ಪ್ರತಿಯೊಂದು ಜೀವಿಯು ತನ್ನ ಬೇಕು ಬೇಡಗಳ ಜೊತೆ ಜೀವನ ಸಾಗಿಸುತ್ತ, ಕೊನೆಗೆ ಪಂಚಭೂತ ಗಳಲ್ಲಿ ಲೀನವಾಗುತ್ತಾನೆ. ಈ ದೇಹದ ಆಯಸ್ಸು ನಾವು ಎಷ್ಟು ದಿನ ಚೈತನ್ಯದಿಂದ, ಕ್ರಿಯಾಶೀಲತೆ ಯಿಂದ ಇರುತ್ತೆವೆಯೋ ಅಲ್ಲಿಯ ತನಕ ಮಾತ್ರ. ಹಿರಿಯರು ಹೇಳುವಂತೆ “ನೀರ ಮೇಲಿನ ಗುಳ್ಳೆ ಯಂತೆ”. ಅದಕಾಗಿ ಕೈಲಾದಷ್ಟು ಸಹಾಯ, ಸಹಕಾರ ಮಾಡುತಿದ್ದರೆ ಅದಕ್ಕಿಂತ ಮಿಗಿಲಾದ ಕಾರ್ಯ ಇನ್ನೊಂದಿಲ್ಲ.ಹಾಗಾದರೆ ಯಾರಿಗೆ ದಾನ ಮಾಡಬೇಕು? ಎಂತಹ ದಾನ ಶ್ರೇಷ್ಠ? ಎಂಬ ಪ್ರಶ್ನೆ ಗಳನ್ನು ಮಕ್ಕಳು ಕೇಳಬಹುದು. ಹಸಿದು ಬಂದವ ರಿಗೆ ಉಣಬಡಿಸುವುದು ಪರ್ಯಾಯ ರೂಪ ಆಹಾರ.

ಆಹಾರವಿಲ್ಲದೆ ಜೀವ ಜಗತ್ತು ಇರಲು ಸಾಧ್ಯವಿಲ್ಲ. ಸರ್ವಜ್ಞನ ವಚನದಂತೆ,
ಅನ್ನದಾನಗಳಿಂದ |ಮುನ್ನ ದಾನಗಳಿಲ್ಲ | ಅರ್ಥದಲ್ಲಿ ಮಿಗಿಲು ಇನ್ನಿಲ್ಲ, ಜಗದೊಳಗೆ ಅನ್ನವೇ ಪ್ರಾಣ ಸರ್ವಜ್ಞ ||
ಅನ್ನದಾನಕ್ಕಿಂತ ಹೆಚ್ಚಿನ ದಾನಗಳು ಯಾವುದೂ ಇಲ್ಲ. ಜಗತ್ತಿನೊಳಗೆ ಅನ್ನಕ್ಕಿಂತಲೂ ಹೆಚ್ಚು ತೃಪ್ತಿ ಕರವಾದ ಎರಡನೆಯ ವಸ್ತು ಯಾವುದೂ ಇಲ್ಲ. ಯಾಕೆಂದರೆ ಎಲ್ಲಾ ಜೀವಿಗಳ ಪ್ರಾಣ ಅನ್ನವನ್ನೇ ಅವಲಂಬಿಸಿರುವುದು. ಹೀಗಾಗಿ ಶ್ರೇಷ್ಠತೆಗೆ ಮೊದ ಲಿಗೆ ಅನ್ನವೇ ಶ್ರೇಷ್ಠ.

“ಅನ್ನ ದಾನಂ ಸಮಂ ದಾನಂ ತ್ರಿಲೋಕೇಷು ನ ವಿಧತೇ”|-ಇದು ವೇದೋಕ್ತಿ.
ಅಂದರೆ, “ಅನ್ನದಾನಕ್ಕೆ ಸಮನಾದ ದಾನವು ಬೇರೊಂದಿಲ್ಲ”. ಅತ್ಯಂತ ಶ್ರೇಷ್ಟದಾನವು ಎಲ್ಲಾ ಮಾನವರ ಮೂಲಭೂತ ಅವಶ್ಯಕತೆ ಅನ್ನ. ಈ ವಿಶ್ವದ ಉತ್ಪತ್ತಿ ಮತ್ತು ಬೆಳವಣಿಗೆ ಅನ್ನವನ್ನು ಆಧರಿಸಿದೆ. ವೇದಗಳಲ್ಲಿ ಹೇಳಿದಂತೆ ಹಸಿದವರಿಗೆ ಮಾಡುವ ಅನ್ನದಾನದಿಂದ ಪುಣ್ಯಲೋಕ ಪ್ರಾಪ್ತಿ ಯಾಗುವುದು. ಸಕಲ ಜೀವರಾಶಿಗಳಿಗೆ ಶಕ್ತಿಯನ್ನ ಕೊಡುವುದೇ ಅನ್ನ. ಅದಕ್ಕಾಗಿಯೇ ಶಂಕರಾಚಾ ರ್ಯರು ಶಕ್ತಿಸ್ವರೂಪಿಣಿಯಾದ ಜಗನ್ಮಾತೆಯನ್ನು
‘ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣ ವಲ್ಲಭೇ’ ಎಂದು ಸ್ತುತಿಸಿದ್ದಾರೆ.

ರೈತ ಜೀವಕೋಟಿಗೆ ಅನ್ನವ ನೀಡುವವನು. ಕಷ್ಟ ಪಟ್ಟು ಬೆಳೆದ ಧಾನ್ಯಗಳನ್ನು ಆಹಾರವಾಗಿ ಸ್ವೀಕರಿ ಸುವಾಗ ಅದನು ಅವಶ್ಯಕತೆಗಿಂತ ಹೆಚ್ಚುಎಂಜಲು ಮಾಡಿ ಹಾಳುಮಾಡದಂತೆ ಎಚ್ಚರಿಕೆವಹಿಸಬೇಕು. ಮಕ್ಕಳಿಗೆ ಪಾಲಕರು ಆಹಾರದ ಮಹತ್ವವನ್ನು ತಿಳಿಸುವುದು ಅನಿವಾರ್ಯ..ಅದೆಷ್ಟೋ ಮಕ್ಕಳಿಗೆ ಆಹಾರಸಿಗದೇ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ. ರೈತನೊಬ್ಬ ಭೂಮಿಯನ್ನು ಹದ ಮಾಡದಿದ್ದರೆ ನಮ್ಮೆಲ್ಲರ ಬದುಕು ಸಂಕಷ್ಟಕ್ಕೆ ಸಿಲುಕುವುದು ಖಂಡಿತ. ಮಹಾಭಾರತದಲ್ಲಿ ಶ್ರೀಕೃಷ್ಣನು (ಶಾಂತಿ ಪರ್ವದಲ್ಲಿ) ಭೀಷ್ಮನಿಗೆ ದಾನದ ಮಹತ್ವದ ಬಗ್ಗೆ ಈ ರೀತಿ ಹೇಳುತ್ತಾನೆ:
‘ಈ ಚರಾಚರ ಪ್ರಪಂಚವು ಅನ್ನದಿಂದ ಆಧರಿಸಲ್ಪಟ್ಟಿದೆ. ಯಾವನು ಆಹಾರವನ್ನು ಕೊಡುತ್ತಾನೋ ಅವನು ಜೀವನವನ್ನು ಕೊಟ್ಟಂತೆ”.
ಆದ್ದರಿಂದ ಯಾರು ಈ ಲೋಕ ಮತ್ತು ಪರಲೋ ಕದಲ್ಲಿ ಸುಖದಿಂದ ಇರಲು ಬಯಸುತ್ತಾನೋ ಅವನು ಅನ್ನ(ಆಹಾರ)ವನ್ನು ದಾನ ಮಾಡಲು ಪ್ರಯತ್ನಿಸಬೇಕು.ಈ ಆಹಾರವನ್ನು ಸೌಜನ್ಯತೆ ಯಿಂದ ಪ್ರಾಯಸ್ಥರಿಗೆ, ಅಶಕ್ತರಿಗೆ, ಮಕ್ಕಳಿಗೆ ಮತ್ತು ಪ್ರಯಾಣಿಕರಿಗೆ ಕೊಡಬೇಕು.
ರಸ್ತೆಯಂಚಲಿ ಭಿಕ್ಷೆ ಬೇಡುವವರನ್ನು ಕರುಳು ಚುರ್ ಎನ್ನಿಸಿ ಅವರ ಭಿಕ್ಷಾಪಾತ್ರೆಗೆ ಚಿಲ್ಲರೆ ಅಥವಾ ನೋಟನ್ನು ಹಾಕುತ್ತೆವೆ. ಕೆಲವರು ಅವರ ನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಅವರಲ್ಲಿ ಕೆಲವರು ನಿಸ್ಸಾಯಕರು, ವಯೋವೃದ್ದರು ಅಂತ ವರಿಗೆ ಸಹಾಯ ಮಾಡಬೇಕು ಎಂಬ ಮೌಲ್ಯವನ್ನ ಮಕ್ಕಳಿಗೆ ಕಲಿಸಿ ಕೊಡುವುದು ನಮ್ಮ ಕರ್ತವ್ಯ. ಮೈ ಕೈ ಗಟ್ಟಿ ಮುಟ್ಟಾಗಿದ್ದು, ದುಡಿಯದೇ ಭಿಕ್ಷೆ ಬೇಡುವರಿಗೆ ಕೆಲಸ ಮಾಡಲು ಹಾಗೂ ದುಡಿದು ತಿನ್ನಲು ಹೇಳುವುದರೊಂದಿಗೆ ದಾನಗಳು ನಿಜಾ ರ್ಥದಲ್ಲಿ ಸಲ್ಲಬೇಕಾದವರಿಗೆ ಸಲ್ಲಿದರೆ ಮಾತ್ರ ಆ ದಾನಕ್ಕೊಂದು ಬೆಲೆ.

ವರಾಹ ಪುರಾಣದಲ್ಲಿ ಈ ರೀತಿ ಹೇಳಿದೆ :
“ಯಾರು ಆಹಾರವನ್ನು ದಾನ ಮಾಡುತ್ತಾನೋ ಅವನು ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ದಾನ ಮಾಡಿದಂತೆ”.
ಯಾರೆ ಆಗಲಿ ತಾವು ಉತ್ತಿಬಿತ್ತಿ ಬೆಳೆಯೊ ಬೆಳೆ ಯನ್ನು ಶ್ರದ್ಧೆಯಿಂದ ಬೆಳೆದಾಗ ಅದರಿಂದ ಸಿಗುವ ಫಲ ದೇವರ ಚಿತ್ತ.ಹೀಗಿರುವಾಗ ದೇಶದ ಬೆನ್ನೆಲುಬಾಗುವ ಮಕ್ಕ ಳು ನಮ್ಮ ಕುಟುಂಬವೆಂ ಬ ಹೊಲದಲ್ಲಿ ಚಿಗುರಿದ ಬೆಳೆ ಆ ಬೆಳೆ ಬೆಳೆದು ಸಕ್ರಿಯವಾಗಿ ದೇಶದ ಮೌಲ್ಯ ಬೆಳಗುವ ಮಗು ವಾಗುವತ್ತ ನಾವು ನೀಡುವ ಸಂಸ್ಕಾರವೆಂಬ ಸಾವಯವ ಗೊಬ್ಬರ ಮುಖ್ಯವಾಗುತ್ತದೆ. ಅದು ನಮ್ಮಲ್ಲಿಲ್ಲವೆಂದರೆ ನಮ್ಮಮಕ್ಕಳು ಪ್ರತಿಭಾನ್ವಿತ ರಾಗುವುದು ಯಾವಾಗ? ಸಮಾಜದ ಮೂಲ ಕೊಂಡಿಯೆ ಕುಟುಂಬ. ಭಗವದ್ಗೀತೆಯಲ್ಲಿ:
“ಅನ್ನಾತ್ ಭವಂತಿ ಭೂತಾನಿ”
ಎಲ್ಲಾ ಜೀವಿಗಳು ಅನ್ನದಿಂದ ವಿಕಾಸವಾಗುತ್ತವೆ, ಎಲ್ಲಾ ದೇವಾನುದೇವತೆಗಳು ಕ್ರಮಬದ್ಧವಾದ ಅನ್ನದಾನದಿಂದ ಸಂಪ್ರೀತರಾಗುತ್ತಾರೆ ಎಂದು ಹೇಳಲಾಗಿದೆ.

ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗದಂತೆ ಜಾಗೃತರಾ ಗುವುದು ನಮ್ಮಕರ್ತವ್ಯ.ಇದರಿಂದಾಗಿ ಬದುಕಲು ಪಂಚಭೂತಗಳು ಎಷ್ಟು ಮುಖ್ಯವೆಂಬುದನ್ನು ಅರಿತಂತಾಗುತ್ತದೆ. “ಅನ್ನದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ” ಆಹಾರ ನಿರ್ಲಕ್ಷ್ಯ ಮಾಡಿದರೆ ಎಲ್ಲವು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ದೇಹವೆಂಬ ಇಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಯಾವುದು ಅವಶ್ಯಕ ಎಂಬುದು ಸ್ಪಷ್ಟವಾಗುತ್ತದೆ.
ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ,ಯಲ್ಲಾಪೂರ
Super
LikeLiked by 1 person
ಮನಮುಟ್ಟುವಂತೆ ಬರೆದಿದ್ದೀರ.. ಅಭಿನಂದನೆಗಳು ಮೇಡಂ..
LikeLike
ಅನ್ನದಾನ ದ ಮಹತ್ವವನ್ನು ಬಿಂಬಿಸುವ ಈ ಲೇಖನ ವೂ ತುಂಬಾ ಚೆನ್ನಾಗಿ ಮೂಡಿಬಂದಿದೆ ರೀ 🙏🏻🙏🏻 ಓದುಗರಿಗೆ ತಮ್ಮ ಲೇಖನ ಓದೋದು ಒಂತರಾ ಹಬ್ಬಾ ಕಣ್ರೀ.
LikeLike
ಅನ್ನದ ಮಹತ್ವ ಏನೆಂಬುದನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಿರಾ ಮೆಡಮ್
ಧನ್ಯವಾದಗಳು.🌹🙏
LikeLiked by 1 person
Annada mahatwa tilisiddu tumbhane chennagide. Upayukta lekhana super👍👍👍👍👍👍👍👍👍👍👍👍👍👍
LikeLike
ಅನ್ನ ದಾನದ ಮಹತ್ವ ಪದಗಳ ರೂಪದಲ್ಲಿ ಮನಮುಟ್ಟುವಂತೆ ಮೂಡಿ ಬಂದಿದೆ, ಕೃಷಿಕನ ತ್ಯಾಗವನ್ನ ಮತ್ತು ಶ್ರಮವನ್ನ ಅಕ್ಷರಗಳಲ್ಲಿ ಬಿತ್ತಿ ಪದಗಳನ್ನ ಜೋಡಿಸಿ ಹಸಿರು ಸಾಲುಗಳಂತೆ ಮೂಡಿಸಿದ ಮೇಡಂ ಅವರಿಗೆ 🙏ನಿಮ್ಮ ಬರವಣಿಗೆ ಅದ್ಬುತ 👌
LikeLike
ಸೂಪರ್ ಮೇಡಂ
LikeLiked by 1 person