ನಾಡಿನ ದೇವಾಲಯಗಳಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ಪ್ರಮುಖವಾದದ್ದು.ಅವರ ದೇವಾಲಯ ಗಳು ಹೊಸ ಸ್ವರೂಪವನ್ನೇ ನೀಡಿದರೆ ಹಾನಗಲ್ಲ ದೇವಾಲಯಗಳು ವಾಸ್ತು ದೃಷ್ಟಿಯಿಂದ ಅತ್ಯಂತ ಪ್ರಮುಖವಾದದ್ದು. ಅವರ ಕಾಲದ ನಿರ್ಮಾಣ ವಾದ ವಿಸ್ತಾರವಾದ ಈ ದೇವಾಲಯ ಅಧ್ಯಯನ ಹಾಗು ಪ್ರವಾಸಿ ಹಿನ್ನೆಲೆಯಲ್ಲೂ   ಪ್ರಮುಖವಾ ದದ್ದು.

ಸ್ಥಳಪುರಾಣದಂತೆ ಇದು ಮಹಾಭಾರತ ಕಾಲದ ವಿರಾಟನಗರವಾಗಿತ್ತು ಹಾಗೂ ಇಲ್ಲಿನ ದಿಬ್ಬ ಕುಂತಿ ದಿಬ್ಬ ಇಲ್ಲಿನ ನದಿಗೆ ಧರ್ಮಾನದಿ, ಇಲ್ಲಿನ ಮಂಟಪ ಕೀಚಕನ ಗರಡಿಮನೆ  ಎಂಬ ನಂಬಿಕೆ ಇದೆ.1245 ರ ಶಾಸನದಲ್ಲಿ ಈಊರಿಗೆ ವಿರಾಟ ನಗರಿ ಪಂಚಶತ ಎಂಬ ಉಲ್ಲೇಖವಿರುವುದು ಜನರ ನಂಬಿಕೆಗೆ ಕಾರಣ ಇರಬಹುದು.  ಇನ್ನು ಇತಿಹಾಸದಲ್ಲಿ 457ರ ಶಾಸನದಲ್ಲಿವಿಜಯಪಂಕ್ತಿ ಪುರದ ಉಲ್ಲೇಖವಿದ್ದು ಇದ್ದು ಹಾನಗಲ್ಲಿನ ಮೂಲಹೆಸರು ಎಂದು ಹೇಳುತ್ತಾರೆ.ಇಲ್ಲಿ ಕದಂಬ ರವಿವರ್ಮ ಜಯದನಿಮಿತ್ತ ಈಊರನ್ನು ಹಾಗೇ ಹೆಸರಿಸಿರಬಹುದು ಎಂಬ ನಂಬಿಕೆ ಇದೆ. ಈ ಮೊದಲು ಪಾನಂಗಲ್ ಎಂದು ಕರೆಯಲಾಗು ತ್ತಿದ್ದ ಈ ಊರು ನಂತರ ವಿಜಯಪಂಕ್ತಿಪುರ- ಪಾಂತೀಪುರ – ಹಾನುಂಗಲ್ – ಹಾನುಂಗಲು – ಹಾನಗಲ್ಲು ಆಗಿದೆ. ಆದರಲ್ಲೂ ಕದಂಬ, ರಾಷ್ಟ್ರ ಕೂಟ ಹಾಗೂ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅತ್ಯಂತ ವೈಭವದ ನಗರವಾಗಿತ್ತು.

ತಾರಕೇಶ್ವರ ದೇವಾಲಯ :

ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಉಲ್ಲೇಖವಿಲ್ಲ.1179 ರ ಸೊಯೀದೇವನ ಶಾಸನ ಗಳಲ್ಲಿ ಅಮರೇಶ್ವರ ದೇವಾಲಯದ ಉಲ್ಲೇಖ ವಿದ್ದರೆ,ಈ ಸುಮಾರು11ನೇ ಶತಮನಾದ ಶಾಸನ ದಲ್ಲಿ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿ ರುವ ಕಾರಣ ಇದು ಹಲವು ಕಾಲದಲ್ಲಿ ವಿಸ್ತಾರ ಗೊಂಡಿದೆ.

ಹಾನಗಲ್ಲಿನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಸ್ತಾರದಲ್ಲಿ ದೊಡ್ಡದಾದ ಹಾಗು ವಾಸ್ತು ವಿಭಿನ್ನ ವಾದ ದೇವಾಲಯವೆಂದರೆ ತಾರಕೇಶ್ವರ ದೇವಾಲ ಯ. ಚಾಲುಕ್ಯರ ಕಾಲದ ಅತೀ ದೊಡ್ಡ ದೇವಾಲ ಯವಾದ ಈ ದೇವಾಲಯ ಸುಮಾರು 150 ಆಡಿಗಳಷ್ಟು ವಿಸ್ತಾರವಾಗಿದೆ.  ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ವಿಶಾಲವಾದ ಮುಖಮಂಟಪ, ರಂಗಮಂಟಪ ಹಾಗು ನಂದಿ ಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ.   ಗರ್ಭಗುಡಿಯ ಬಾಗಿಲುವಾಡ ಪಂಚಶಾಖೆಯಿಂದ ಅಲಂಕೃತಗೊಂಡಿದ್ದು ಇಲ್ಲಿನ ನಾಗ ನಾಗಿಣಿ ಸಾಲುಗಳು ಹಾಗೂ ದಂಪತಿಗಳ ಸಾಲುಗಳು ಕಲಾತ್ಮಕವಾಗಿದೆ.

ದೇವಾಲಯದ ಅಂತರಾಳದ ಬಾಗಿಲುವಾಡ ಸಹ ಪಂಚ ಶಾಖೆಯಿಂದ ಅಲಂಕೃತವಾಗಿದ್ದು ಬಾಗಿಲು ವಾಡದಲ್ಲಿ ಎಂದಿನಂತೆ ಚಾಲುಕ್ಯರ ದೇವಾಲಯ ದಲ್ಲಿ ಕಾಣುವಂತೆ ತ್ರಿಮೂರ್ತಿ ತೋರಣವಿದೆ. ಮುಖಮಂಟಪದ ಮುನ್ನ ಇರುವ ಗೂಡುಮಂಟ ಪಕ್ಕೆ ಮೂರು ಪ್ರವೇಶ ದ್ವಾರಗಳಿದ್ದು, ಇಲ್ಲಿನ ಲಲಾಟದಲ್ಲಿ ಗಜಲಕ್ಷ್ಮೀ(ಪೂರ್ವ) ನಾಟ್ಯ ಗಣಪತಿ (ದಕ್ಷಿಣ) ಹಾಗೂ ಸರಸ್ವತಿ (ಉತ್ತರ) ನೋಡಬ ಹುದು. ಇಲ್ಲಿನ ದೇವ ಕೋಷ್ಟಕಗಳಲ್ಲಿ ವಿಷ್ಣು, ಬ್ರಹ್ಮ ಹಾಗೂ ಸೂರ್ಯನ ಶಿಲ್ಪ ನೋಡಬಹುದು.

ಇಲ್ಲಿನ ಅತ್ಯಂತ ಆಕರ್ಷಕವಾದ ಭಾಗವೆಂದರೆ ಮುಖ್ಯಮಂಟಪ. ಸುಮಾರು 64 ಆಡಿ ಉದ್ದದ ಈ ಮಂಟಪದಲ್ಲಿ 56 ಕಂಭಗಳಿದ್ದು ಅದರಲ್ಲಿ 28 ಕಂಬಗಳು ಸ್ವತಂತ್ರವಾಗಿ ಮಂಟಪದಲ್ಲಿವೆ ಇದೆ ಎಂದರೆ ಇದರ ವಿಸ್ತಾರತೆ ಗಮನಿಸಬಹುದು. ಇಲ್ಲಿನ ವಿತಾನದಲ್ಲಿ (ಭುವನೇಶ್ವರಿ) ವಿಶಾಲವಾದ ಸುಮಾರು 30 ಅಡಿಯಷ್ಟು ವಿಸ್ತಾರವಾಗಿದ್ದು ರಾಜ್ಯದ ದೇವಾಲಯಗಳಲ್ಲಿ ಅತಿ ದೊಡ್ಡದಾದ ದ್ದು. ಇಲ್ಲಿ ಘಾಂಸಾಕರ (ಕದಂಬ ನಾಗರ)ಶೈಲಿಯ ಶಿಖರವಿದ್ದು, ಈ ರೀತಿಯ ಶಿಖರವನ್ನು ಹೊಂದಿ ರುವ ಅಪುರೂಪವಾದ ದೇವಾಲಯ.ಮಂಟಪದ ಸುತ್ತಲೂ ವಿಶಾಲವಾದ ಕಕ್ಷಾಸನವಿದ್ದು ಇದರ ಹಿಂಬಾಗದಲ್ಲಿ ರಾಮಯಣ, ಮಹಾಭಾರತ ಹಾಗು ಬಾಗವತದ ಕೆತ್ತೆನೆ ನೋಡಬಹುದು. ದೇವಾಲಯಕ್ಕೆ ಸುಂದರ ಶಿಖರವಿದ್ದು ಹೊರಭಿತ್ತಿ ಯಲ್ಲಿ ದ್ರಾವಿಡ, ನಾಗರ ಹಾಗು ಭೂಮಿಜ ಮಾದರಿಯ. ಶಿಖರಗಳ ಮಾದರಿಗಳು ಕಂಡು ಬರುವುದು ವಿಷೇಶ. ಇನ್ನು ಶುಕನಾಸ ಭಾಗ ಮುಂಚಾಚಿರುವು ನೋಡಬಹುದು.

ಗಣೇಶ ದೇವಾಲಯ :

ಇನ್ನು ದೇವಾಲಯದ ಆವರಣದಲ್ಲಿ ಸುಂದರ ಗಣೇಶ ದೇವಾಲಯವಿದ್ದು ಈ ದೇವಾಲಯದ ಶಿಖರ ವಾಸ್ತು ಹಿನ್ನೆಲೆಯಲ್ಲಿ ಪ್ರಮುಖವಾದದ್ದು. ಇದರ ಶಿಖರವು ಶೇಖರಿ ನಾಗರ ಮಾದರಿಯ ಲ್ಲಿದ್ದು ಹಲವು ನಾಗರಿಶಿಖರಗಳು ಮೇಲೆ ಕಿರುದಾ ಗುತ್ತ ಶಿಖರವಾಗಿದ್ದು ಸುಮಾರು 25ಶಿಖರಗಳಿವೆ. ಸಮರಾಂಗಣ ಸೂತ್ರಧಾರದಲ್ಲಿನ ವಿಮಾನ ನಾಗರ ಶೈಲಿಯ ಈ ಶಿಖರ ರಾಜ್ಯದಲ್ಲಿ ಕಾಣ ಬರುವ ಅಪರೂಪದ ಈ ಮಾದರಿಯ ದೇವಾ ಲಯ.  ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಒಂಬತ್ತು ಅಂಕಣದ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾದ ಗಣಪತಿಯ ಶಿಲ್ಪವಿದೆ. ಇಲ್ಲಿನ ಗಣೇಶನ ಮೂರ್ತಿ ಹಳೆಯದು ಕಾಣೆಯಾದ ಕಾರಣ ಹೊಸದಾಗಿ ಇರಿಸಲಾದ ಮೂರ್ತಿ.ಗರ್ಭಗುಡಿಯಲ್ಲಿನ ಬಾಗಿಲುವಾಡದ ಕೆತ್ತೆನೆ ಸರಳವಾಗಿದೆ.

ಬಿಲ್ಲೇಶ್ವರ ದೇವಾಲಯ :

ಅತ್ಯಂತ ಸುಂದರವಾಗಿದ್ದ ಈ ದೇವಾಲಯದ ಉಲ್ಲೇಖ 1119 ರ ಕದಂಬರ ತೈಲಪದೇವನ ಶಾಸನದಲ್ಲಿ ನೋಡಬಹುದು. ನಂತರ ಕಾಲದಲ್ಲಿ ಕಾಳಮುಖರ ದೇವಾಲಯವಾಗಿಯೇ ಗುರುತಿಸಿ ಕೊಂಡಿದ್ದ ಈ ದೇವಾಲಯ ಕಾಲಾಂತರದಲ್ಲಿ ನಾಶವಾಗಿ ಈಗ ಗರ್ಭಗುಡಿ ಮಾತ್ರ ಉಳಿದಿದೆ. ಗರ್ಭಗುಡಿಯಲ್ಲಿ ಬೃಹತ್ ಶಿವಲಿಂಗವಿದ್ದು ಕಲ್ಯಾ ಣ ಚಾಲುಕ್ಯರ ಕಾಲದ ಬೃಹತ್ ಶಿವಲಿಂಗಗಳಲ್ಲಿ ಒಂದು.

ಇನ್ನು ಗರ್ಭಗುಡಿಯ ಬಾಗಿಲುವಾಡ ಪಂಚಶಾಖೆ ಯಿಂದ ಅತ್ಯಂತ ಕಲಾತ್ಮಕವಾಗಿ ಅಲಂಕೃತಗೊಂ ಡಿದ್ದು ದೇವಾಲಯದ ವೈಭವಕ್ಕೆ ಸಾಕ್ಷಿಯಾಗಿದೆ. ಪಂಚಶಾಖೆಯಲ್ಲಿನ ವ್ಯಾಳಿ,ಮಿಥುನ ಶಾಖೆ,ನಾಗ ನಾಗಿಣಿಯ ಶಾಖೆ ಸುಂದರವಾಗಿದ್ದು ಲಲಾಟ ದಲ್ಲಿ ಗಜಲಕ್ಷ್ಮೀ ಕೆತ್ತೆನೆ ಇದೆ.

ಜೈನ ದೇವಾಲಯ :

ಕೋಟೆ ಪರಿಸರದಲ್ಲಿರುವ ಈ ದೇವಾಲಯ ಗರ್ಭ ಗುಡಿ,ಅಂತರಾಳ ಹಾಗು ವಿಶಾಲವಾದ ಸಭಾಮಂ ಟಪವನ್ನು ಹೊಂದಿದೆ. ಇನ್ನು ಗರ್ಭಗುಡಿಯ ಲಲಾಟದಲ್ಲಿ ಜಿನಬಿಂಬವಿದ್ದು ಮಂಟಪದಲ್ಲಿನ 18 ಕಂಭಗಳಿದ್ದು, ಮಧ್ಯದ ನಾಲ್ಕು ಕಂಭಗಳು ಸುಂದರವಾಗಿ ಅಲಂಕೃತಗೊಂಡಿದೆ. ದೇವಾಲಯ ಕ್ಕೆ ಘಾಂಸನ ಮಾದರಿಯ (ಕದಂಬ ನಾಗರ) ಶಿಖರವಿದೆ.

ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು