ಭೂರಮೆಯ ಬೆರಗು
ಗಗನದಂಚಿನ ಸೆರಗು
ಹೊದ್ದು ಮಲಗಿದೆ
ಸರಹದ್ದು ಮೀರಿ ಆಲಂಗಿಸಿದೆ.
ಗುಡ್ಡ ಬೆಟ್ಟ ನದಿ ತೊರೆಗಳು
ಕಣಿವೆ ಕಮರಿ ಸಾಲುಗಳು
ಬವಣೆ ನೀಗಲು
ತರ ತರದ ಗಡ್ಡೆ ಗೊಂಚಲು.
ಬಾನ ತೆರದಲಿ ಚಿಕ್ಕೆಗಳು
ಹೂವು ಹಣ್ಣು ಗಿಡಗಳು
ಚೆಲುವು ಒಲವು ಗಾನ
ಕೀಟ ಸಂಗ್ರಹ ತಾಣ.
ಬೆಳ್ಳಿ ಮೋಡದ ಸಾಲು
ಹನಿಯ ಸಿಂಚನದಿ ದಾಪುಗಾಲು
ರಮ್ಯ ಮನೋಹರ
ಸೃಷ್ಟಿ ಸೊಬಗು ನಾನಾ ತರ
ದಿನಕರನ ಪ್ರಭಾವಳಿ
ಇಳೆಯೊಡಲ ದೀಪಾವಳಿ
ಬೆಟ್ಟ ಗಂವರಗಳ ನಡುವೆ
ಬಟ್ಟ ಬಯಲಿನ ಗೊಡವೆ.
ಮಹೋನ್ನತ ಶಿಖರ
ಹಚ್ಚ ಹಸಿರಿನ ಶಿಶಿರ
ತಿರುವುಗಳ ಚಾಚಿ
ಮಣ್ಣ ಕಣ ಕಣ ರಂಗೇರಿದೆ ನಾಚಿ.
✍️ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು
