ಆಷಾಢ ಸರಿದು ಬಂದಿದೆ ಇಂದು
ಶುಭ ಶ್ರಾವಣ/
ಅಂತೂ ತಿಂಗಳಿನಿಂದ ಮೋಡಗಳಲ್ಲಿ ಅವಿತಿದ್ದ ನೇಸರನ ದಶ೯ನ//
ಹಸಿರುಡುಗೆ ಉಟ್ಟು, ಮಲ್ಲಿಗೆ,ಕೇದಿಗೆ, ಸಂಪಿಗೆಯ ಮುಡಿದು ಮಂದಸ್ಮಿತ ಧರಣಿ/
ಶ್ರೀ ಲಕ್ಷ್ಮೀ, ಶ್ರೀ ಗೌರಿ -ಈಶ್ವರರ ಪೂಜೆ ಆರಾಧನೆಗೆ ಜನರು ಅಣಿ//
ಮಣ್ಣು ಕೆಸರ ಗಟ್ಟಿಗೊಳಿಸಿ ಮನೆ -ಮನದಿ ಚೈತನ್ಯ ಹರಿಸಿದ ಭಾಸ್ಕರ ಕರುಣಿ/
ಶ್ರಾವಣದ ಸಡಗರಕೆ ಪೂಜೆ,ಜಪ ತಪ,ನೇಮ ನಿಷ್ಠೆಗೆ ಸಂಚಯನಿ//
✍️ ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ
