ಮನೆಯೊಳಗೆ
ಮೂರ್ನಾಲ್ಕು
ದೀಪ ಹಚ್ಚಿದೆ..
ಮನೆಯಷ್ಟೇ
ಕೋರೈಸಿತು.!

ಬೀದಿಯಲಿ
ಸಾಲು ಸಾಲು
ದೀಪ ಹಚ್ಚಿದೆ..
ಬೀದಿಯಷ್ಟೇ
ಝಗಮಗಿಸಿತು.!

ಮನದಂಗಳದಿ
ಒಂದೇ ಒಂದು
ದೀಪ ಹಚ್ಚಿದೆ…
ಜಗವೆಲ್ಲಾ
ಬೆಳಕಾಯಿತು.!!

✍️ಎ.ಎನ್.ರಮೇಶ್. ಗುಬ್ಬಿ.