಿ ಆನೆಯ ಪೂಜೆ ಮಾಡುತ್ತಿದ್ದನ ಪರಿಕ್ಷಿಸಲು ಇಲ್ಲಿನ ಶಾಲ್ಮಲಿ ಮರವನ್ನು ಕಡಿಯಲು ಆರಂಭಿಸಿ ದರು. ಆಗ ಅಲ್ಲಿನ ಕಲ್ಲಿಗೆ ತಾಗಿ ರಕ್ತ ಬರಲು ಆರಂಭವಾಯಿತು. ಗಮನಿಸಿದಾಗ ಅದು ಶಿವ ಲಿಂಗವಾಗಿತ್ತು. ಆಗ ತಮ್ಮ ತಪ್ಪನ್ನು ಮನ್ನಿಸಲು ಕೋರಿಕೊಂಡಾಗ ಅಲ್ಲಿ ಬಂದ ಅಶರೀರವಾಣಿ ನನ್ನ ಗಾಯಕ್ಕೆ ಶಾಲ್ಮಲಿ ಎಲೆಯನ್ನು ಲೇಪನ ಮಾಡಿದರೆ ಗಾಯ ವಾಸಿಯಾಗುತ್ತದೆ ಎನ್ನಲು ಬೇಡರು ಹಾಗೆಯೇ ಮಾಡಲಾಗಿ ಗಾಯ ವಾಸಿ ಯಾಯಿತು. ಹಾಗಾಗಿಯೇ ಇಲ್ಲಿನ ಶಿವನನ್ನು ವೈದ್ಯನಾಥೇಶ್ವರ ಎಂದು ಕರೆಯವ ಪದ್ದತಿ ಇದೆ.
ಪಾತಾಳೇಶ್ವರ ದೇವಾಲಯ

ಪಂಚಲಿಂಗ ದೇವಾಲಯಗಳಲ್ಲಿ ತಲಕಾಡಿನಲ್ಲಿ ಇರುವ ಮೂರು ದೇವಾಲಯಗಳಲ್ಲಿ ಮತ್ತೊಂದು ದೇವಾಲಯವಿದು. ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿರುವ ಸರಳ ದೇವಾಲಯ ಹಲವು ಘಟ್ಟಗಳಲ್ಲಿ ಜೀರ್ಣೋದ್ಡಾರ ಕಂಡಿದೆ. ಗಂಗರ ಕಾಲದ ಗರ್ಭ ಗುಡಿ ಇದ್ದು ಪಾತಾಳೇಶ್ವರ (ಶಿವನ ಅಘೋರ ಸ್ವರೂಪ) ಎಂದು ಕರೆಯುವ ಉದ್ಭವ ಶಿವಲಿಂಗ ವಿದೆ. ಚೋಳರ ಕಾಲದಲ್ಲಿ ಶಿಖರ ನಿರ್ಮಾಣವಾ ಗಿದ್ದರೆ ನವರಂಗ ಹಾಗು ಮಂಟಪ ನಂತರ ಕಾಲ ದ ಸೇರ್ಪಡೆ. ನವರಂಗದಲ್ಲಿ ನಂದಿಯ ಶಿಲ್ಪವಿದೆ. ಇಲ್ಲಿನ ಕಂಭಗಳು ಗಂಗರ ಮಾದರಿ ಯಲ್ಲಿದ್ದು, ನವ ರಂಗದಲ್ಲಿನ ದಕ್ಷಿಣಾಮೂರ್ತಿ, ಗಣಪತಿಯ ಶಿಲ್ಪಗಳಿವೆ. ಇನ್ನು ಸ್ಥಳ ಪುರಾಣದಂತೆ ಪಾತಾಳ ವಾಸಿಯಾದ ವಾಸುಕಿ ಇಲ್ಲಿನ ಶಿವನನ್ನು ಪೂಜಿಸಿ ನಾಗಲೋಕದ ಅಧಿಪತಿಯಾದ ಹಾಗಾಗಿಯೇ ಇದನ್ನು ಪಾತಾಳೇಶ್ವರ ಎಂದು ಕರೆಯಲಾಗುತ್ತದೆ ಇಲ್ಲಿ ಪೂಜಿಸಿದವರು ನಾಗಲೋಕವನ್ನು ಪಡೆದು ಶಿವಲೋಕವನ್ನು ಸೇರುವರು ಎಂಬ ನಂಬಿಕೆ ಇದೆ.
ಮರಳೇಶ್ವರ ದೇವಾಲಯ

ಪಂಚಲಿಂಗ ದೇವಾಲಯಗಳಲ್ಲಿ ತಲಕಾಡಿನಲ್ಲಿ ಇರುವ ೦೩ ದೇವಾಲಯಗಳಲ್ಲಿ ಮತ್ತೊಂದು ದೇವಾಲಯವಿದು. ಈ ದೇವಾಲಯ ಸಹ ಗರ್ಭ ಗುಡಿ, ಅಂತರಾಳ ಹಾಗೂ ನವರಂಗ ಹೊಂದಿರು ವ ಸರಳ ದೇವಾಲಯ. ಇಲ್ಲಿನ ಗಂಗರ ಕಾಲದ ಗರ್ಭಗುಡಿಯಲ್ಲಿ ಶಿವಲಿಂಗ ವಿದ್ದು (ಶಿವನ ಸದ್ಯೋಜಾತ ಸ್ವರೂಪ) ನಂತರ ಸೇರ್ಪಡೆಯಾ ದ ನವರಂಗದಲ್ಲಿನ ಕೇಶವ, ಗಣಪತಿ, ಕಾರ್ತಿ ಕೇಯ, ದುರ್ಗಾ ಹಾಗೂ ಸೂರ್ಯ ಶಿಲ್ಪಗಳಿದ್ದು ಪ್ರಯೋಗ ಮುದ್ರೆ ಯಲ್ಲಿರುವ ಗಂಗರ ಕಾಲದ ಸುಂದರ ಕೇಶವ ಶಿಲ್ಪವಿದ್ದ ಶಂಖ, ಚಕ್ರ, ಗದೆ ಹಾಗು ಕಟಿ ಸ್ವರೂಪದಲ್ಲಿದೆ. ಇಲ್ಲಿನ ಸೂರ್ಯ ಶಿಲ್ಪ ಸಹ ಗಂಗರ ಪ್ರಮಾಣ ಬದ್ದ ಶಿಲ್ಪಗಳಲ್ಲಿ ಒಂದು ಇನ್ನು ಸ್ಥಳ ಪುರಾಣ ದಂತೆ ಇಲ್ಲಿ ಬ್ರಹ್ಮ ಶಿವ ನನ್ನು ತಪಸ್ಸಿನಿಂದ ಒಲಿಸಿಕೊಂಡು ಸರಸ್ವತಿ ಯನ್ನು ವರಿಸಿದ ಎಂಬ ನಂಬಿಕೆ ಇದೆ.
ವಿಜಯಪುರ ಅರ್ಕೇಶ್ವರ ದೇವಾಲಯ
ಪಂಚಲಿಂಗಗಳಲ್ಲಿ ಒಂದಾದ ಈ ದೇವಾಲಯ ತಲಕಾಡಿನ ಹತ್ತಿರದಲ್ಲಿದೆ. ದೇವಾಲಯವು ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಉದ್ಭವ ಶಿವ ಲಿಂಗವಿದ್ದು, (ಶಿವನ ತತ್ಪುರುಷ ಭಾಗದಿಂದ ಉದ್ಭವ ಎಂಬ ನಂಬಿಕೆ) ಬಹುತೇಕ ನವೀಕರಣ ಭಾಗ ಹೊಂದಿರುವ ಈ ದೇವಾಲಯದ ಬಗ್ಗೆ ಶ್ರೀಪುರುಷ ಹಾಗೂ ಇಮ್ಮಡಿ ಶಿವಮಾರನ ಶಾಸನಗಳು ಹಾಗು ಚೋಳರ ಶಾಸನಗಳು ದೊರೆತ ಕಾರಣ ಗಂಗರ ಕಾಲದಲ್ಲಿಯೇ ದೇವಾಲಯ ಅಸ್ತಿತ್ವ ದಲ್ಲಿತ್ತು ಎಂದು ಹೇಳಬಹು ದಾದರೂ ಪುರಾತನ ನಿರ್ಮಾಣದ ಕುರುಹು ಈಗ ನಮಗೆ ಸಿಗದಿದ್ದರೂ ಪಂಚಲಿಂಗ ದೇವಾ ಲಯಗಳಲ್ಲಿ ಪ್ರಮುಖ ವಾದದ್ದು. ಸ್ಥಳ ಪುರಾಣ ದಂತೆ ಇಲ್ಲಿ ಸೂರ್ಯನು ಇಲ್ಲಿ ಶಿವನಿಗೆ ಪೂಜಿಸಿ ಗ್ರಹಗಳಿಗೆ ಅಧಿಪತಿಯಾದ ಕಾರಣ ಅರ್ಕೇಶ್ವರ ಎಂದು ಕರೆಯಲಾಯಿತು ಎಂಬ ನಂಬಿಕೆ ಇದೆ.
ಮುಡುಕುತೊರೆ ಮಲ್ಲಿಕಾರ್ಜುನ ದೇವಾಲಯ

ಪಂಚಲಿಂಗಗಳಲ್ಲಿ ಒಂದಾದ ಈ ದೇವಾಲಯ ತಲಕಾಡಿನ ಹತ್ತಿರದಲ್ಲಿದೆ (ಸುಮಾರು 5ಕಿ.ಮೀ). ನದಿಯ ತಿರುವಿನಲ್ಲಿ ಇರುವ ಕಾರಣ ಮುಡುಕು ತೊರೆ ಎಂಬ ಹೆಸರು ಬಂದಿದೆ. ಸಂಪೂರ್ಣವಾಗಿ ನವೀಕರಣ ಹೊಂದಿರುವ ಇಲ್ಲಿನ ಗರ್ಭಗುಡಿ ಯಲ್ಲಿ ಮಲ್ಲಿಕಾರ್ಜುನ ಎಂದು ಕರೆಯುವ ಶಿವ ಲಿಂಗವಿದೆ (ಶಿವನ ವಾಮದೇವ ಸ್ವರೂಪ) ಇಲ್ಲಿ ಕಾರ್ತಿಕ ಮಾಸದಲ್ಲಿ ವಿಷೇಶ ಪೂಜೆಗಳು ನಡೆಯುತ್ತದೆ.
ಕೀರ್ತೀನಾರಾಯಣ ಸ್ವಾಮಿ ದೇವಾಲಯ

ತಲಕಾಡಿನ ಸುಂದರ ದೇವಾಲಯವಾದ ಇದು ಸುಮಾರು 12 ನೇ ಶತಮಾನದಲ್ಲಿ ನಿರ್ಮಾಣ ವಾಗಿದ್ದು ಈ ದೇವಾಲಯ ವಿಷ್ಣುವರ್ಧನ ವಿಜಯದ ಸಂಕೇತವಾಗಿ ನಿರ್ಮಿಸಿದ ದೇವಾಲ ಯಗಳಲ್ಲಿ ಇದು ಒಂದು ಎಂಬ ನಂಬಿಕೆ ಇದೆ. ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹಾಗು ಎರಡೂ ಮುಖ ಮಂಟಪ ಹೊಂದಿದೆ. ಗರ್ಭಗುಡಿ ಯಲ್ಲಿ ಸುಂದರವಾದ ಹೊಯ್ಸಳರ ಕಾಲದ ಕೀರ್ತಿನಾ ರಾಯಣ ಶಿಲ್ಪವಿದ್ದು ಪದ್ಮಾ, ಗಧಾ, ಚಕ್ರ ಹಾಗೂ ಶಂಖ ಧಾರಿಯಾಗಿದ್ದಾನೆ. ನವರಂಗ ಮತ್ತು ಮಂಟಪದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ಹೊರ ಭಿತ್ತಿಯಲ್ಲಿ ಕೆತ್ತನಗಳಿಲ್ಲ. ದೇವಾಲಯಕ್ಕೆ ದ್ರಾವಿಡ ಶೈಲಿಯ ಶಿಖರವಿದೆ.
ಚೌಡೇಶ್ವರಿ ದೇವಾಲಯ
ತಲಕಾಡಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು, ಗರ್ಭಗುಡಿ ಹೊರತುಪಡಿಸಿ ನಂತರ ಕಾಲದಲ್ಲಿ ಸೇರ್ಪಡೆಯಾಗಿದೆ. ಗರ್ಭಗುಡಿಯಲ್ಲಿ ಸುಮಾರು 11 ನೇ ಶತಮಾನಕ್ಕೆ ಸೇರಿದ ಕಾಳಿಯ ಶಿಲ್ಪವಿದೆ. ಬಹುಷಹ ಈ ಹಿಂದೆ ಗ್ರಾಮ ದೇವತೆಯಾಗಿದ್ದ ಈ ದೇವಾಲಯ ಹೊರಭಾಗದಲ್ಲಿ ಸಾಧಾರಣ ದೇವಾಲಯ ದಂತೆ ಕಂಡರೂ ಶಿಲ್ಪದ ಹಿನ್ನೆಲೆ ಯಲ್ಲಿ ಪ್ರಮುಖವಾದ ದೇವಾಲಯ.
ತಲುಪವ ಬಗ್ಗೆ : ತಲಕಾಡು ಟಿ.ನರಸೀಪುರ ದಿಂದ ಸುಮಾರು 15 ಕಿ ಮೀ ದೂರದಲ್ಲಿದ್ದು, ಮೈಸೂರಿನಿಂದ ಸುಮಾರು 49 ಕಿ.ಮೀ ದೂರ ದಲ್ಲಿದೆ. ವಿಜಯಪುರದ ಅರ್ಕೇಶ್ವರ ದೇವಾಲ ಯ ತಲಕಾಡಿನಿಂದ ಸುಮಾರು 6 ಕಿ.ಮೀ. ದೂರ ದಲ್ಲಿದೆ. ಮುಡುಕುತೊರೆ ಸುಮಾರು 5 ಕಿ.ಮೀ ದೂರದಲ್ಲಿದ್ದ ಟಿ.ನರಸೀಪುರದಿಂದ ಬರುವಾಗ ಆರಂಭದಲ್ಲಿಯೇ ಸಿಗುತ್ತದೆ.
✍️ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು