ನನ್ನ ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಗಳು ಒಂದಿಲ್ಲೊಂದು ವಿಶೇಷತೆಗೆ ಹೆಸರಾಗಿರು ವುದು ಹೆಮ್ಮೆಯ ಸಂಗತಿ. ಅದು ಭೌಗೋಳಿಕ ವಾಗಿ, ಕರಾವಳಿತೀರವಾಗಿ, ಭೂತಾಯ ಆಗರ ವಾಗಿ, ಐತಿಹಾಸಿಕವಾಗಿ ಹತ್ತು ಹಲವಾರು ವಿಶೇಷತೆಗಳಿಂದ ಎಲ್ಲ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂತಹ ತಾಲೂಕುಗಳಲ್ಲಿ ಒಂದಾದ “ಹೊನ್ನಾವರ ” ತಾಲೂಕಿನ ಬಗ್ಗೆ ಅರಿತಷ್ಟು ಅಪರೂಪದ ಅನುಭವವಾಗುವು ದಂತೂ ದಿಟ.! “ಹೊನ್ನಾವರ” ಹೆಸರಿಗೆ ತಕ್ಕಹಾಗೆ ‘ಹೊನ್ನ’ ಕಳಶದಂತೆ!.
ಹೊನ್ನಾವರ ತಾಲ್ಲೂಕಿನ ಇತಿಹಾಸ..

ಹೊನ್ನಾವರದ ಪೂರ್ವದಹೆಸರು “ಹೊನ್ನಾಪುರ” ಅಥವಾ “ಸುವರ್ಣಪುರ” ಎಂದಾಗಿತ್ತು. ಇದು ‘ಚಿನ್ನ’ ಹಾಗು ಇತರ ಬೆಲೆಬಾಳುವ ವಸ್ತುಗಳ ಪ್ರಮುಖ ಮಾರುಕಟ್ಟೆಯಾಗಿತ್ತು. ಇದರಿಂದಲೇ ಈಊರಿಗೆ ಹೊನ್ನಾವರವೆಂಬ ಹೆಸರು ಬಂದಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

ಹೊನ್ನಾವರ,”ರಾಣಿ ಚೆನ್ನಭೈರದೇವಿ” ಯ ಆಡಳಿತಕ್ಕೊಳಪಟ್ಟಿತ್ತು. ಈಕೆ ಈ ಪ್ರಾಂತ್ಯದ “ಕಾಳುಮೆಣಸಿನ ರಾಣಿ” ಎಂದೇ ಪ್ರಸಿದ್ದವಾಗಿ ದ್ದಳು. ಈಕೆ “ಗೇರುಸೊಪ್ಪ” ಬಂದರಿನಿಂದ ಕಾಳು ಮೆಣಸನ್ನು ಯುರೋಪ್ ಮತ್ತು ಜಗತ್ತಿನ ಇತರ ದೇಶಗಳಿಗೆ ರಪ್ತು ಮಾಡುತಿದ್ದಳು. ಬ್ರಿಟಿಷರಿಂದ ಸೋಲಿಸಲ್ಪಟ್ಟ ನಂತರ ತನ್ನ ಅಪಾರ ಸಂಪತ್ತಿ ನೊಂದಿಗೆ ಜಲ ಸಮಾಧಿಯದಳು ಎಂಬುವುದು ಇತಿಹಾಸ. ಇಂದಿಗೂ ಈಕೆಗೆ ಸಂಬಂಧಿಸಿದ ಬೆಲೆ ಬಾಳುವ ಸಂಪತ್ತು ಗೇರುಸೊಪ್ಪ ಕಾಡಿನಲ್ಲಿದೆ ಎಂಬ ಪ್ರತೀತಿ ಇದೆ.

ಅದು ಅಲ್ಲದೇ, ಹೊನ್ನಾವರ ತಾಲ್ಲೂಕಿನ ಬಗ್ಗೆ ಮೊದಲ ಐತಿಹಾಸಿಕ ಉಲ್ಲೇಖವಿರುವುದು ಕ್ರಿ.ಶ. 247ರಲ್ಲಿ ಗ್ರೀಕ್ ಲೇಖಕರಾದ ಪೆರಿಪ್ಲುಸ್ ನ ಕೃತಿಗಳಲ್ಲಿ. ಇದನ್ನು ತಮಿಳು ದೇಶದಲ್ಲಿ “ಲಿಮುರಿಕೆ” ಅಂದರೆ “ಮೊದಲ ಬಂದರು” ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ 10ನೇ ಶತಮಾನದ ಪಠ್ಯ ಜೈನರಾಮಾಯಣದಲ್ಲಿ ಹೊನ್ನಾವರ ಪಟ್ಟಣವನ್ನು “ಹನುರುಹ ದ್ವೀಪ” ಎಂದು ತಿಳಿಸಲಾಗಿದೆ.ಈ ಪಟ್ಟಣದ ಬಗ್ಗೆಉಲ್ಲೇಖ ಗಳು, “ಅಬು ಅಲ್-ಫಿದ AD1273- 1331” ಎಂಬ “ಅರಬ್ ಜಿಯೋಗ್ರಾಫರ್” ತನ್ನ ಕೃತಿ ಗಳಲ್ಲಿ “ಹಿನುರು” ಎಂದು ವಿವರಿಸಿದ್ದಾನೆಂದು ಉಲ್ಲೇಖವಿದೆ. ಹೊನ್ನಾವರ ಅಥವಾ “ಒನೊರ್“ ಇದು ಉತ್ತರ ಕನ್ನಡ ಜಿಲ್ಲೆಯ ಬ್ರಿಟಿಷ್ ಭಾರತದ ಪ್ರಮುಖ ಬಂದರು ಆಗಿತ್ತು. ಇದು ಕ್ರಿ.ಶ.16ನೇ ಶತಮಾನದ ಹಿಂದೆಯೇ ವ್ಯಾಪಾರದ ಪ್ರಮುಖ ಸ್ಥಳ ಎಂದು ಗುರುತಿಸಲಾಗಿತ್ತು ಎಂದು ಹೇಳಲಾಗಿದೆ.

ಹೊನ್ನಾವರ ಕರಾವಳಿ ತೀರದ ಒಂದು “ಬಂದರು ಪಟ್ಟಣ”ವಾಗಿದೆ. ಇದು ಸುಂದರವಾದ ಭೂದೃಶ್ಯ ಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಹೊನ್ನಾವರ ‘ಬಂದರು’ ವಿದೇಶಿ ವ್ಯಾಪಾರಿಗಳಿಗೆ ಆತಿಥ್ಯ ವಹಿ ಸಿತು, ನಂತರ ಯುರೋಪಿಯನ್ ದೇಶಗಳಾದ ಪೋರ್ಚುಗಲ್, ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಮತ್ತು 14ನೇ ಶತಮಾನದ ಮೊರೊಕನ್ ಪ್ರವಾಸಿ “ಇಬ್ನ್ ಬಟುಟ್ಟಾ” ತನ್ನ ಸಮುದ್ರಯಾನದ ಸಮಯದಲ್ಲಿ ಹೊನ್ನಾವರ ಬಂದರಿಗೂ ಬಂದಿದ್ದ ನೆಂಬ ಮಾಹಿತಿಯಿದೆ.

ಹೊನ್ನಾವರದಲ್ಲಿ ಪೋರ್ಚುಗೀಸ್ ಆಡಳಿತವಿತ್ತು ಮತ್ತು ಪೋರ್ಚುಗೀಸ್ ಪ್ರಾಬಲ್ಯದ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿ ವ್ಯಾಪಾರವನ್ನು ಸಂರಕ್ಷಿಸಲು ಕ್ರಿ.ಶ.16 ನೇ ಶತಮಾನದಲ್ಲಿ ಒಂದು ಕೋಟೆಯನ್ನು ನಿರ್ಮಿಸಲಾಯಿತೆಂದು, ನಂತರ ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರು ಈ ಬಂದರಿನಲ್ಲಿ ಅನೇಕ ಗೋದಾಮುಗಳನ್ನು ನಿರ್ಮಿಸಿದರು ಎಂಬ ಉಲ್ಲೇಖವಿದೆ.
ಹೊನ್ನಾವರ ಪಟ್ಟಣವು ತಾಲೂಕಿನ ಹೃದಯ, ಕೇಂದ್ರಭಾಗ. ಅರಬ್ಬಿ ಸಮುದ್ರದ ತೀರದಲ್ಲಿ ಶರಾವತಿ ನದಿಯ ದಂಡೆಯಲ್ಲಿ ಸ್ಥಿರವಾಗಿರುವ ಈ ಪಟ್ಟಣ ಐತಿಹಾಸಿಕ ಪ್ರದೇಶ ಕೂಡ ಹೌದು. ಐತಿಹಾಸಿಕವಾಗಿ ಗಮನಿಸಿದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸದ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಳೆ ಕಾರ್ಯ ಕ್ರಮ ಇಲ್ಲಿಯ ವೈಶಿಷ್ಟ್ಯ. ಕನ್ನಡವು ಅಧಿಕೃತ ಭಾಷೆಯಾಗಿ ಚಲಾವಣೆಯಲ್ಲಿದ್ದರೂ ಸಹ ಕೊಂಕಣಿ ಭಾಷೆ ತನ್ನದೆ ಆದ ಸ್ಥಾನ ಪಡೆದಿದೆ. ಹವ್ಯಕ ಭಾಷೆಯು ಹೆಚ್ಚು ಬಳಕೆಯಲ್ಲಿದೆ.

ಹೊನ್ನಾವರ ಸಾಕಷ್ಟು ಐತಿಹಾಸಿಕ ಪುರಾತನ ವಸ್ತುಗಳನ್ನು ಹೊಂದಿರುವ ಬಂದರು ಮತ್ತು ಕೋಟೆ ಪಟ್ಟಣವಾಗಿತ್ತು.ಕ್ರಿ.ಶ.11 ಮತ್ತು 14ನೇ ಶತಮಾನದ ನಡುವೆ ಹೊನ್ನಾವರ ಪಟ್ಟಣವು ಚಂದಾವರದ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹೊನ್ನಾ ವರ ವ್ಯಾಪಾರ ಕೇಂದ್ರವಾಗಿತ್ತು. ಪೋರ್ಚು ಗಲ್ ನಿಂದ ಕುದುರೆಗಳನ್ನು ಈ ಬಂದರಿನ ಮೂಲಕ ಆಮದು ಮಾಡಿಕೊಳ್ಳಲಾಯಿತು. ವಿಜಯ ನಗರದ ಪ್ರಸಿದ್ಧ ರಾಜನಾಗಿದ್ದ ಶ್ರೀಕೃಷ್ಣದೇವ ರಾಯನು ಹೊನ್ನಾವರ ಮತ್ತು ಭಟ್ಕಳದಲ್ಲಿ ಕೋಟೆಗಳನ್ನು ನಿರ್ಮಿಸಲು ಪೋರ್ಚುಗೀಸರಿಗೆ ಅನುಮತಿ ನೀಡಿದನು. ಕ್ರಿ.ಶ.15 ಮತ್ತು 16ನೇ ಶತಮಾನಗಳಲ್ಲಿ ಗೇರುಸೊಪ್ಪದ ಸಾಳುವರು ಹೊನ್ನಾವರದ ಪ್ರಮುಖ ಆಡಳಿತಗಾರರಾಗಿದ್ದರು. 16 ನೇ ಶತಮಾನದ ಅಂತ್ಯದ ವೇಳೆಗೆ ಗೇರು ಸೊಪ್ಪದ ರಾಣಿ ಚೆನ್ನಬೈರಾದೇವಿ ‘ಮೆಣಸಿನ ರಾಣಿ (ಕಾಳು ಮೆಣಸಿನ ರಾಣಿ) ಎಂದು ಬಹಳ ಜನಪ್ರಿಯರಾಗಿದ್ದರು. ಪಶ್ಚಿಮದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಳು. ಹೀಗೆ ಹೊನ್ನಾವರವು ಸಾಗರೋತ್ತರ ವ್ಯಾಪಾರದ ಪ್ರವರ್ಧಮಾನಕ್ಕೆ ಬಂದಿತೆಂಬ ಉಲ್ಲೇಖವಿದೆ.

17 ನೇ ಶತಮಾನದ ಮಧ್ಯಭಾಗದಲ್ಲಿ ಹೈದರ್ ಅಲಿಯ ಸೈನ್ಯ ಹೊನ್ನಾವರ ಮತ್ತು ಬಸವರಾಜ ದುರ್ಗವನ್ನು ಸ್ವಾಧೀನಪಡಿಸಿಕೊಂಡಿತು. 18ನೇ ಶತಮಾನದ ಅಂತ್ಯದ ವೇಳೆಗೆ, ಇಡೀ ಉತ್ತರ ಕೆನರಾ ಜಿಲ್ಲೆ ಹೈದರ್ ಅಲಿಯ ಮಗ ಟಿಪ್ಪುವಿನ ನಿಯಂತ್ರಣಕ್ಕೆ ಬಂದಿತೆಂದು ಮತ್ತು ಹೊನ್ನಾವರ ಕ್ರಿ.ಶ.1800 ಮತ್ತು 1817 ರ ನಡುವೆ ಜಿಲ್ಲಾ ಕೇಂದ್ರವಾಗಿತ್ತೆಂಬ ಮಾಹಿತಿ ಇದೆ. 1862 ರಲ್ಲಿ ಇಡೀ ಕೆನರಾ ಜಿಲ್ಲೆಯನ್ನು ದಕ್ಷಿಣ ಕೆನರಾ ಮತ್ತು ಉತ್ತರ ಕೆನರಾ ಜಿಲ್ಲೆಗಳಾಗಿ ವಿಂಗಡಿಸಲಾಯಿತು ಮತ್ತು ಉತ್ತರ ಕೆನರಾ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ವರ್ಗಾಯಿಸಲಾಯಿತು. ಅಲ್ಲಿಯ ವರೆಗೆ ಅದು ಮದ್ರಾಸ್ ಪ್ರೆಸಿಡೆನ್ಸಿಯ ಅಡಿಯ ಲ್ಲಿತ್ತು. ಸ್ವಾತಂತ್ರ್ಯಾನಂತರ 1947ರಲ್ಲಿ ಹೊನ್ನಾವರವು ತಾಲೂಕಾ ಕೇಂದ್ರವಾಯಿತೆಂದು ದಾಖಲಿಸಿದೆ.
ಹೊನ್ನಾವರ ತಾಲ್ಲೂಕಿನ ಪ್ರಾಚೀನಹಿನ್ನೆಲೆ ಹಾಗೂ ಆಗಿನ ಜನಸಾಮಾನ್ಯರ ಬದುಕು ಬವಣೆಗಳು ಭಿನ್ನವಾದರೂ, ಮಧ್ಯಯುಗದ ವ್ಯಾಪಾರ ಕೇಂದ್ರ ವಾಗಿತ್ತು “ಗುಂಡಬಾಳಾ” ಇದು ಗೇರುಸೊಪ್ಪದ ದೊರೆಗಳಕಾಲದಲ್ಲಿ ರಪ್ತು ಮೆಣಸು ಸಂಗ್ರಹಿಸುವ ಕೇಂದ್ರವಾಗಿತ್ತೆಂದು ಇತಿಹಾಸ ಹೇಳುತ್ತದೆ. ಇಲ್ಲಿ ಇಂದಿಗೂ ಕಾಳುಮೆಣಸು ಶೇಖರಿಸುತಿದ್ದ ಹೊಂಡ ಗಳಿವೆ.ಇಂದು “ಗುಂಡಬಾಳಾ”ಸಾಂಸ್ಕೃತಿಕ ಕೇಂದ್ರ ವಾಗಿ ಹೊರಹೊಮ್ಮಿದೆ. ಈ ಹಳ್ಳಿಯಲ್ಲಿ ಒಂದು ಹನುಮಾನ್ ದೇವಾಲಯವಿದೆ. ಭಗವಂತ ಯಕ್ಷ ಗಾನ ಪ್ರಿಯನಾಗಿದ್ದು, ಪ್ರತಿ ವರ್ಷ ಯಕ್ಷಗಾನ ಪ್ರದರ್ಶನ ನಡೆಯುತ್ತದೆ.

“ಗೇರುಸೊಪ್ಪ” ಹಿಂದಿನ ಕಾಲದಲ್ಲಿ ಹೊನ್ನಾವರದ ರಾಜಧಾನಿಯಾಗಿತ್ತೆಂಬ ಪ್ರತೀತಿ ಇದೆ. ಶ್ರೀಮಂತ ಪ್ರಾಚೀನವಾದ ಒಂದು ಸ್ಥಳ. ಸಾಳುವ ಆಡಳಿತ ಗಾರರು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ ಜೈನ ಚತುರ್ಮುಖ ಬಸ್ತಿ ಅತ್ಯಂತ ಪ್ರಸಿದ್ಧ ಸ್ಮಾರಕ. ಇದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರವೇಶಗಳನ್ನು ಹೊಂದಿದೆ. ನಾಲ್ಕು ಪ್ರತ್ಯೇಕ ತೀರ್ಥಂಕರ ಚಿತ್ರಗಳು ನಾಲ್ಕು ಪ್ರವೇಶಗಳನ್ನು ಎದುರಿಸುತ್ತಿರುವಂತೆ ಇವೆ ಎಂಬುದನ್ನು ಸೂಚಿಸುತ್ತದೆ.
ಹೊನ್ನಾವರದ ಪುರಾಣ ಪ್ರಸಿಧ್ಧ ದೇವಾಲಯಗಳು
ಇಡಗುಂಜಿ ದೇವಸ್ಥಾನ

ಹೊನ್ನಾವರದ ಇಡಗುಂಜಿ ದೇವಸ್ಥಾನ ಸುಪ್ರಸಿದ್ಧ ದೇವಸ್ಥಾನಗಳಲ್ಲೊಂದು.ಇದು ಸರಿ ಸುಮಾರು “1500 “ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾತನ ದೇವಾಲಯವಾಗಿದೆ.ತಪಸ್ಸು ಮಾಡುವ ಯೋಗಿಯಂತೆ ಮಹಾಗಣಪತಿಯ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗಿದೆ. ಸುಂದರವಾದ ಗಣಪತಿಯ ಪ್ರತಿಮೆಯಿಂದಾಗಿ ಈ ಸ್ಥಳವನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.ಸಾಕ್ಷಾತ್ ಮಹಾ ಗಣಪತಿ ಇಲ್ಲಿ ನೆಲೆಸಿದ್ದಾನೆಂಬ ಪುರಾಣ-ಪುಣ್ಯ ಕಥೆಗಳಲ್ಲಿ ಪ್ರಸ್ತಾಪಿಸಲಾಗಿದೆ. ವರ್ಷಕ್ಕೆ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತರನ್ನು ಈ ದೇವಾಲಯವು ಆಕರ್ಷಿಸುತ್ತಿದೆ.
ಗುಂಡಬಾಳಾ ಮುಖ್ಯಪ್ರಾಣ ದೇವಸ್ಥಾನ
ಗುಂಡಬಾಳಾ ಮುಖ್ಯಪ್ರಾಣ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿದೆ. ವರ್ಷದ ೧೨ ತಿಂಗಳು ಪ್ರತಿರಾತ್ರಿ ನಡೆಯುವ ಯಕ್ಷಗಾನ ಈ ದೇವರ ಮಹಿಮೆಯ ಪ್ರತೀಕ ವಾಗಿದೆ. ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ, ಗೇರು ಸೊಪ್ಪ ವೀರಾಂಜನೇಯ ದೇವಸ್ಥಾನ, ಗೇರು ಸೊಪ್ಪೆಯ ಚರ್ತುಮುಖ ಬಸದಿ.ಕರಿಕಾನ ಪರಮೇಶ್ವರಿ ದೇವಸ್ಥಾನ ಹೀಗೆ ಹತ್ತಾರು ದೇವಾಲಯಗಳಿವೆ.
ಶ್ರೀಗೋಪಾಲಕೃಷ್ಣ ದೇವಾಲಯ.

ಹೊನ್ನಾವರದ ಹೂವಿನ ಚೌಕದಲ್ಲಿರುವ ಶ್ರೀಗೋಪಾಲಕೃಷ್ಣ ದೇವಾಲಯ. ಸುಮಾರು 250 ವರ್ಷಗಳ ಸುದೀರ್ಘ ಇತಿಹಾಸವಿರುವ ದೇವಸ್ಥಾನ ಮತ್ತು ಅತ್ಯಂತ ಆಕರ್ಷಕವಾಗಿದೆ. ಇಲ್ಲಿಗೆ ಬಂದರೆ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸದಾ ಭಕ್ತರ ಜಂಗುಳಿಯಿಂದ ಕೂಡಿರುತ್ತದೆ. ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಗರ್ಭಗೃಹ, ಮುಖ ಮಂಟಪದಲ್ಲಿ ಶಿಲಾಕಲ್ಲಿನ ರಚನೆ ಹಾಗೂ ಕೆತ್ತನೆಗಳಿರುವುದರಿಂದ ಇಡೀ ದೇವಾಲಯದ ಸೌಂದರ್ಯ ಹೆಚ್ಚಿದೆ. ಪ್ರತಿ ಶ್ರಾವಣ ಮಾಸವಿಡೀ ನಿತ್ಯ ಬೆಳಗ್ಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಪೂಜೆಯಿರುತ್ತದೆ, ಕಾರ್ತೀಕ ಮಾಸದಲ್ಲಿ ದೀಪೋತ್ಸವ ಇತ್ಯಾದಿ ವೈಭವದಿಂದ ನಡೆಯುತ್ತವೆ. ಬಹುಮುಖ್ಯವಾಗಿ ಸಂತಾನ ಪ್ರಾಪ್ತಿಗಾಗಿ ಮತ್ತು ವಾಕ್ ದೋಷ ಪರಿಹಾರಕ್ಕಾಗಿ ಭಕ್ತರು ಹರಕೆಯನ್ನು ಹೊತ್ತು ಇಲ್ಲಿಗೆ ಬರುವುದು ವಿಶೇಷ.
ಮಂಕಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ

ಹೊನ್ನಾವರ ತಾಲೂಕಿನಲ್ಲಿ ಅತಿ ಪುರಾತನವಾದ ದೇವಸ್ಥಾನವಿದೆ. ಅದು “ಮಂಕಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ”. ಇದು ಹಸಿರು ಪರ್ವತ ಗಳಿಂದ ಕೂಡಿರುವ ಪ್ರದೇಶವಾಗಿದ್ದು ಪ್ರವಾಸಿಗರನ್ನು ಸೆಳೆಯುವಲ್ಲಿ ಅಥವಾ ಪ್ರವಾಸಿಗರಿಗೆ ಉತ್ತಮ ಆಯ್ಕೆಯಾಗಿದೆ.
ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಜಡ್ಡಿಕೇರಿ

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಜಡ್ಡಿಕೇರಿ, ಅತ್ಯಂತ ಶಕ್ತಿಶಾಲಿ ದೇವಿ ಹಾಗೂ ಬೇಡಿದ್ದನ್ನು ಕರುಣಿಸುವ ದೇವಿಯೆಂಬ ಮಾತಿದೆ.
ಕೊಡ್ಲಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಕೊಡ್ಲಮನೆ ದೇವಸ್ಥಾನವು, ಕಾಡಿನ ಬೆಟ್ಟಗಳ ನಡುವೆ ಅಡಗಿರುವ ಕೊಡ್ಲಮನೆ “ಶ್ರೀ ವಿಷ್ಣು ಮೂರ್ತಿ” ದೇವಸ್ಥಾನವು ಪ್ರಶಾಂತವಾದ ಪೂಜಾ ಸ್ಥಳವನ್ನು ಬಯಸುವ ಯಾತ್ರಾರ್ಥಿಗಳಿಗೆ, ಈ ದೇವಾಲಯವು ಪರಿಪೂರ್ಣವಾಗಿದೆ. ಚಾರಣಕ್ಕೆ ಇದು ಸುಕ್ತವಾದ ಜಾಗವಾಗಿದ್ದು, ಸಾಹಸಮಯ ಅನುಭವಕ್ಕೆ ಹೇಳಿಮಾಡಿಸಿದ ಸ್ಪರ್ಶವನ್ನು ನೀಡುವಂತ ಪ್ರದೇಶವಾಗಿದೆ.
ಹೊನ್ನಾವರದ ಪ್ರವಾಸಿ ತಾಣಗಳು
ಕಾಸರಕೋಡ್ ಬೀಚ್

ಇದು ಹೊನ್ನಾವರ ತಾಲ್ಲೂಕಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಕಾಸರಕೋಡ್ ಕಡಲತೀರವು ಐದು ಕಿಲೋಮೀಟರ್ ವರೆಗೆ ವಿಸ್ತರಿಸಿದೆ. ಸೂರ್ಯಾಸ್ತದ ಸುಂದರ ಅನುಭವವನ್ನು ಕಣ್ಣು ಗಳು ತುಂಬಿಕೊಂಡಷ್ಟು ತಣಿಯದು,ಇದನ್ನು ನೋಡಲೆಂದೆ ಪ್ರವಾಸಿಗರ ದಂಡು,ಈ ಕಡಲ ತೀರದ ಉದ್ದಕ್ಕೂ ಅಡ್ಡಾಡುತ್ತ, ಕಾಸರಕೋಡ್ ನ ಸುತ್ತಮುತ್ತಲಿನ ಸೌಂದರ್ಯವು ಮಾನಸಿಕ ನೆಮ್ಮದಿಯನ್ನು ಪಡೆಯಲು ಅನುಕೂಲವಾಗಿದೆ. ಈ ಕಾಸರಗೋಡು ಕಡಲತೀರಕ್ಕೆ “ನೀಲಿ ಧ್ವಜ” ಪ್ರಮಾಣೀಕರಣವನ್ನು ನೀಡಿದೆ.
ಅಪ್ಸರಕೊಂಡ ಬೀಚ್

ಅಪ್ಸರಕೊಂಡ ಬೀಚ್ ಕಾಸರಗೋಡಿ ನಂತೆ ಮತ್ತೊಂದು ಜನಪ್ರಿಯ ಕಡಲತೀರವಾಗಿದೆ. ಜಲಪಾತ ಮತ್ತು ಸಮುದ್ರ ತೀರ ಎರಡನ್ನೂ ಹೊಂದಿರುವ ಅಪ್ಸರಕೊಂಡ ಪ್ರಮುಖ ಆಕರ್ಷಣೆ ಯಾಗಿದೆ. ಇಲ್ಲಿನ ಉಗ್ರನರಸಿಂಹ ದೇವಾಲಯ ಮತ್ತು ಮಹಾಗಣಪತಿ ದೇವಾಲಯವು ಈ ಸುಂದರವಾದ ಕಡಲತೀರದ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಅಪ್ಸರ ಕೊಂಡ ಜಲಪಾತವು 10 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತವಾಗಿದ್ದು, ಇದರ ಸೌಂದರ್ಯವನ್ನು ನೋಡಿಯೇ ಆನಂದಿಸಬೇಕು. ಅಪ್ಸರಕೊಂಡ ಜಲಪಾತವನ್ನು ತಲುಪಲು ಸುಮಾರು 100-150 ಮೆಟ್ಟಿಲುಗಳನ್ನು ಇಳಿಯ ಬೇಕು, ಹಾಲ್ನೋರೆಯ ಜಲಪಾತದ ಅದ್ಭುತ ದೃಶ್ಯಾವಳಿ ಹಾಗೂ ನೀರಿನಲ್ಲಿ ಜಲಕ್ರೀಡೆಯನ್ನಾಡ ಬಹುದು.

ಅಪ್ಸರಕೊಂಡ ಜಲಪಾತಕ್ಕೊಂದು ಒಂದು ಕಾಲ್ಪನಿಕ ಕಥೆಯಂತಿದೆ. ಹೆಸರೇ ಹೇಳುವಂತೆ ಅದರ ಮಾಂತ್ರಿಕ ಸೌಂದರ್ಯ ಮತ್ತು ಪೌರಾಣಿಕ ಕಥೆಗಳು. “ದೇವತೆಗಳಿಗೆ ಸ್ನಾನದ ಸ್ಥಳ” ಎಂಬ ಅರ್ಥವಿರುವ ಹೆಸರು ಆಶ್ಚರ್ಯ ಹಾಗೂ ಕುತೂಹಲ ಉಂಟುಮಾಡುತ್ತದೆ.
ಪರಿಸರ ಬೀಚ್

ನಿಗೂಢ,ರಹಸ್ಯ ನಿಧಿಯಂತೆ ಸುತ್ತುವರೆದಿರುವ ಪರಿಸರ ಬೀಚ್, ಶಾಂತಿಯುತವಾಗಿ ವಿಹರಿಸಲು ಸಹಕರಿಸುತ್ತದೆ.ಪರಿಸರ ಬೀಚ್ ದಡದ ಉದ್ದಕ್ಕೂ ಅಡ್ಡಾಡುವ ಪ್ರದೇಶವು, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯವನ್ನು ನೆನೆಯಲು ಪರಿ ಪೂರ್ಣ ಮಾರ್ಗವಾಗಿದೆ.ಇಲ್ಲಿ ಸೂರ್ಯಾಸ್ತವನ್ನು ನೋಡುವುದೇ ಒಂದು ರುದ್ರರಮಣೀಯ ಅನುಭವ ನೀಡುತ್ತದೆ. ಇಲ್ಲಿ ಜನರ ಸದ್ದು, ಗದ್ದಲ ವಿಲ್ಲದ ಕಾರಣ, ನೆಮ್ಮದಿ ಯಿಂದ ವಿಹರಿಸಬಹು ದು.
ಹ್ಯಾಂಗಿಂಗ್ ಬ್ರಿಡ್ಜ್

ಹ್ಯಾಂಗಿಂಗ್ ಬ್ರಿಡ್ಜ್ನಾದ್ಯಂತ ನಿಧಾನವಾಗಿ ಅಡ್ಡಾಡಿ ಮತ್ತು ಕ್ಷಣವನ್ನು ಸೆರೆಹಿಡಿಯಲು ಸೆಲ್ಫಿ ತೆಗೆದುಕೊಳ್ಳದೇ ಮನಸ್ಸು ಇರಲಾಗದು. ಸ್ಥಳೀಯ ಬಳಕೆಗಾಗಿ ನಿರ್ಮಿಸಲಾದ ಈ ಸೇತುವೆಯು ಪ್ರವಾಸಿ ಆಕರ್ಷಣೆಯಾಗಿದೆ.ಹೆದ್ದಾರಿಯ ಸಮೀಪವಿರುವ ಈ ಸ್ಥಳವು ಹಾದು ಹೋಗುವ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.
ಶರಾವತಿ ಕಾಂಡ್ಲಾ ಮ್ಯಾಂಗ್ರೋವ್ ಬೋರ್ಡ್ವಾಕ್

ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪ ಡುವ ಈ ಹೊಸ ಪ್ರವಾಸಿ ತಾಣವು ಮ್ಯಾಂಗ್ರೋವ್ಗಳನ್ನು ಅನ್ವೇಷಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.
ಕರ್ನಲ್ ಹಿಲ್

ವ್ಯಯಕರ್ನಲ್ ಹಿಲ್ ಹೊನ್ನಾವರದ ಇನ್ನೊಂದು ಆಕರ್ಷಣಿಯ ಸ್ಥಳವಾಗಿದೆ. ಇದು NH-17 ಪಾರ್ಶ್ವದಲ್ಲಿ ಒಂದು ದಿಣ್ಣೆಮೇಲೆ ಸ್ಥಾಪಿತವಾಗಿದೆ. 30 ಮೀಟರ್ ಎತ್ತರದ ಅಂಕಣ ಇದೆ. ಈ ಕಾಲಮ್ 20 ಜನವರಿ “1845” ರಂದು ಇದನ್ನು ಮೈಸೂರುವಿಭಾಗ ಕಮಾಂಡಿಂಗ್ ಅಧಿಕಾರಿಯಾ ಗಿದ್ದ “ಮೇಜರ್ ಜನರಲ್ ಕ್ಲೆಮೆಂಟ್ ಹಿಲ್” ನೆನಪಿಗಾಗಿ, ಅವರ ಗೌರವಾರ್ಥವಾಗಿ ಬ್ರಿಟೀಷರ 14 ನೇ ಮದ್ರಾಸ್ ಸ್ಥಳೀಯ ಪದಾತಿ ದಳದ ಮೂಲಕ ಸ್ಥಾಪಿಸಿದರು.
ಬಸವರಾಜ ದುರ್ಗ

ಬಸವರಾಜದುರ್ಗ ಅರೇಬಿಯನ್ ಸಮುದ್ರದ ಒಂದು ದ್ವೀಪವಾಗಿದ್ದು, ಇದು ಶರಾವತಿ ನದಿಯು ಸಮುದ್ರವನ್ನು ಸೇರುವ ಸ್ಥಳದಿಂದ ಸುಮಾರು ಮೂರು ಕಿಮೀ ದೂರದಲ್ಲಿದೆ.ದೋಣಿ ಅಥವಾ ಪರ್ಷಿಯನ್ ಬೋಟ್ ಮೂಲಕ ಪ್ರವಾಸಿಗರು ಅದನ್ನು ತಲುಪಲು ಸಾಧ್ಯ. ಈ ದ್ವೀಪ ಸುಮಾರು 19 ಹೆಕ್ಟೇರ್ ಒಟ್ಟು ವಿಸ್ತೀರ್ಣ ಹೊಂದಿದ್ದು, ಇಲ್ಲಿನ ಕೋಟೆ ವಿಜಯನಗರ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿತ್ತೆಂದು, ಕ್ರಿ.ಶ 1690 ರಲ್ಲಿ, ಕೆಳದಿ ದೊರೆ ಶಿವಪ್ಪ ನಾಯಕ ಇದನ್ನು ವಶಪಡಿಸಿಕೊಂಡಿದ್ದನೆಂದು, ಕೆಳದಿದೊರೆ “ಬಸವರಾಜನ”ನೆನಪಿಗಾಗಿ “ಬಸವರಾಜದುರ್ಗ” ಎಂಬ ಹೆಸರಿಡಲಾಯಿತೆಂಬ ಪ್ರತೀತಿಯಿದೆ.

ಹೊನ್ನಾವರಕ್ಕೆ ಭೇಟಿ ನೀಡಲು ಸೂಕ್ತ ಸಮಯ ವೆಂದರೆ ಸೆಪ್ಟೆಂಬರ್ ನಿಂದ ಅಕ್ಟೋಬರ್. ಈ ಸಮಯದಲ್ಲಿ, ಹವಾಮಾನವು ಉತ್ತಮವಾಗಿದ್ದು, ತಾಪ ಮಾನವು 72 ° F ನಿಂದ 90 ° F ವರೆಗೆ ಇರುತ್ತದೆ ಮತ್ತು ಆರಾಮದಾಯಕವಾದ ಆರ್ದ್ರತೆಯ ಮಟ್ಟವು 79%ರಷ್ಟಿರುತ್ತದೆ. ಹೊರಾಂಗಣ ಸಾಹಸಗಳಿಗೆ ಮತ್ತು ಹೊನ್ನಾವರದ ಆಕರ್ಷಣೆಗಳನ್ನು ಅನ್ವೇಷಿಸಲು ಇದು ತುಂಬಾ ಬಿಸಿ ಅಥವಾ ಜಿಗುಟಾದ ಭಾವನೆಯಿಲ್ಲದೆ ಪರಿಪೂರ್ಣವಾಗಿದೆ.

ಒಟ್ಟಾರೆ ಹೊನ್ನಾವರದ ಜನಜೀವನದ ಕುರಿತು ಒಂದು ಕಿರುನೋಟ ಹರಿಸುವುದಾದರೆ, ಅತ್ತ ಕರಾವಳಿ,ಐತಿಹಾಸಿಕ ಹಿನ್ನಲೆಗಳು,ಪ್ರವಾಸಿ ತಾಣ ಗಳು, ಹೀಗೆ ಸುಪ್ರಸಿದ್ಧ ಸಂಸ್ಕೃತಿಗಳ ಹಿನ್ನೆಲೆ ಯುಳ್ಳ ಈ ತಾಣವಾಗಿದೆ. ಗುಣವಂತೆಯು ಯಕ್ಷ ಗಾನ ಕಲೆಯಿಂದ ಪ್ರಸಿದ್ಧವಾಗಿದೆಯೆಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ! ಅದಲ್ಲದೇ ಹೊನ್ನಾವರ ವಾಣಿಜ್ಯ ನಗರಿಯಾಗಿ ಬೆಳೆದಿದ್ದು ವಿಶೇಷವೆನಲ್ಲ.

ಹೊನ್ನಾವರ ಮೊದಲಿನಿಂದಲೂ ಟೈಲ್ಸ್ ಗಳ ತಯಾರಿಕೆ ಮತ್ತು ಗೋಡಂಬಿ ಕಾರ್ಖಾನೆಗಳಿಗೆ ಹೆಸರು ವಾಸಿಯಾಗಿದೆ. ಕೃಷಿ ಮತ್ತು ಮೀನು- ಗಾರಿಕೆ ಇಲ್ಲಿಯ ಜನರ ಮುಖ್ಯ ಉದ್ಯೋಗವಾ ಗಿದೆ. ಶರಾವತಿ ನದಿಯ ಜನ ಜೀವನದ ಜೀವ ನಾಡಿ ಯಾಗಿದ್ದು, ನೀರಾವರಿ ಸಂಚರಣೆಯ ಸೌಲಭ್ಯಗಳನ್ನು ಒದಗಿಸಿದೆ.

ಹೊನ್ನಾವರವು ಕರಾವಳಿ ತೀರದ ಸುಂದರನಗರ. ಇಲ್ಲಿಯ ಊಟ ವಿಶೇಷವೆನಿಸಿರುವದು “ಲೇಡಿ ಮೀನಿಗೆ”! ಕೊಂಕಣಿಯಲ್ಲಿ ಇದಕ್ಕೆ “ನಗಲಿ” ಎನ್ನುವರು. ಇದರಿಂದ ಮೀನೂಟ ಜನಪ್ರಿಯತೆ ಗಳಿಸಿದೆ. ಹೊನ್ನಾವರದಲ್ಲಿ ಸಿಗುವ “ಲೇಡಿ ಮೀನು” ಪ್ರಪಂಚದಲ್ಲೇ ಅತ್ಯಂತ ಉತ್ತಮವಾದ ದ್ದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೊನ್ನಾವರ ತನ್ನದೇ ಆದ ಯಕ್ಷಗಾನ, ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರೊಂದಿಗೆ ಸಾಹಿತ್ಯ ಕೃಷಿಯಲ್ಲಿಯೂ ಮುಂಚೂಣಿಯಲ್ಲಿದೆ. ಹೀಗೆ ಓದುತ್ತಾ…ಓದುತ್ತಾ… ಹೋಗುವ ಮನಸ್ಸಿಗೆ ದಕ್ಕಿದಷ್ಟು, ಮಾಹಿತಿ ಕಲೆಹಾಕಿ ಓದಿ ಬರೆದಷ್ಟು ತೃಪ್ತಿಯಾಗದ ಜ್ಞಾನದ ಹಸಿವು..
✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ

Tumbha Chennaide
LikeLike
ಮಾಹಿತಿ ಪೂರ್ಣ ಬರಹ.. ಸೊಗಸಾಗಿ ಮೂಡಿಬಂದಿದೆ.
LikeLike
ಹೊನ್ನಾವರಕ್ಕೆ ಬೇಟಿ ನೀಡಿದ ಷ್ಟು ಉತ್ತಮ ಮಾಹಿತಿ ಅಬ್ಬಬ್ಬಾ ಅನಿಸಿತು ಅತ್ತ್ಯುತ್ತಮ ಮೇಡಂ👌🙏🙏
LikeLike
ಒಳ್ಳೆಯ ಅವಲೋಕನ👌
LikeLike
ಭಾಳ ಚಂದ ಆಗೇದ ವಿಶ್ಲೇಷಣೆ ಶಿವಲೀಲಾ👌
LikeLike