“ಆದಿಯಿರದ ಕೊನೆ ಇರದದಾವುದೋ   ಹಾದು ಹೋದುದೀ ಜೀವದೊಳು 
ಓದುಗ ನೋನೋಡೆನ್ನುವ ಪರಿ ಕವಿ  ನಾದಿಸುವನೊಳಗೆ ಬೆರಗಿನೊಳು” 

ಎನ್ನುವ ಪುತಿನ ಅವರು ತಮ್ಮ “ಎಂಬತ್ತರ ನಲುಗು” ಕವನ ಸಂಕಲನದಲ್ಲಿ ಡಿವಿಜಿಯವ ರನ್ನು ಕರ್ಮಯೋಗಿ ಎಂದು ಬಣ್ಣಿಸುತ್ತಾ ಅವರ ಬಗ್ಗೆ ಹೀಗೆ ಹೇಳುತ್ತಾರೆ. 

“ಆತ್ಮಕ್ಕೆ ಆತ್ಮದಿಂದಲೇ ಉನ್ನತಿಯೂ ಅವನತಿ ಯೂ ಸಾಧ್ಯ. ನೆಂಟನೂ ಆ ಆತ್ಮಕ್ಕೆ ಆತ್ಮವೇ ಹಾಗೆ ವೈರಿಯೂ ಸಹ. ತನ್ನನ್ನು ತಾನು ಗೆಲ್ಲ ಬಲ್ಲವನನ್ನು ಆತ್ಮ ತಾನೇ ಹತ್ತಿರಬಂದು ಅಪ್ಪು ವುದು. ಆತ್ಮ ಜ್ಞಾನವಿಲ್ಲದೆ ಬಾಳುವವನಿಗೆ ಆತ್ಮ ವೈರಿ ಯಾಗಿ ಕಾಡುವುದು.” ಹೀಗೆ ಹೇಳಿದ ಭಗವದ್ಗೀತೆ ಯ ಸೂಕ್ತಿಯನ್ನು ಬರೀ ತಮ್ಮ ಕಾವ್ಯದಲ್ಲಷ್ಟೇ ಅಲ್ಲದೆ ಜೀವನದಲ್ಲಿ ಅಳವಡಿ ಸಿಕೊಂಡ ಕರ್ಮ ಯೋಗಿ ಡಿವಿಜಿ ಅವರು.

ಅದನ್ನೇ ಈ ಸಾಲು ಗಳಲ್ಲಿ ಹೀಗೆ ಹೇಳುತ್ತಾರೆ ನೋಡಿ: 

ಅಂದು ಗೀತಾಚಾರ್ಯರಿಂತೊರೆದ ಸೂಕ್ತಿಯನು 
ಇಂದು ಬಾಳೊಳು ತಂದ ಧೀರಾತ್ಮನಿವನು
ತನ್ನಿಂದ ತಾನೆದ್ದು ತನ್ನ ಗೆದ್ದವನೀತ ಉನ್ನತರೊಳುನ್ನತನು ಪ್ರೇಮ ನಿಷ್ಪಪ್ತ ದೈವವನು ನಂಬಿಯೂ ಪುರುಷ ಪ್ರಯತ್ನವನು
ಸೇವೆ ಎಂದೆಣಿಸಿದವ ಸತ್ಕರ್ಮಸಕ್ತ  

ಎಂತಹ ಸಮಂಜಸ ನುಡಿಗಳು!. ಗೀತೆಯನ್ನು ಓದುವುದು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲದೆ ತನ್ನ ಬಾಳಿನಲ್ಲಿ ಅಳವಡಿಸಿಕೊಂಡ ಧೀರಾತ್ಮ ಎನ್ನುತ್ತಾರೆ.  ತನ್ನನ್ನೇ ತಾನು ಗೆದ್ದು ಬಂದ ಪ್ರೇಮಜೀವಿ; ಉನ್ನತರಲ್ಲಿ ಅತಿ ಉನ್ನತ ನು ಎಂದು ಹೊಗಳುತ್ತಾರೆ. ಪೂರ್ಣ ಪ್ರಮಾಣ ದ ದೈವ ನಂಬಿಕೆ ಇದೆ ಆದರೆ ಅವನನ್ನೇ ನಂಬಿ ಕೈ ಚೆಲ್ಲಿ ಕೂರಬಾರದು. ವಿಧಿ ಬರಹಕ್ಕೆ ತಕ್ಕ ಪುರುಷ ಪ್ರಯತ್ನ ಸೇರಿದರೆ ಸಫಲತೆ ಎಂದು ಸಾರಿದವರು ಡಿವಿಜಿ. ಅದನ್ನೇ ಪುತಿನ ಅವರು ಇಲ್ಲಿ ಸ್ಮರಿಸು ತ್ತಾರೆ. ಡಿವಿಜಿ ಅವರು ಬಾಳಿದ ಶೈಲಿ ಹಾಕಿಕೊಟ್ಟ ಮಾದರಿ ಎಲ್ಲರಿಗೂ ಅನು- ಸರಣೀಯ. 

ಕವಿತೆಯ ಮುಂದಿನ ಸಾಲುಗಳನ್ನು ನೋಡಿದರೆ, 

ನಕ್ಕು ನಲಿಸುವ ಸರಸಿ ಬಿಕ್ಕಿ ಮರಗುವ ಕರುಣಿಂ 
ಸೊಕ್ಕಿದವರನು ತಾನು ಧಿಕ್ಕರಿಪ ಧೃತಿಮಾನ್
ದುಕ್ಕ ಸೊಗಗಳು ದೈವವಿಕ್ಕುವ ಹಸಾದವೆನೆ ದಿಕ್ಕುಗೆಡದಂದದಲಿ ತಾಳಿದ ಸಹಿಷ್ಣು 

ಡಿವಿಜಿಯವರು ಬಾಳಿದ ರೀತಿಯನ್ನು ಬಾಳಿನ ಪುಟಗಳನ್ನು ಈ  ನಾಲ್ಕು ಸಾಲುಗಳಲ್ಲಿ ಹೀಗೆ ಬಿಚ್ಚಿಡುತ್ತಾರೆ. ತುಂಬಾ ಸರಳ ಜೀವಿ ತಾವೂ ನಕ್ಕು ಸುತ್ತಲಿನ ರುವವರನ್ನು ನಗಿಸುವಂತಹ ಹಾಸ್ಯಮಯಿ. ಹಾಗೆಯೇ ಬೇರೆಯವರ ದುಃಖ ಕ್ಕೆ ತಾನು ಕಣ್ಣೀರಾಗಿ ದುಖಿಸುತ್ತಿದ್ದ ಕರುಣಿ. ಜಂಬ ಸೊಕ್ಕು ತೋರಿದವರನ್ನು ನಿರ್ಲಕ್ಷಿಸಿ ಧಿಕ್ಕರಿಸು ತ್ತಿದ್ದ ಧೃತಿವಂತ. ದುಃಖವಿರಲಿ ಸುಖ ವಿರಲಿ ದೈವದ ಪ್ರಸಾದವೆಂದು ಸಮಾನ ಮನ ಸ್ಸಿನಿಂದ ಸ್ವೀಕರಿಸುತ್ತಿದ್ದ ಸಹಿಷ್ಣು ಎಂದು ಡಿವಿಜಿ ಯವರನ್ನು ಬಣ್ಣಿಸುತ್ತಾರೆ. 

ಹಿರಿಯರಿಗೆ ಬುದ್ಧಿ ಹೇಳುವ ಕಣ್ಣಾಗಿ ತಾತ್ವಿಕ ಜನಕ್ಕೆ ಹೆಣ್ಣಿನಂತೆ ಸಹಕಾರಿಯಾದ ಶ್ರೇಷ್ಠ ಬುದ್ಧಿ ಯ ಹೃದಯವಂತ ಎನ್ನುತ್ತಾ ಕನ್ನಡದ ಸಾರಮತಿ ಈ ಡಿವಿಜಿ ಎಂದು ಕೊಂಡಾಡು ತ್ತಾರೆ.  

ಕವಿತೆಯ ಕಡೆಯ ಸಾಲುಗಳು: 

ನಾಡು ನುಡಿ ರೂಢಿಗಳ ತ್ರೈಮೌಲ್ಯಕಳವಡಿಸಿ 
ಹೊಸ ನೋಟ ತಂದನೀತ 
ಹಾಡು ನುತಿಗಳಿಂದರ್ಚಿವುದಚ್ಚರಿಯೆ 
ಈತನಂ ಪ್ರೀತ ಜನ ಜಾತ

ಹೀಗೆ ನುಡಿದಂತೆ ನಡೆದು ನಡೆದಂತೆ ನುಡಿದ ಈ ಭವ್ಯ ವ್ಯಕ್ತಿತ್ವದ ಉನ್ನತ ಮೌಲ್ಯಗಳ ಪ್ರತಿಪಾದ ಕರನ್ನು ಜನ ಹಾಡು ಸ್ತುತಿಗಳಿಂದ ಆರಾಧಿಸು ವುದು ನಿಜಕ್ಕೂ ಆಶ್ಚರ್ಯ ಅಲ್ಲವೇ ಅಲ್ಲ. ಈತ ಸರ್ವಜನರಿಗೂ ಪ್ರಿಯ ಜನರಿಂದಲೇ  ಜನಿಸಿದ ವ ಎಂದು ಹೇಳುತ್ತಾರೆ.  ನಿಜಕ್ಕೂ ತುಂಬಾ ಸುಂದರ ಸೂಕ್ತ ಸಾಲುಗಳು.  ಈ ಸಮಯದಲ್ಲಿ ಡಿ.ವಿ.ಜಿಯವರ ಬಗ್ಗೆ ಕೇಳಿದ ಘಟನೆ ನೆನಪಿಸಿ ಕೊಳ್ಳಲು ಇಷ್ಟಪಡುವೆ.  ಅವರಿಗೆ 1ಲಕ್ಷ ರೂ. ಮೌಲ್ಯದ ಬಹುಮಾನವನ್ನು ವೇದಿಕೆಯ ಮೇಲೆ ಸನ್ಮಾನಿಸಿ ಕೊಟ್ಟ ತಕ್ಷಣವೇ ಅದನ್ನು ಗೋಖಲೆ ಸಂಸ್ಥೆಗೆ ದಾನ ಮಾಡಿದರು. ಆದರೆ ಮನೆಯಲ್ಲಿ  ಅಹನ್ಯಹನಿ ತಾಪತ್ರಯವಿತ್ತು. ಯಾರಿಗೆ ತಾನೆ ಈ ರೀತಿಯ ಧಾರಾಳ ಮನಸ್ಸು ಬರುತ್ತದೆ.  ಅದಕ್ಕಾಗಿಯೇ ಇವರೆಲ್ಲರನ್ನು ಮಹಾನ್ ಪುರುಷರು ಎನ್ನುವುದು, ಸಾಧಕರೆ ನ್ನುವುದೂ, ಹಿರಿಯರೆಂದು ಗೌರವಿಸಿ ಕೊಂಡಾಡುವುದು.

ಮುಂದೆ ತಮ್ಮ ಪ್ರೀತಿಯ ಗೆಳೆಯ ಗೊರೂರು ರಾಮಸ್ವಾಮಿ ಅಯ್ಯಂಗಾರರ ಬಗ್ಗೆ ಕವನ ವನ್ನು ಬರೆಯುತ್ತಾರೆ ಅವರ ನಿಧನಾನಂತರ. ತಮ್ಮ ಹಾಗೂ ಗೊರೂರರ ಮಧ್ಯೆ ಇದ್ದ ಸ್ನೇಹ ವನ್ನು ಅನರ್ಘ್ಯ ಸ್ನೇಹ ಎಂದು ಬಣ್ಣಿಸುತ್ತಾ ತಮ್ಮ ಮೊದಲ ಪ್ರಥಮ ಪ್ರಕಟಿತ ಗದ್ಯ ಕೃತಿ ರಾಮಾಚಾರಿ ನೆನಪು ಪುಸ್ತಕವನ್ನು ರಾಮ ಸ್ವಾಮಿ ಅಯ್ಯಂಗಾರರು ಪ್ರತಿಮಾಡಿ ಪ್ರಕಟಣೆ ಗೆ ನೆರವಾದರು ಎಂದು ಸ್ಮರಿಸಿಕೊಳ್ಳುತ್ತಾರೆ. ಅದೇ “ಎಂಬತ್ತರ ನಲುಗು” ಕಾವ್ಯ ಕವನ ಸಂಕಲನದ “ಆಪ್ತ ಗೆಳೆಯನಿಗೆ ಕಂಬನಿ” ತಮ್ಮ ಸ್ನೇಹಿತ ನಿಗಾಗಿ ಮಿಡಿದ ಹೃದಯದ ಶೋಕಗೀತೆ. 

ಗೊರೂರರನ್ನು ಕನ್ನಡಾಂಬೆಯ ಸುಪುತ್ರ ಎಂದು ಹೇಳಿ ಅವರು ಸ್ವರ್ಗಕ್ಕೆ ಸರಿದಾಗ “ಕನ್ನಡ ದೇವಿಯ ಮೊಗದ ಮೇಲೆ ನಗೆಯ ಕಳೆ ನಂದಿತು” ಎನ್ನುತ್ತಾರೆ. ತಮ್ಮ ಮೈತ್ರಿಯ ನ್ನು ಮುಂಜಾನೆಯ ಹೊಳೆ ತಂಪಿಗೆ, ಸಂಪಿಗೆ ಸುರಗಿ ಜಾಲಾರಿ ಕಂಪಿಗೆ, ಕಂಪಿನ ಪರಿಮಳಕ್ಕೆ ಹೋಲಿಸುತ್ತಾ ಅವರ ಅಗಲಿಕೆಯನ್ನು ದುಗುಡದಿಂದ ನೆನೆಯುತ್ತಾರೆ. 

ಮರಮರಳಿ ಸತ್ತು ಹುಟ್ಟದವರಾರು 
ಹುಟ್ಟಿದ ಊರನೆ ಉನ್ನತಿಗೆ 
ಏರಿಸಿದೀತನೆ ಪುಣ್ಯವಂತನೈ 
ಧನ್ಯನೀತ_ ಪಾತ್ರನು ನುತಿಗೆ   

ಹುಟ್ಟಿದವರೆಲ್ಲ ಸಾಯಲೇಬೇಕು. ಹುಟ್ಟಿ ಸಾಯುವ ನಡುವೆ ಮಾಡುವ ಕಾರ್ಯಗಳಿಂದ ಮಾತ್ರ  ಜನರ ನೆನಪಿನಲ್ಲಿ ಉಳಿಯುವುದು. ಅಂತಹ ಪುಣ್ಯದ ಕೆಲಸವನ್ನು ಮಾಡಿದವರು ಗೊರೂರರು. ತಮ್ಮ ಹುಟ್ಟಿದ ಹಳ್ಳಿಯಾದ ಗೊರೂರಿನ ಹೆಸರನ್ನು ಉನ್ನತಿಗೇರಿಸಿ ವಿಶ್ವ ವಿಖ್ಯಾತವಾಗಿಸಿ ದವರು. ಆದ್ದರಿಂದ ಅವನು ಪುಣ್ಯವಂತ, ಧನ್ಯ, ಸ್ತುತ್ಯಾರ್ಹ ಎಂದು ಹೇಳು ತ್ತಾರೆ. 

ಹೀಗೆ ಪುಣ್ಯದ ಕೆಲಸ ಮಾಡಿ ಪೂರ್ವಕರ್ಮ ವನ್ನು ಸವಿಸಿದ  ತನ್ನ ಗೆಳೆಯ ಮತ್ತೆ ಮತ್ತೆ ಜನ್ಮಾಂತರದ ಜಾಲಕ್ಕೆ ಸಿಲುಕಿ ಹುಟ್ಟುವವ ನಲ್ಲ.  ಅಕಸ್ಮಾತ್ ಹಾಗೆ ಜನಿಸಿದರೂ ಸುತ್ತ ಎಲ್ಲ ಜನಕ್ಕೂ ಮುದನೀಡುತ್ತ ಬಾಳುವವ ಎಂದು ಹೇಳುವ ಸಾಲುಗಳಲ್ಲಿ ಗೆಳೆಯನ ಬಗೆಯ ಅಕ್ಕರೆಯ ಸಕ್ಕರೆ ಎಷ್ಟು ಹದ ಮಿಳಿತ ವಾಗಿದೆ ನೋಡಿ.

ಹಾಗೆ  ಸಾಗುತ್ತಾ ಹೋದಂತೆ ವೃದ್ಧಾಪ್ಯ ಸವೆಸು ತ್ತಾ ಇರುವಾಗ ವೃದ್ಧಾಪ್ಯದ ಚಿಂತೆಗಳ ಜತೆಗೆ ಸಮಕಾಲೀನ ಪ್ರೀತಿಪಾತ್ರರನ್ನು ಕಳೆದುಕೊ- ಳ್ಳುವ ದುಃಖವು ಜೊತೆಜೊತೆಯಲ್ಲೇ ಬರುತ್ತದೆ. ಈ ಸಂಗತಿಯ ಕುರಿತು ಶತಾಯುಷಿ ಪ್ರೊಫೆಸರ್ ವೆಂಕಟಸುಬ್ಬಯ್ಯ ನವರು ತಮ್ಮ ಭಾಷಣದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾ ರೆ. ಅದನ್ನೇ ಪುತಿನ ಅವರ ಮಾತಿನಲ್ಲೇ ಕೇಳಿ: 

ಮಿತ್ರ ಹಾನಿ ತಟ್ಟಿಹುದೀ ಮನಕೆ 
ಮುಪ್ಪಿನ ಹಾನಿಯ ಬೆಳೆಸುತ್ತಾ 
ನಾಲ್ಕಿಪ್ಪತ್ತರ ಗೆಳೆತನದೈಸಿರಿ
ತೀರಿ ಹೋಗೆ ಪರಿತಪಿಸುತ್ತ.

ಅವರಿಬ್ಬರದೂ ನಾಲ್ಕಇಪ್ಪತ್ತು ಅಂದರೆ ಎಂಬತ್ತು ವರ್ಷದ ಗೆಳೆತನವಂತೆ.  ಹಾಗಾಗಿ ಗೆಳೆಯನ ಅಗಲಿಕೆ ಅವರ ಮನಸ್ಸಿಗೆ ತಟ್ಟಿದ ಘಾಸಿ ಅನೂಹ್ಯ. ಹಾಗಾಗಿಯೇ ಅವರ ಪರಿತಪಿಸುವಿ ಕೆಯ ಆಳವೂ ಹೆಚ್ಚು.

ನೆನೆವೆನು ನಗುವೆನು ಇನ್ನೆಂದಿಗು ಇವ ಗೋಚರಿಸಲು ಹಂಬಲಿಸುವೆನು 
ನನ್ನೊಳಗನರಿತು ಒಲಿದವರೆಲ್ಲರು
ಹೋದರೆತ್ತಲೋ ಹಲುಬುವೆನು 

ನಮ್ಮ ಆತ್ಮಕ್ಕೆ ಹತ್ತಿರವಾದ ಮನಸ್ಸಿಗೆ ಪ್ರಿಯ ರಾದ ನಮ್ಮನ್ನು ಚೆನ್ನಾಗಿ ಅರಿತವರು ಒಬ್ಬೊಬ್ಬ ರಾಗಿ ನಮ್ಮನ್ನು ಬಿಟ್ಟು ಅಗಲುತ್ತಿರುತ್ತಾರೆ. ಅವರು ಮತ್ತೆ ಮತ್ತೆ ನಮ್ಮ ಕಣ್ಮುಂದೆ ಬರಲಿ. ಅವರ ಸಾಂಗತ್ಯ ಸಿಗಲಿ ಎಂಬ ಹಂಬಲಿಕೆ, ಕನವರಿಕೆ ಅದು ನಿರಂತರ. ಆದರೆ ಹೋದವ ರ್ಯಾರೂ ಮರಳಿ ಬಾರರು ಅವರೊಡನೆ ಕಳೆದ ಕ್ಷಣಗಳ ಸ್ಮರಣೆಯ ಬೆಳಕಲ್ಲೇ ನಾವು ದಿನದೂಡ ಬೇಕಾಗಿರುತ್ತದೆ.  

ಒಲವಿನ ಗೆಳೆಯನನ್ನು ನೆನೆಸುತ್ತಾ ಸುರಿಸುವ ಕಂಬನಿಯಲ್ಲಿ ಮಿತ್ರತ್ವದ ಗಾಢತೆಯನ್ನು ಅಗಲು ವಿಕೆಯ ಪರಿತಾಪವನ್ನು ತುಂಬಾ ಚೆನ್ನಾಗಿ ಬಣ್ಣಿಸಿ ರುವ ಕವನ ಇದು. 

ಕಲೆಯು ನಿಡಿದು ಕಾಲವೋ ಕಿರಿದು ಎಂದು ಸಾರುತ್ತಾ “ನಡೆದಷ್ಟೇ ದಾರಿ ಪಡೆದಷ್ಟೇ ಭಾಗ್ಯ” ಎನ್ನುವ ವೇದಾಂತವನ್ನ ಸಾರುವ  ಪುತಿನ ಅವರ ಈ ಸಾಲುಗಳೊಂದಿಗೆ ಒಂದು ಅಲ್ಪವಿರಾಮ.

ಚಿತ್ತವ ಹಗುರಾಗಿಸಿ ಉಫ್ ಎನ್ನುತ ಎತ್ತೆತ್ತಲೋ ಕವಿ ತೂರುವನು 
ಹತ್ತುವೆಡೆಯೊಳಚ್ಚಯನೆ  ಸಮೆವನು 
ಹೊತ್ತೊಡನಮೃತಕೆ ಹೋರುವನು 

✍️ಸುಜಾತಾ ರವೀಶ್ 
ಮೈಸೂರು