ಜಗದಾದಿ ಶಕ್ತಿಯೊಳು
ಸಾಧಕನ ಹೃದಯದಲಿ
ಜ್ಞಾನ ಬೀಜವನು
ಬಿತ್ತಿದ ಶಿವ

ಭ್ರಾಂತು ಭೀತಿ ಮಾಯಾ
ಪಾಶ ಅಂಧಕಾರದ
ಸುಳಿಯ ಪ್ರವಾಹದಲಿ
ಈಜಲು ಕಲಿಸಿದ
ಅಂಬಿಗ

ಸಾರುವ ದನಿ ‌‌‌ ‌‌‌‌‌‌ ತೊದಲು ಮಾತಾದಾಗ ಪ್ರೀತಿಯೊಳು ಸವಿಗಾನವನುಲಿವ ವೀಣೆ

ಬಿಕ್ಕಿ ಬಿಕ್ಕಿ ಅತ್ತು
ಭಾವಗಳು ಜಡವಾದಾಗ
ಪ್ರೀತಿ ರಸಾನುಭೂತಿಯ
ಪಾಕ ಉಣಿಸಿದ
ಅಮ್ಮ

ಸಂಜೆ ಮಳೆಯ ನೆನೆದು ಹಿಮದಚಳಿಯಲಿ ನಿಂತಾಗ ‌‌‌‌ ಹೊಂಬಿಸಿಲು ಎರಚಿದ

ರವಿತೇಜ

ಆಕಾಶ ಪಾತಾಳ
ಎಲ್ಲೆ ಮೀರಿದ ಶಕ್ತಿ
ಅಕ್ಷಯ ಪಾತ್ರೆ
ಜಗವ ಬೆಳಗಿಸಿ
ಮನೆಯ ತುಂಬಿಸಿದ
ದೀಪ
ನನ್ನ ಗುರು

**** ‌——ಶ್ರೀ ಪ್ರಕಾಶ.ಬಿ
ಸಹಾಯಕ‌ ಪ್ರಾಧ್ಯಾಪಕರು
ಸಪ್ರದ ಕಾಲೇಜು ಶಿರಸಿ