ಬೈಕು ಕೊಡಿಸಲಿಲ್ಲವೆಂದು
ಬೈದುಕೊಳ್ಳುವ ಮಗನಿಗೆ
ಒಡೆದ ಹಿಮ್ಮಡಿಗಳ..
ಅಪ್ಪನ ಬರಿಗಾಲುಗಳು
ಕಾಣುವುದೇ ಇಲ್ಲ.!
ಮೊಬೈಲು ತರಲಿಲ್ಲವೆಂದು
ಮುನಿಸಿಕೊಳ್ಳುವ ಮಗಳಿಗೆ
ಅಪ್ಪನ ಕನ್ನಡಕದ
ಸೀಳುಬಿಟ್ಟ ಗಾಜುಗಳು
ಕಾಣುವುದೇ ಇಲ್ಲ.!
ರಜೆಯಲ್ಲಿ ನಮ್ಮೊಂದಿಗೆ
ಸುತ್ತಲು ಬರಲಿಲ್ಲವೆಂದು
ಕಾಲ ಕಳೆಯಲಿಲ್ಲವೆಂದು
ಕೋಪಿಸಿಕೊಳ್ಳುವ ಮಕ್ಕಳಿಗೆ..
ಕಾಲದ ಪರಿವೆಯಿಲ್ಲದೆ
ರಜೆ ಹಾಕದೇ ದುಡಿಯುವ
ಅಪ್ಪನ ಅಸಹಾಯಕತೆ
ಅರ್ಥವಾಗುವುದೇ ಇಲ್ಲ.!
🔆🔆🔆
✍️ ಎ.ಎನ್.ರಮೇಶ್. ಗುಬ್ಬಿ.

ನಿಜ ಮಕ್ಕಳ ಭಾವನೆ ತಮಗಾಗಿ ತಮ್ಮ ಕೆಲಸಕ್ಕಾಗಿ ಪಾಲಕರು ಹುಟ್ಟಿದ್ದಾರೆ ಎಂಬಂತಿರುತ್ತದೆ.
LikeLike