ಹೇ! ಕಪ್ಪು ಹುಡುಗ
ನೀನೆಂದರೆ ನನಗ್ಯಾಕೊ
‘ಆ’ ಪರಿ ಮೈ ನಡುಕ!?
ಎದೆಯೊಳುಟ್ಟಿದ ಪ್ರೀತಿ
ಗಂಟಲೊಳು ಸಿಕ್ಕು
ಒದ್ದಾಡಿದ ರೀತಿ
ಹೊರ ಬಾರದೆ ನನ್ನೊಳಗೆ
ಉಳಿದಿದ್ದು ಮಾತ್ರ ಅನೀತಿ
ಹಾಲಿನಂತಿದ್ದವರೆಲ್ಲ
ಹಲಾಹಲದಂತೆ ಕಂಡರಲ್ಲ
ಕಪ್ಪುಶಿಲೆಯಂತಿದ್ದ ನೀನು ಮಾತ್ರ
ಚೆಲುವಾಮೃತವಾದೆಯಲ್ಲ
ಆದರೂ! ನೀನೆಂದರೆ
ನನಗ್ಯಾಕೊ ಬಲುಭೀತಿ!
ಆದಾಗಿಯೂ ನೀ ಮಾಡಿರುವೆ
ನನ್ನ ಮನದೊಲದಲ್ಲಿ
ಪ್ರೇಮದ ಪಾತಿ
ಈಗಲಾದರು ನಾವಾಗೋಣವೇ
ಬಾಳಸಂಗಾತಿ!?
ಶಿವಮೊಗ್ಗ ಎಂ ಸುಮಿತ್ರ

ಕವಿತೆಯ ಒಂದೊಂದು ಸಾಲುಗಳು ಅರ್ಥಗರ್ಭಿತವಾಗಿ
LikeLike