ಕಳೆದು ಹೋಗಿದ್ದೇನೆ
ಗೆಳತಿ ನಿನ್ನ ಕಂಗಳೊಳಗೆ!
ಕನಸಲ್ಲೇನಾದರು ಕಂಡರೆ…
ಕರೆ ಮಾಡಿ ತಿಳಿಸು!!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ನೆನಪಿನೊಳಗೆ!
ಮನಸಲ್ಲೇನಾದರು ಸಿಕ್ಕರೆ
ಮರೆಯದೆ ತಿಳಿಸು!!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ಪ್ರೀತಿಯೊಳಗೆ!
ಪ್ರೇಮದಲ್ಲೇನಾದರು ಇದ್ದರೆ
ಕೂಡಲೆ ಪತ್ರಿಸಿ ತಿಳಿಸು.!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ಮುಗುಳೊಳಗೆ!
ಮಡಿಲಲ್ಲೇನಾದರು ಇದ್ದರೆ
ಮಿಂಚಂಚೆಯಲಿ ತಿಳಿಸು.!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ನುಡಿಯೊಳಗೆ!
ಇಷ್ಟವೇನಾದರು ಇದ್ದರೆ
ಇನ್ಷ್ಟಾದಲ್ಲಾದರು ತಿಳಿಸು.!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ಜೀವದೊಳಗೆ!
ಭಾವದಲ್ಲೇನಾದರು ಇದ್ದರೆ
ಬರಹದಲ್ಲಾದರು ತಿಳಿಸು.!

ಕಳೆದು ಹೋಗಿದ್ದೇನೆ
ಗೆಳತಿ ನಿನ್ನ-ಉಸಿರಿನೊಳಗೆ!
ಎದೆಯಲ್ಲೇನಾದರು ಇದ್ದರೆ
ಎದುರುಬಂದು ತಿಳಿಸು!!

✍️ಎ.ಎನ್.ರಮೇಶ್. ಗುಬ್ಬಿ.