ಶಾಲೆಯಲ್ಲೊಂದು ಪತ್ರಿಕಾ ಚಳುವಳಿ ಪ್ರಯೋಗ
ಸಮುದಾಯದ ಸಹಾಯದಿಂದ ‘ಸಾಲಿಗುಡಿ’ ದ್ವಿಭಾಷಾ ದ್ವೈಮಾಸಿಕ ಶಾಲಾ ಶಿಕ್ಷಣ ವ್ಯವಸ್ಥೆ ಯಲ್ಲಿ ಪಠ್ಯಕ್ರಮವನ್ನು ತರಗತಿ ಬೋಧನೆಯಲ್ಲಿ ಸ್ವೀಕರಿಸಿ, ಅದನ್ನು ವಿದ್ಯಾರ್ಥಿಗಳ ಮನದಾಳಕ್ಕೆ ತಲುಪಿಸುವುದು ಶಿಕ್ಷಕರ ಆದ್ಯತೆಯ ಕೆಲಸ. ವಿದ್ಯಾರ್ಥಿಗಳನ್ನು ಪಠ್ಯಾಧಾರಿತ ವ್ಯಾಸಂಗದ ಜೊತೆಗೆ, ಪಠ್ಯದಾಚೆಗೂ ಇರುವ ಅನಂತ ವಿಚಾರ ಗಳನ್ನು ಅರಿತುಕೊಳ್ಳಲು ಅಣಿಗೊಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಶಾಲಾ ಅವಧಿಯ ನಂತರವೂ ವಿದ್ಯಾರ್ಥಿಗಳು ಹೊಸ ಓದನ್ನು ಬಯಸುವಂತೆ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಯನ್ನೂ ಹಾಗೂ ಪುಸ್ತಕ ಪ್ರೀತಿಯನ್ನೂ ಶಿಕ್ಷಕರಾದ ವರು ಬೆಳೆಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿ ಹಂತ ದಿಂದಲೇ ಹೊಸತು ಓದನ್ನು ರೂಢಿಸಿಕೊಂಡರೆ ಅವರ ಶಬ್ದ ಸಂಪತ್ತು ಮತ್ತು ಭಾಷಾ ಪ್ರೌಢಿಮೆ ಅಧಿಕಗೊಳ್ಳುತ್ತದೆ. ಈ ನಿಟ್ಟಿ ನಲ್ಲಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರಕಾರಿ ಪ್ರೌಢಶಾಲೆ, ಸಮುದಾಯದ ಸಹಾಯ ದಿಂದ ‘ಸಾಲಿಗುಡಿ’ ದ್ವಿಭಾಷಾ, ದ್ವೆಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿ ರುವುದು ಮಕ್ಕಳ ಪತ್ರಿಕಾ ಚಳುವಳಿಯಲ್ಲೊಂದು ಹೊಸ ಹೆಜ್ಜೆಯೆಂದೇ ಹೇಳಬಹುದು.

ಸಾಲಿಗುಡಿ-ಮಕ್ಕಳ ಸೃಜನಶೀಲತೆಯ ಕನ್ನಡಿ

ದೈವತ್ವದ ಸಂಕೇತವೇ ಶಾಲೆ. ಇಂದಿಗೂ  ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿಗೆ ಸಾಲಿಗುಡಿ ಎಂದೇ ಕರೆಯಲಾಗುತ್ತದೆ. ಮಕ್ಕಳು-ಶಾಲೆ- ಸಮುದಾಯದ  ಜೊತೆಗೆ ಅನ್ಯೋನ್ಯತೆ ಹೊಂದು ವಂತೆ ಸಂಪಾದಕರು ಈ ಹೆಸರನ್ನು ಸೂಚ್ಯವಾಗಿ ರಿಸಿದ್ದಾರೆ. ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿಯ ಭಾಗವಾಗಿ ಅಲ್ಲದೇ ಮಕ್ಕಳಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವು ದಕ್ಕೋಸ್ಕರ ಈ ದ್ವೆಮಾಸಿಕ ವನ್ನು ಹೊರತರಲಾ ಗುತ್ತಿದೆ. ಸಾಹಿತ್ಯಿಕ ಚಟುವಟಿಕೆಗಳು ಮಕ್ಕಳ ಭಾಷಾ ಕೌಶಲ್ಯಗಳನ್ನು ಸುಧಾರಿಸುತ್ತವೆ. ಭಾಷೆ ಮಕ್ಕಳ ಭಾವನೆಗಳನ್ನು ಅರಳಿಸುತ್ತದೆ. ಇಂತಹ ಸೃಜನಾತ್ಮಕ ಬರಹ ಅರಳಿಸುವ ಕಾರಣ ದಿಂದ ಸಾಲಿಗುಡಿಗೆ ‘ಮಕ್ಕಳ ಸೃಜನಶೀಲತೆಯ ಕನ್ನಡಿ’ ಎಂಬ ಅಡಿಬರಹವನ್ನು ನೀಡಲಾಗಿದೆ.

ಶಾಲಾ ಮುಖವಾಣಿ ಸಾಲಿಗುಡಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಬರಹಗಳನ್ನು ಹೊಂದಿದ್ದು, ಮಕ್ಕಳಲ್ಲಿ ಮಾತೃಭಾಷೆ ಕನ್ನಡದ ಜೊತೆಜೊತೆಗೆ ಸುಲಲಿತವಾಗಿ ಆಂಗ್ಲಭಾಷೆಯಲ್ಲಿಯೂ ಕೂಡ ಬರೆಯಲು ಪ್ರೇರಣೆಯಾಗಿದೆ. ಈ ಪ್ರಯತ್ನವು ಮಕ್ಕಳಲ್ಲಿ ಆಂಗ್ಲಭಾಷಾ ಭಯವನ್ನು ಹೋಗ ಲಾಡಿಸುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳಲ್ಲಿ ಕಥೆ, ಕವಿತೆ, ಚುಟುಕು, ನಾಟಕ, ಪ್ರಬಂಧ, ವರದಿ, ಸಂದರ್ಶನ, ನುಡಿಚಿತ್ರ  ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯಲು ಉತ್ತೇಜನ ನೀಡುತ್ತಿದೆ. ಕಿರೇಸೂರ ಸರಕಾರಿ ಪ್ರೌಢಶಾಲೆಯ ವಿಶಿಷ್ಟ ಕಾರ್ಯಕ್ರಮಗಳ ವರದಿಗಳನ್ನೊಳಗೊಂಡ ಪತ್ರಿಕೆ ಶಾಲೆಯ ಮುಖವಾಣಿಯಾಗಿದೆ.ಅಲ್ಲದೇ ಸರಕಾರಿ ಪ್ರೌಢಶಾಲೆಯೊಂದು ತನ್ನ ಮುಖವಾಣಿಯನ್ನು ನಿರಂತರವಾಗಿ ಪ್ರಕಟಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿ ಸಂಪಾದಕ ಬಳಗ

ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಸಂಪಾದಕ ಬಳಗ ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಸಹಪಾಠಿಗಳಿಂದ ಬರಹಗಳನ್ನು ಸಂಗ್ರಹಿಸುವುದು, ಅವುಗಳನ್ನು ಓದುವುದು, ಚರ್ಚಿಸುವುದು, ತಿದ್ದುವುದು, ಅಂತಿಮ ಸ್ವರೂಪ ನೀಡುವುದು ಹೀಗೆ ವಿದ್ಯಾರ್ಥಿಗಳಲ್ಲಿ ಸಂಗ್ರಹ, ಪರಿಶೀಲನೆ, ತಿದ್ದುಪಡಿ, ಅಂಕಣ, ಸಂಪಾದನೆ, ವಿನ್ಯಾಸ ಮುಂತಾದ ಪತ್ರಿಕಾ ಕೌಶಲಗಳನ್ನು ಹೊಂದಲು ಸಹಾಯಕವಾಗಿದೆ.ಈ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಪಾಲಕರು, ಹಳೆಯ ವಿದ್ಯಾರ್ಥಿಗಳಿಗೂ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಾಲೆಯ ಕಾರ್ಯಕ್ರಮಗಳ ವರದಿ ಸಿದ್ಧಪಡಿಸುವಿಕೆ, ನುಡಿಚಿತ್ರ, ನಮ್ಮೂರು ಹಾಗೂ ನಮ್ಮೂರ ಸಾಧಕರು ಎಂಬ ನಿರಂತರ ಅಂಕಣ- ಗಳನ್ನು ವಿದ್ಯಾರ್ಥಿ ಸಂಪಾದಕ ಬಳಗವೇ ಜವಾ ಬ್ದಾರಿಯಿಂದ ನಿರ್ವಹಿಸಿಸುತ್ತದೆ. ಸ್ಥಳೀಯ ದಾನಿಗಳ ಸಹಾಯ ಪತ್ರಿಕೆಯನ್ನು ಪ್ರತೀ 02 ತಿಂಗಳಿಗೊಮ್ಮೆ ಮುದ್ರಿಸಿ ಮಕ್ಕಳಿಗೆ ಹಂಚಲಾಗು ತ್ತದೆ. ಇದಕ್ಕೆ ಐದಾರು ಸಾವಿರ ರೂಪಾಯಿಗಳ ವೆಚ್ಚ ತಗಲುತ್ತದೆ. ಗ್ರಾಮ ಪಂಚಾಯತಿಸದಸ್ಯರು, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಣಾಸಕ್ತರು ಒಬ್ಬೊಬ್ಬರು ಒಂದೊಂದು ಸಂಚಿಕೆ ಜವಾಬ್ದಾರಿ ಯನ್ನು ನಿರ್ವಹಿಸುತ್ತಾರೆ. ಸಮುದಾಯದ ಸಹಭಾಗಿತ್ವದಲ್ಲಿ ಪತ್ರಿಕೆ ಮುದ್ರಣವಾಗುತ್ತಿರುವುದ ರಿಂದ ಗ್ರಾಮದ ಜನರೆಲ್ಲ ನಮ್ಮ ಪತ್ರಿಕೆ ಎಂದು ಅಭಿಮಾನದಿಂದ ಹೇಳುವಂತಾಗಿದೆ.ಮಕ್ಕಳಂತೂ ತಮ್ಮ ಬರಹ, ಫೋಟೋ ಪ್ರಕಟಗೊಂಡಾಗ ತುಂಬಾ ಸಂತಸಪಡುತ್ತಾರೆ.

ಪ್ರಯೋಗಶೀಲ ಶಿಕ್ಷಕ ಡಾ.ಲಿಂಗರಾಜ ರಾಮಾಪೂರ

ತಮ್ಮ ವೃತ್ತಿಯುದ್ದಕ್ಕೂ ಸದಾ ಒಂದಿಲ್ಲೊಂದು ಹೊಸತನ, ಶೈಕ್ಷಣಿಕ ಪ್ರಯೋಗಗಳಲ್ಲಿ ನಿರತರಾಗಿ ರುವ ಶಾಲೆಯ ಆಂಗ್ಲಭಾಷಾ ಶಿಕ್ಷಕರಾದ ಡಾ.ಲಿಂಗರಾಜ ರಾಮಾಪೂರರವರು ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುಬ್ಬಚ್ಚಿ ಗೂಡು, ಟೀಚರ್, ಬಾಲವಿಜ್ಞಾನ ಮುಂತಾದ ಪತ್ರಿಕೆಗಳ ಸಂಪಾದಕ ಸದಸ್ಯರಾಗಿ ಕಾರ್ಯಮಾಡಿರುವ ಅನುಭವವಿದೆ. ಅವರು ನಾಡಿನ ದಿನಪತ್ರಿಕೆ ಗಳಲ್ಲಿ ೩೦೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವರು. ಹಲವು ಅಂಕಣ ಗಳನ್ನು ನಿರ್ವಹಿಸಿದ್ದಾರೆ. ೩೦ಕ್ಕೂ ಹೆಚ್ಚು ಕೃತಿ ಗಳನ್ನು ಬರೆದ ಅವರಿಗೆ ಸಹಜವಾಗಿ ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಆಸಕ್ತಿ, ಶಾಲೆಯಲ್ಲಿನ ಪತ್ರಿಕಾ ಚಳುವಳಿಗೆ ಪೋಷಣೆಯಾಗಿದೆ. ಸ್ವತಃ ತಾವೇ ಲೇಖನ ಟೈಪ್ ಮಾಡುವುದು, ಫ್ರೂಫ್ ರೀಡ್ ಮಾಡುವುದು, ವಿನ್ಯಾಸದ ಕಾರ್ಯವನ್ನು ಮಕ್ಕಳೊಂದಿಗೆ ಕೂಡಿ ಮಾಡುತ್ತಾರೆ. ಪ್ರಾಥಮಿಕ ವಿಭಾಗದ ೨೦ ವರ್ಷಗಳ ಸೇವೆಯಲ್ಲಿ ಜೋಳಿಗೆ ಗ್ರಂಥಾಲಯ, ಪಠ್ಯಾಧಾರಿತ ನಾಟಕ ಪ್ರಯೋಗ, ಸಾವಯವ ಕೃಷಿ ಚಳುವಳಿ, ವಿಜ್ಞಾನ ಮತ್ತು ಪರಿಸರ ಆಂದೋಲನಗಳು, ಮಕ್ಕಳ ವಿಜ್ಞಾನ ಸಮಾವೇಶ, ಪವಾಡ ರಹಸ್ಯ ಬಯಲು ಇತ್ಯಾದಿ  ವಿನೂತನ ಪ್ರಯೋಗ, ಆವಿಷ್ಕಾರಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಪ್ರೌಢಶಾಲೆಗೆ ಪದೋನ್ನತಿ ಯಾದ ಬಳಿಕ ಇಲ್ಲಿಯೂ ಕೂಡ ಹುಟ್ಟುಹಬ್ಬಕ್ಕೆ ಒಂದು ಪುಸ್ತಕ ಕಾಣಿಕೆ, ಸಂತೋಷ ಸಂಗೀತ ಶಿಕ್ಷಣ, ಪತ್ರಿಕಾ ಚಳುವಳಿ ಪ್ರಯೋಗ ರೂಪಿಸಿದ್ದು ವಿಶೇಷವಾಗಿದೆ.

ಶಾಲೆಯೊಂದು ಸಾಹಿತ್ಯ ಪ್ರಯೋಗಾಲಯ

ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಏಕಾಏಕಿ ಸಾಧ್ಯವಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಕಳೆದೆರಡು ವರ್ಷಗಳಿಂದ ಹುಬ್ಬಳ್ಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಶಾಲೆಯಲ್ಲಿ ‘ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದ‘ ಗಳನ್ನು ನಡೆಸಿಕೊಂಡು ಬರಲಾಗು ತ್ತಿದೆ. ಮಕ್ಕಳು ಹಿರಿಯ ಸಾಹಿತಿಗಳ ಜೊತೆಗೆ ಕಾಲ ಕಳೆಯುವ, ಅವರಿಂದ ಪ್ರೇರೇಪಣೆಗೊಳ್ಳುವ ನಿರಂತರ ಪ್ರಕ್ರಿಯೆ ಇದಾಗಿದೆ. ಪ್ರತಿ ಸಂವಾದ ದಲ್ಲಿಯೂ ಹೊಸಹೊಸ ಸಾಹಿತಿಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ. ಡಾ.ಆನಂದ ಪಾಟೀಲ, ಸುಶಿಲೇಂದ್ರ ಕುಂದರಗಿ, ಬಿ.ಎಸ್.ಸೊಪ್ಪಿನ, ಕೆ.ಎಸ್.ಕೌಜಲಗಿ, ಡಾ,ಲಿಂಗರಾಜ ಅಂಗಡಿ ಹೀಗೆ ಹಿರಿಯ ಸಾಹಿತಿಗಳ ದಂಡೇ ಸಾಹಿತ್ಯ ಸಂವಾದ ದಲ್ಲಿ ಭಾಗವಹಿಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ದ್ದಾರೆ. ಕಥೆ, ಕವಿತೆ, ಚುಟುಕು ಬರೆಯವ ಕಲೆಯನ್ನು ಕರಗತ ಮಾಡಿಸಿದ್ದಾರೆ. ಹಿರಿಯ ಸಾಹಿತಿಗಳು ತಮ್ಮ ಕೃತಿಗಳ ಬಗ್ಗೆ ಮಾತನಾಡುತ್ತಾ ಮಕ್ಕಳಿಗೆ ಪ್ರೇರೇಪಣೆ ನೀಡುತ್ತಾರೆ. ಬರೆಯುವ ಕಲೆಯನ್ನು ಸಮಗ್ರವಾಗಿ ಮಕ್ಕಳಿಗೆ ಧಾರೆ ಎರೆಯುತ್ತಾರೆ. ಮಕ್ಕಳ ಎದೆಯ ಗೂಡಿನಲ್ಲಿ ಬರಹದ ಜ್ವಾಲೆ ಹೊತ್ತಿಕೊಳ್ಳುತ್ತದೆ. ಮಕ್ಕಳಿಗೆ ಹಲವು ಕೃತಿಗಳನ್ನು ನೀಡುತ್ತಾರೆ. ಮಕ್ಕಳು ಅವುಗಳನ್ನು ಓದಿ ವಿಶ್ಲೇಷಿಸುತ್ತಾರೆ. ಹೀಗೆ ಶಾಲೆ ಯೊಂದು ಸಾಹಿತ್ಯ ಪ್ರಯೋಗಾಲಯವಾಗಿದ್ದು ಸಾಲಿಗುಡಿ ಪತ್ರಿಕೆಗೆ ಸುಸ್ಥಿರತೆ ಒದಗಿಸುತ್ತದೆ.

ಬೆಳ್ಳಿ ಹಬ್ಬದ ಸಂಭ್ರಮದ ಸಂಚಿಕೆ

ಸಾಲಿಗುಡಿಯ ಪ್ರಥಮ ಸಂಚಿಕೆಯನ್ನು ೨೦೨೨ರ ಎಪ್ರೀಲ್-ಮೇ ದಲ್ಲಿ ಮಕ್ಕಳಪತ್ರಿಕೆಯ ಹರಿಕಾರ, ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಬಿಡುಗಡೆ ಗೊಳಿಸಿ ಹಾರೈಸಿದ್ದಾರೆ. ಇದೀಗ ೯ನೇ ಸಂಚಿಕೆಗೆ ಪತ್ರಿಕೆ ದಾಪುಗಾಲಿಡುತ್ತಿದೆ. ಕಿರೇಸೂರ ಸರಕಾರಿ ಪ್ರೌಢಶಾಲೆ ೧೯೯೮ ಅಗಸ್ಟ ೧೫ರಂದು ಸ್ಥಾಪಿತ ವಾಗಿದ್ದು, ಇದೀಗ ತನ್ನ ಬೆಳ್ಳಿ ಹಬ್ಬದ ಸಂಭ್ರಮ ವನ್ನು ಆಚರಿಸಿಕೊಳ್ಳುತ್ತಿದೆ. ಅದರ ಭಾಗವಾಗಿ ಕಳೆದ ಏಳು ಸಂಚಿಕೆಗಳನ್ನು ಒಟ್ಟುಗೂಡಿಸಿ ಹಲವು ಗಣ್ಯರ ಶುಭಾಶಯಗಳೊಂದಿಗೆ ‘ಸಂಭ್ರಮ-೨೫’ ಎಂಬ ಬೆಳ್ಳಿ ಹಬ್ಬದ ವಿಶೇಷ ಸಂಚಿಕೆಯನ್ನು ಹೊರತರಲಾಗಿದೆ. ಸಂಭ್ರಮ ಸಾಲಿಗುಡಿ ಪತ್ರಿಕೆಯ ಮುಂದುವರಿದ ಭಾಗವೇ ಆಗಿದೆ.

ಹೀಗೆ ಮಕ್ಕಳಲ್ಲಿ ಸುಪ್ತವಾಗಿರುವ ಓದು, ಬರಹ ಕಲೆಯನ್ನು ಹೊರತರುವ ವಿಶಿಷ್ಟ ಪ್ರಯತ್ನವೇ ‘ಸಾಲಿ ಗುಡಿ’. ಇತ್ತೀಚಿನ ದಿನಗಳಲ್ಲಿ ಓದಿನಿಂದ ವಿಮುಖವಾಗುತ್ತಿರುವ ಮಕ್ಕಳಿಗೆ ಓದಿನ ರುಚಿ ಬೆಳೆಸಲೆಂದೇ ಮಕ್ಕಳಿಂದ ಮಕ್ಕಳಿಗಾಗಿ ತರುವ  ಈ ಪತ್ರಿಕೆ ನಿಜಕ್ಕೂ ಮಕ್ಕಳಲ್ಲಿ ಸಾಹಿತ್ಯದ ರುಚಿ ಬೆಳೆಸಲು ಸಹಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.ಒಮ್ಮೆ ಮಕ್ಕಳಲ್ಲಿ ಓದುವ ಬೀಜವನ್ನು ಬಿತ್ತಿದರೆ ಅದು ಹೆಮ್ಮರವಾಗಬಲ್ಲದು. ಭಾಷೆಗಳ ಬೆಳವಣಿಗೆಗೂ ಇದು ಪೂರಕ.ಭಾಷಾ ಕೌಶಲಗಳು ಮಕ್ಕಳಲ್;ಲಿ ನಿರರ್ಗಳವಾಗಿ ವಿಕಾಸವಾಗಲು ಸಹಾಯವಾಗುತ್ತದೆ. ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ, ಚಿಂತನಶೀಲತೆ, ತಾರ್ಕಿಕತೆ ಹಾಗೂ ದಿನನಿತ್ಯದ ಬದುಕಿನಲ್ಲಿ ಅವರು ಕಂಡ ಅನುಭವಗಳಿಗೆ  ಒಂದು ರೂಪಕೊಡುವಲ್ಲಿ ಸಾಲಿಗುಡಿ ಪತ್ರಿಕೆಯ ಪಾತ್ರ ಹಿರಿದಾಗಿದೆ.

✍️ಸಂಪಾದಕರು, ಶ್ರಾವಣ ಬ್ಲಾಗ್