ಅವಳೇ ಅವಳೇ ಒಂದೇ ಒಂದು ಮಾತಿಗೆ ಮಾತು ಬೆರೆಸಿ ಮಲ್ಲಿಗೆಯಾದವಳು
ಸುಂದರ ಸಂಜೆಯ ರಾಜಶೇಖರನ ಮುಖಕೆ ಮೆಚ್ಚುಗೆ ಹೇಳಿದವಳು
ಹಮ್ಮು ಬಿಮ್ಮು ಬಿಟ್ಟು ಸರಳ ಸೌಂದರ್ಯವನುಟ್ಟು ನಿಂತರೆ ಪ್ರಕೃತಿ
ಒಮ್ಮೆ ವಾರೆನೋಟದಲಿ ನೋಡಿ ನಾರಿಯ ಸೊಬಗಿಗೆ ವ್ಯಾಖ್ಯಾನವಾದವಳು
ಸಿಂಹಾಸನದ ಅಧಿಪತಿಯಲ್ಲ ನಲ್ಲ ಎಲ್ಲರಂತಿರುವ ಸರ್ವೇಸಾಮಾನ್ಯ
ಮತ್ತೆ ಮತ್ತೆ ಅಮಾವಾಸ್ಯೆ ಕತ್ತಲಲಿ ಕಪ್ಪು ಚಂದ್ರನ ಹುಡುಕಿದವಳು
ಸಹಜತೆಯನೆ ಒಪ್ಪಿಕೊಂಡು ಖುಷಿಪಟ್ಟುಕೊಳ್ಳುವ ವಿಶಾಲ ಮನಸು
ಕನಸಿನ ಕೀಲಿಕೈ ಕಣ್ಣ ಕಾಡಿಗೆಯಲಿಟ್ಟುಕೊಂಡು ಹುಬ್ಬನು ಕುಣಿಸಿದವಳು
ಅಂಧಕಾರ ತುಂಬಿದ ಅಂಧ ಜಗತ್ತಿಗೆ ಅವಳೇ ಒಂದು ದೀಪದ ಬೆಳಕು…!
ಜಾಲಿ ಬೆಚ್ಚಗಿನ ಜೋಗುಳದ ಭಾಷೆಯಲಿ ಎಲ್ಲ ಲೋಕವನು ಕಾದವಳು
✍️ವೇಣು ಜಾಲಿಬೆಂಚಿ
ರಾಯಚೂರು.
