ಎಲ್ಲಿ ಮುಚ್ಚಿಕೊ ಬೇಕು
ಎಲ್ಲಿ ತೆರಕೊ ಬೇಕು
ಏನು ಮುಚ್ಚಿಕೊ ಬೇಕು
ಏನು ತೆರಕೊ ಬೇಕು,

ಅರ್ಥವಾಗದೆ ಹೋಯ್ತು
ಬದುಕು ಉದಯವಾಯ್ತು
ಅಕೊ ಅದು ಬಲಹೀನರ
ಎಲ್ಲಾ ಸೋಗಲಾಡಿ ಸಭ್ಯರ,

ಬದುಕಿಲ್ಲದೆ ಹೆಣಗಾಟ
ಬಾಳಿಲ್ಲದೆ ತೊಳಲಾಟ
ಹುಚ್ಚಾಟದ ಭ್ರಮಾಲೋಕದಿ
ತಿರುಕನಂತಾದ ಬದುಕು

ಕೋಡಿಕೊಪ್ಪ ಹುಚ್ಚೀರಪ್ಪಜ್ಜ
ಅನುಭಾವಿಗಳಾಡಿದಾ ಒಂದೊಂದು
ನುಡಿಗಟ್ಟು ಎಂದಿಗೂ ಗಟ್ಟಿ
ಹುಸಿಯಾಗದ ಇಂದಿಗೂ ಜೀವಂತ

ಬಿಕರಿ ಮನಗಳ ಬದುಕದು
ಬಲುಹೀನ ಬಲಹೀನತೆಯಲಿ
ಕಾಪಿಡದ ದಾಪುಗಾಲು
ಯಾವ ದರಕಾರು ಇದ್ದೀತು?
ಸವೆಯುತ್ತಿದೆ ಜೀವ ಸುಮ್ಮನೆ

ಹಮ್ಮು ಬಿಮ್ಮಿನೊಳಾನಂದ
ಬದುಕು ಬಿಂದಾಸ ಆಗಿ
ಹೊಣೆಯಿಲ್ಲ ಅದೆಲ್ಲ,
ತಿರುಗಿ ನೋಡಲೊಮ್ಮೆ
ತಿರೆಗೆ ಋಣ ಭಾರವಾಗಿ

✍️ಅಮರೇಗೌಡ ಪಾಟೀಲ ಜಾಲಿಹಾಳ
ಕುಷ್ಟಗಿ