ನಾಡಿನ ವಾಸ್ತು ವೈಭವದ ವರ್ಣಿಸುವ ನಡುವೆ 75 ರ ಸ್ವಾತ್ರ್ಯಂತ್ಸೋವ ನೆನಪಿಸುವ ಸಂದರ್ಭ ದಲ್ಲಿ ನೆನಪಾಗುವ ಕರ್ನಾಟಕದ ಸ್ಥಳವೆಂದರೆ ವಿದುರಾಶ್ವತ್ಥ. ಐತಿಹಾಸಿಕ ಹಾಗೂ ಪೌರಾಣಿಕ ನಂಟನ್ನ ಹೊಂದಿರುವ ಈ ಸ್ಥಳ ಐತಿಹಾಸಕವಾ ಗಿಯೇ ಪ್ರಸಿದ್ದಿ ಪಡೆದಿದೆ.

ಇತಿಹಾಸ ಪುಟದಲ್ಲಿ ವಿದುರಾಶ್ವತ್ಥ ಕರ್ನಾಟಕ ದ ಜಲಿಯನ್ ವಾಲಾಭಾಗ್ ಎಂದೇ ಗುರುತಿ ಸಿಕೊಂಡಿದೆ. ಇಲ್ಲಿ ಅದರ ಸ್ಮಾರಕಗಳು ಹಾಗೂ ನೆನಪಿನ ಸೌಧ ನಿರ್ಮಾಣವಾಗಿದ್ದು ನಾಡಿನ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳವಾಗಿದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ವಿದುರನಿಂದ ಆಶ್ವತ್ಥ ಮರ ಪೋಷಣೆಗೆ ಒಳಗಾದ ಕಾರಣ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ.

ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದ ಸಮಯದಲ್ಲಿ 1938 ರಲ್ಲಿ ದ್ವಜ ಸತ್ಯಾಗ್ರಹ ಒಂದು ಅಂದೋಲನವಾಗಿ ಪರಿವರ್ತನೆ ಗೊಂಡಿತ್ತು. ಶಿವಪುರದಲ್ಲಿ ಆರಂಭವಾದ ಈ ಚಳವಳಿ ನಾಡಿನ ಎಲ್ಲೆಡೆ ಹೊಸ ಸ್ವರೂಪ ಉತ್ಸಾಹ ಹುಟ್ಟಿಸಿತು. 1938 ರ ಏಪ್ರಿಲ್ ಮಾಸದಲ್ಲಿ ವಿದುರಾಶ್ವತ್ಥದಲ್ಲಿ ಜಾತ್ರೆ ನಡೆಯು ತ್ತಿತ್ತು. ಈ ಸಮಯದಲ್ಲಿಯ ದ್ವಜ ಹಾರಿಸಲು ಕಾಂಗ್ರೇಸ್ ಯೋಚಿಸಿತ್ತು. ಆದರೆ ಇದನ್ನ ಅರಿತ ಸರ್ಕಾರ ಅಂದು ದ್ವಜ ಹಾರಿಸದಂತೆ ಅದೇಶ ನೀಡಿತು. ಆದರೆ ಏಪ್ರಿಲ್ 22 ರಂದು ಕಾಂಗ್ರೆಸ್ ದ್ವಜವನ್ನು ಯಶಸ್ವಿಯಾಗಿ ಹಾರಿಸಲಾಯಿತು. ಸರ್ಕಾರ ಕೂಡಲೆ ಮುಖಂಡರನ್ನು ಬಂದಿಸಿತು. ಆದರೆ ಇದನ್ನು ವಿರೋಧಿಸಿ ಏಪ್ರಿಲ್ 25 ರಂದು ಶ್ರೀ ಟಿ.ಟಿ‌.ರಾಮರಾವ್ ಅವರ ನೇತೃತ್ವದಲ್ಲಿ ದ್ವಜಾರೋಹಣ ಮಾಡಲು ಸಾವಿರಾರು ಜನ ಸೇರಿದರು. ಈ ಕಾರ್ಯಕ್ರಮ ತಡೆಯಲು ಪ್ರಯತ್ನ ವಿಫಲವಾದಾಗ ಅಂದಿನ ಜಿಲ್ಲಾಧಿಕಾರಿ ಯಾಗಿದ್ದ ಅಪ್ಪಾಜಿಗೌಡ ಅವರು ಗೋಲಿಬಾರ್ ಆದೇಶ ಮಾಡಿದರು. ಆ ಸಮಯದಲ್ಲಿ ಹಲವರು ಬಲಿಯಾಗಿದ್ದು ಈ ಘಟನೆಯನ್ನು ನಾಡಿನ ಜಲಿಯನ್ ವಾಲಾಬಾಗ್ ಎಂದೇ ಕರೆಯಲಾಗುತ್ತಿದೆ.

ಈ ಘಟನೆಯ ಬಗ್ಗೆ ವ್ಯಾಪಕವಾದ ಪ್ರತಿಭಟನೆ ಬಂದ ಹಿನ್ನಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ಮಾಡಿತು. ಅಂತಿಮವಾಗಿ ರಾಷ್ಟ್ರ ದ್ವಜವನ್ನು ಹಾರಿಸಲು ಒಪ್ಪಂದವಾಯಿತು. ಹುತಾತ್ಮರ ಗೌರವಾರ್ಥವಾಗಿ ವಿದುರಾಶ್ವತ್ಥ ದಿನವನ್ನು ಆಚರಿಸಲಾಯಿತು. 1959 ರಲ್ಲಿ ಶ್ರೀನಾಗಯ್ಯ ರೆಡ್ಡಿ ಅವರ ಪ್ರಯತ್ನದ ಫಲವಾಗಿ ಸ್ಮಾರಕ ಶಾಲೆಯನ್ನು 1962 ರಲ್ಲಿ ಹುತಾತ್ಮರ ಸ್ಮಾರಕ ವನ್ನು ಸುಮಾರು 2004 ರಲ್ಲಿ ವೀರಸೌಧವನ್ನು ನಿರ್ಮಿಸಲಾಯಿತು.

ಇಲ್ಲಿ ಸ್ಮಾರಕವಲ್ಲದೇ ವಿದುರಾಶ್ವತ್ಥ ಅಶ್ವತ್ಥನಾ ರಾಯಣ ದೇವಾಲಯವೂ ಇದೆ. ಇಲ್ಲಿ ವಿದುರ ರು ಮೈತ್ರಿಯ ಮಹರ್ಷಿಗಳ ಸನ್ನಿಧಿಯಲ್ಲಿ ಶಿಷ್ಯಂದಿರಾಗಿ ಇಲ್ಲಿಯೇ ನೆಲೆಸಿದ್ದರು. ಒಮ್ಮೆ ವಿದುರನಿಗ ಸಿಕ್ಕ ಆಶ್ವತ್ಥ ಮರವನ್ನು ಗುರುವಿಗೆ ತೋರಿಸಲು ಅವರ ಕೋರಿಕೆಯಂತೆ ಬುಡದಲ್ಲಿ ಬ್ರಹ್ಮನು, ಮದ್ಯದಲ್ಲಿ ವಿಷ್ಣು ಹಾಗೂ ತುದಿಯಲ್ಲಿ ಶಿವನು ನೆಲೆಸಿ ಅದನ್ನು ಇಲ್ಲಿ ಭಕ್ತಿ ಯಿಂದ ಈ ಜಾಗದಲ್ಲಿ ನೆಟ್ಟರು. ಇದೇ ಕಾರಣದಿಂದ ಈ ಸ್ಥಳಕ್ಕೆ ವಿದುರಾಶ್ವತ್ಥ ಎಂಬ ಹೆಸರು ಬಂದಿತು.

ಅಶ್ವತ್ಥ ಮರದ ಕೆಳಗೆ ಶಾಸ್ತ್ರೋಕ್ತವಾಗಿ ನಾಗ- ನನ್ನು ಸ್ಥಾಪಿಸಿದರೆ ದೋಷ ನಿವಾರಣೆಯಾಗು- ವುದು ಎಂಬ ನಂಬಿಕೆ ಇದ್ದು ಇಲ್ಲಿ ಅಸಂಖ್ಯಾತ ನಾಗರ ಕಲ್ಲನ್ನು ಸ್ಥಾಪಿಸಲಾಗಿದೆ.

ಪ್ರತಿ ವರ್ಷ ಚೈತ್ರ ಶುದ್ದ ಹುಣ್ಣೆಮೆಯಂದು ಇಲ್ಲಿ ಶ್ರೀ ಅಶ್ವತ್ಥನಾರಾಯಣ ಸ್ವಾಮಿ ರಥೋತ್ಸವ ನಡೆಯುತ್ತದೆ. ಇಲ್ಲಿ ಕಾಶಿ ವಿಶ್ವೇಶ್ವರ ಸ್ವಾಮಿ, ಚನ್ನಕೇಶವ ದೇವಾಲಯ ಹಾಗು ವೀರಾಂಜನೇ ಯ ದೇವಾಲಯವೂ ಇದೆ. ಇಲ್ಲಿ ಬರುವ ಪ್ರವಾಸಿಗರಿಗೆ, ಭಕ್ತಾದಿಗ ಳಿಗೆ ಛತ್ರಗಳು, ಪ್ರವಾಸಿ ಮಂದಿರವೂ ಇದೆ.

ತಲುಪುವ ಬಗ್ಗೆ : ಗೌರಿಬಿದನೂರು – ಹಿಂದು- ಪುರ ರಸ್ತೆಯಲ್ಲಿ ವಿದುರಾಶ್ವತ್ಥ ಕ್ರಾಸ್ ನಲ್ಲಿ ತಿರುಗಿ ಹೋಗಬಹುದು. ಗೌರಿಬಿದನೂರಿನಿಂದ ಸುಮಾರು 6 ಕಿ ಮೀ ದೂರದಲ್ಲಿದೆ.

✍️ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು