ಸ್ನೇಹಾ‌‌ ಏಳು ಎಷ್ಟೊತ್ತು ಮಲಗೋದು? ಸೂರ್ಯಾ ಬಂದು ಕಣ್ಣ ಕುಕ್ಕಿದರೂ ಏಳಾಕ ಆಗುದಿಲ್ಲ ಅಂದ್ರ ಎನೈತಿ? ಹೊದಿ‌ಕೆಯನ್ನು ಏಳೆದೆ…ಅಮ್ಮಾ ಇನ್ನು ಮಲಗಬೇಕು‌ ಅಷ್ಟ ಬೇ‌ಗ ಎದ್ದು ಎನ್ಮಾಡಲಿ? ಪ್ಲೀಸ್ ಹತ್ತು ನಿಮಿಷ ಬಿಡಮ್ಮಾ ಎಂದು ನನ್ನನ್ನು ತನ್ನತ್ತ ಏಳಕೊಂಡು ಮಲಗಿಸಿ ಅಪ್ಪಿಕೊಂ‌ಡ‌ ಮಗ‌‌ ಳನ್ನು ಬಯ್ಯಲೋ ಬಡಿಯಲೋತಿಳಿಯದೇ ಮೆಲ್ಲಗೆ ತಲೆ ಸವರುತ್ತ ಏಳಮ್ಮ ಜಾಣಮರಿ ಬೇಗ ಎದ್ದುಸ್ವಲ್ಪ ವ್ಯಾಯಾಮ ಮಾಡು, ಯೋಗ ಮಾಡು, ಮನಸ್ಸು ಹಗುರಾಗುತ್ತೆ.  ಹೆ‌ಣ್ಣುಮಕ್ಕಳು ದಿನದ ಎಲ್ಲ ಸಮ‌ಯದಲ್ಲಿ ಎಚ್ಚರವಾಗಿರಬೇಕು ಯಾಕೆಂದರೆ ನೀವು ಚೈತನ್ಯದ ಪ್ರತೀಕ ಎನ್ನುತ್ತ ಎಬ್ಬಿಸಿದೆ.

ಅಮ್ಮಾ ದಿನ ಕಳೆಯೋದು ಬೋರು, ಗೆಳತಿ ಯರ ಮನೆಗೂ ಹೋಗೋ ಹಾಗಿಲ್ಲ. ಏಯ್‌‌ ಯಾಕಮ್ಮ ಎಷ್ಟ ಕೆಲಸಾ ಇದೆ ನೋಡು ಬೇಗ ತಿಂಡಿ ತಿಂದು ಕೈ ತೋಟದಲ್ಲಿ ಗಿಡಕ್ಕಿಂತ ಕಸ ಚೆನ್ನಾಗಿ ಬೆಳೆದಿದೆ ಅದನ್ನು ತಗೆಯೋಣ. ಒಂದಿಷ್ಟು ತರಕಾರಿ ಬೀಜ ಹಾಕೋಣ. ಅಲ್ಲಲ್ಲಿ ಪಕ್ಷಿಗಳಿಗೆ ನೀರು‌ ಇಡೋಣ. ನೋಡು‌ ನೀ ನೆಟ್ಟ ಮಲ್ಲಿಗೆ ಬಳ್ಳಿ ಹೂ ಬಿಟ್ಟಿದೆ ಅದರ ಆರೈಕೆ ಮಾಡೋದು ಬಿಟ್ಟು ಬರೀ ನಿದ್ದೆಗೆ ಜಾರಿದರೆ ಆದಿತಾ? ಮಗಳು ಹೌದಮ್ಮಾ ಚೊಲೋ ನೆನಪ ಮಾಡಿದಿ ನೋಡು. ನನಗ ಪ್ರಾಜೆಕ್ಟ್ ವರ್ಕ್ ಅದ ಎನ್ನುತ್ತ ಗಾರ್ಡನ್ ಕಡೆ ಓಡಿದ ಪುಟ್ಟ ಮಗಳ ಕಂಡು ಖುಷಿಯಾಯಿತು.

ಮಕ್ಕಳಿಗೆ ಕ್ರಿಯಾಶೀಲ ಮನೋಭಾವ ಬಿತ್ತುವ ಕೆಲಸ ಪಾ ಲಕರಿಂದಾಗಬೇಕು. ಪರಿಸರ ಜಾಗೃತಿ ಮೂಡಿಸುವುದಾದ ರೂ ಹೇಗೆ? ಎಲ್ಲವನ್ನು  ಮೊಬೈಲ್, ಪುಸ್ತಕದಿಂದ ಲೇ ಸಾಧ್ಯ ಎಂಬುದನ್ನು ಬಿಟ್ಟು ಇತರ ಕ್ರಿಯಾತ್ಮಕ ಚಟುವಟಿಕೆಯಿಂ‌ದ ಸಾಧ್ಯ ಎಂಬುದನ್ನು  ಮೊದಲು  ನಾವು   ಅರಿತಿರ ಬೇಕು. ಜ್ಞಾನ ಎಂಬುದು ಪ್ರಯತ್ನಶೀಲನ ಸೊತ್ತು.ನಮ್ಮ ಮಕ್ಕಳಿಗೆ ಕಷ್ಟದ ಅರಿವಿಲ್ಲ. ಅರಿವಾಗಲು ನಾವು ಬಿಡುತ್ತಿಲ್ಲ.

ಚಿಮಣಿಯ ಬೆಳಕಿನಲ್ಲಿ ಓದಿದ ನೆನಪು ಕೆಲ ಪಾಲಕರಿಗೆ ಇರಬಹುದು.  ಅಥವಾ    ಬೀದಿ ದೀಪದ ಬೆಳಕಿನಲ್ಲಿ ಓದಿದ ಮಹಾನುಭಾವ ರ ಜೀವನದ ಕೆಲ ಅಮೂಲ್ಯ ಅಂಶಗಳ ಬಗ್ಗೆ ಮಕ್ಕಳಿಗೆ  ತಿಳಿಸಿದಾಗ  ಆಶ್ಚರ್ಯಪಡಬಹು ದು. ಅನಾನುಕೂಲ ಪರಿಸ್ಥಿತಿಯಲ್ಲಿ ಅದನ್ನು ಮೆಟ್ಟಿ  ಮೇಲೆಳುವ  ಹುಮ್ಮಸ್ಸು, ತವಕ ಕೆಲವೇ  ಕೆಲವು  ವ್ಯಕ್ತಿಗಳಲ್ಲಿ   ಜಾಗೃತವಾಗಿ ದ್ದಕ್ಕೆ ಅಂತಹ ಮಹಾನುಭಾವರು ಅವಿಸ್ಮರ ಣೀಯವಾಗಿ ನಮ್ಮ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ನಿಂತಿದ್ದಾರೆ. ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ, ಕೆ.ಆರ್ ನಾಯಾರಣ ರಾಷ್ಟ್ರಪತಿಗಳಾಗಿ ಅತ್ಯುನ್ನತ ಹುದ್ದೆಗೇರಿದ್ದ ನ್ನು ಮರೆಯುವಂತಿಲ್ಲ.

ಯಾವ ಮಗುವಿನಲ್ಲಿ ಯಾವ ಸಾಮರ್ಥ್ಯ ವಿದೆ. ದೈನಂದಿನ ಚಟುವಟಿಕೆಗಳು ಮನೆಯ ವಾತಾವರಣ, ಇಚ್ಛಾಶಕ್ತಿ, ಮಾಡು    ನಿನ್ನ ಕೈಯಲ್ಲಿ ಇದು ಆಗುತ್ತೆ ಎಂಬ ಆತ್ಮವಿಶ್ವಾಸ ತುಂಬಿದ ಮಾತುಗಳು ಪ್ರತಿಕ್ಷಣ ಗಡಿಯಾರ ದಂತೆ ಎಚ್ಚರಿಸುತ್ತ ತಿರುಗುತ್ತಿದ್ದರೆ ಅದರ ಪರಿಣಾಮ ಖಂಡಿತ ಮಗುವಿನಮೇಲಾಗಲು ಸಾಧ್ಯ. ಸುಳ್ಳು ಹೇಳುವುದು ಅಪರಾಧ. ಒಮ್ಮೆ ತರಗತಿಯಲ್ಲಿ ಒಂದು ಮಗು ಅಳು ತ್ತಿತ್ತು.  ಉಳಿದ  ಮಕ್ಕಳು  ಅಳುವ.  ಮಗು ವನ್ನು ದಿಟ್ಟಿಸುತ್ತಿದ್ದವು. ಯಾಕೆ ಅಳುತ್ತಿರುವೆ ಪುಟ್ಟ ಅಂದ್ರ. ಆ ಮಗು ಮತ್ತು ಜೋರಾಗಿ ಅಳಲಾರಂಭಿಸಿತು. ನನಗೂ   ಹೆದರಿಕೆಯಾ ಗಿತ್ತು‌, ಏನಾಯಿತೆಂಬ ಭಯ. ಅದು ಮೆಲ್ಲಗೆ ಎದುರಿಗಿದ್ದವರೆಡೆಗೆ ಬೆರಳು ತೋರಿಸುತ್ತ, ನನ್ನ ಪೆನ್ಸಿಲ್ ತಗೊಂಡಿದ್ದಾರೆಂದು ಆರೋ ಪಿಸಿತು. ಒಂದೇ ತೆರನಾದ ಪೆನ್ಸಿಲ್‌ ಬಳಕೆ ಇದಕ್ಕೆ‌ ಕಾರಣ.

ಅದರ ಪಾಠಿಚೀಲದಲ್ಲಿ ಇದ್ದುದನ್ನು ಕಂಡು ಸುಮ್ಮನಾಯಿ ತು.ಅಥವಾ ನಾನು ಅದರ ಮಾತೆ  ಸತ್ಯವೆಂದು  ಆ  ಮಗುವಿನಿಂದ ಪೆನ್ಸಿಲ್ ಕೊಡಿಸಿದ್ದರೆ ಏನಾಗುತ್ತಿತ್ತು. ಹಾಗೇ  ಪಾಲಕರಾದವರೂ ಮಕ್ಕಳ ತಪ್ಪುಗಳಿಗೆ ಪ್ರೋತ್ಸಾಹ ನೀಡದೇಅಥವಾ ತನ್ನಮಗುವೇ ಶ್ರೇಷ್ಠ ಎಂಬ ತಪ್ಪನ್ನು ದೃಢಿ ಕರಿಸುವಂತೆ ವರ್ತಿಸುವ ಮನೋಭಾವ ತ್ಯಜಿಸಿದರೆ ಮಗುವಿಗೂ ತನ್ನ ತಪ್ಪು ಅರಿ ವಾಗುವಂತೆ ಮಾಡುವ ಸಂಕಲ್ಪ ಮಾಡ ಬೇಕು.

ಪ್ರಕೃತಿ,  ಸೌರಮಂಡಲ,   ಜೀವರಾಶಿಗಳ ಸುಧೀರ್ಘ  ಪರ್ಯಟನ  ಹೊಸ    ಜೀವ ಜಗತ್ತಿಗೆ ನಾಂದಿಹಾಡಲು ಪ್ರೇರಣೆ. ನಾವು ಗಳಿಸಿದ್ದೆಲ್ಲವೂ ಇಲ್ಲೆ ಬಿಟ್ಟು ಹೋಗುವಸತ್ಯ. ಆದಷ್ಟು ಪ್ರಕೃತಿಗೆ ಶರಣಾಗುವ, ಪ್ರೀತಿಸುವ ಗುಣಗಳನ್ನು  ಬೆಳೆಸುವುದು  ನಮ್ಮ  ಆದ್ಯ ಕರ್ತವ್ಯ. ಮುಂದಿನ ಪೀಳಿಗೆಯೆಂದರೆ ನಮ್ಮ ಮಕ್ಕಳು. ಅವರ   ಭವಿಷ್ಯ   ಉಜ್ವಲಗೊಳಿ ಸುವ ಕನಸು ಇನ್ನೂ ಕಾಣದಿದ್ದರೆಬದುಕಿದ್ದು ವ್ಯರ್ಥ. “ವಸುದೈವ್ ಕುಟುಂಬಕಂ” ಎಂದು, ಕವಿಋಷಿ ಕುವೆಂಪುರವರ  “ವಿಶ್ವಮಾನವ”  ಸಂದೇಶ  ಅರಿತಷ್ಟು ಬದುಕಿದೆ. ಮಕ್ಕಳಿಗೆ ವರ್ಗಾವಣೆಯಾದಷ್ಟು ನಾವು ಬದುಕಿದ್ದು ಸಾರ್ಥಕ…

✍️ಶ್ರೀಮತಿ.ಶಿವಲೀಲಾ ಹುಣಸಗಿ
   ಶಿಕ್ಷಕಿ,ಯಲ್ಲಾಪೂರ