ಕ್ಯಾಲೆಂಡರು ಬದಲಾದರಲ್ಲ ಬದಲಾಗಬೇಕು ಹಾದಿ
ಬಾಗಿಲು ಮುಚ್ಚಿ ತೆರೆದರಲ್ಲ ಗೆಲುವಾಗಬೇಕು ಹಾದಿ

ಕಪ್ಪು ಬಿಳುಪು‌ ಮೋಡ ಚಲಿಸುವ ಆಸೆ ಚಂದಿರ
ಕತ್ತಲು ಕರಗಿ ಬೆಳಕಾದರಲ್ಲ ವರವಾಗಬೇಕು ಹಾದಿ

ಹಳೆ ಹೊಸ ದುಃಖ ಸಂತಸ ಎದುರು ಬದುರು ದಿನಾ
ಸವಿ ನೋಡದೆ ಹೋದರಲ್ಲ ಮಧುವಾಗಬೇಕು ಹಾದಿ

ಭೂತದ ಗಲಾಟೆ ವರ್ತಮಾನ ಕುದುರೆ ಭವಿಷ್ಯ ಕಣ್ಣು
ನೋಡದೆ ಹೋದರಲ್ಲ ಸಂಯಮವಾಗಬೇಕು ಹಾದಿ

ಜಾಲಿ ಗೊತ್ತಿದ್ದ ನೋವು ಗೊತ್ತಿಲ್ಲದ ನೋವಿಗಿಂತ ಹೆಚ್ಚು
ಬರೀ ಶಪಥ ಮಾಡಿದರಲ್ಲ ಜಂಗಮವಾಗಬೇಕು ಹಾದಿ

ನೂತನ ಸಂವತ್ಸರ ೨೦೨೫ ರ ಹಾರ್ದಿಕ ಶುಭಾಶಯಗಳು

✍️ವೇಣು ಜಾಲಿಬೆಂಚಿ
ರಾಯಚೂರು.