ಸೃಷ್ಟಿಯ ಸೊಬಗು
ದೃಷ್ಟಿಯ ಔತಣ
ಸಮೃದ್ಧಿಯ ರಸ ತಾಣ
ಸಹ್ಯಾದ್ರಿಯ ಮಡಿಲು.

ಹಚ್ಚ ಹಸಿರಿನ ವನಸಿರಿ
ಸ್ವಚ್ಛ ದಿಗಂತದ ಕೈ ಸೆರೆ
ಖಗ ಮೃಗ ಪಕ್ಷಿ ಪ್ರಪಂಚ
ವನೌಷಧಿಯ ಒಡಲು.

ಜಲಲ ಧಾರೆಯ ಹಿಮ್ಮೇಳ
ಬೆಟ್ಟ ಕಂದಕದ ಸುರುಳಿ
ಸುಂದರ ಸೊಬಗಿನ ಐಸಿರಿ
ಸಾಧು ಸಂತರ ತೇಜಸ್ಸಿನ ಕಡಲು.

ರಮ್ಯ ನೋಟ ಚಂದದಿ
ಅಗಮ್ಯ ಅಪ್ರಮಾಣ ಸಂಪತ್ತು
ಜೀವ ಸಂಕುಲದ ಸ್ವತ್ತು
ನೆಮ್ಮದಿಯ ಬದುಕು ಹರಡಲು.

ನಿತ್ಯ ಹರಿದ್ವರ್ಣ ವನದ ವೈಯ್ಯಾರ
ವೈವಿಧ್ಯತೆಯ ಸರಣಿ
ಶಾಂತಿನಿಕೇತನಕೆ ಜನ್ಮ ಧಾತೆ
ಸಾಹಿತ್ಯ ಸಂಸ್ಕೃತಿಯ ಅರಿವು ಮೂಡಿಸಲು.

ಉಳಿಸಿ ಬೆಳೆಸುವ
ನಾಳೆಯ ಜೀವನಕೆ
ಜಾಗೃತಿಯ ಕಹಳೆ ಮೊಳಗಿಸಿ
ಇರಲಿ ಅಮೂಲ್ಯ ಆಸ್ತಿಯ ಕಾಪಾಡಲು.

✍️ರೇಷ್ಮಾ ಕಂದಕೂರ
ಸಿಂಧನೂರ