ಬಸವನ ಬಾಗೇವಾಡಿಯಲ್ಲಿ ಜನಿಸಿ,
ಸಮಾಜದಿ ಕ್ರಾಂತಿಯ ಕಿಡಿಯನ್ನೇಬ್ಬಿಸಿ, ಸಂಕುಚಿತ ಭಾವವ ದಹಿಸಿ,
ಕೊಳಕು ಮನವ ಬದಲಾವಣೆಗೆ ಅವತರಿಪ ರೂಪ,
ನಿಚ್ಚ ಪ್ರಜ್ವಲಿಸಿ ಅನುಗಾಲ ಬೆಳಗುವ ಆರದ ದೀಪ.

ಜನಮನದ ಭಾವದಿ ಸಾಹಿತ್ಯವ ಸೃಜಿಸಿ,
ಕಾಯಕದ ತತ್ವವನ್ನು ಎಲ್ಲೆಡೆ ಹಬ್ಬಿಸಿ,
ಮನೆ ಮನಗಳಲ್ಲಿ ಅಂಟಿದ ಜಾಡ್ಯವ ಕಿತ್ತೊಗೆದು
ಹೊಸ ಮನ್ವಂತರದ ಅವತಾರಿ ಬಸವಣ್ಣ.

ಹೆಸರೇ ಉಸಿರಾಗುವಂತೆ ಜೀವಿಸಿ,
ಸಾರ್ಥಕ ಬದುಕಿಗೊಂದು ಅರ್ಥವ ಕಲ್ಪಿಸಿ,
ನುಡಿದಂತೆ ನಡೆದು ನಡೆದಂತೆ ನುಡಿದ
ಕನ್ನಡ ನಾಡಿನ ಧೀಮಂತ ನಾಯಕ ಬಸವಣ್ಣ.

ಅಸ್ಪೃಶ್ಯತೆ ತೊಲಗಿಸಿ, ಮಾನವೀಯತೆಯ ಬೆಳಗಿಸಿ,
ಜಾತಿ-ವಿಜಾತಿ ಎನ್ನದೆ, ಸಮ ಸಮಾಜವ ನಿರ್ಮಿಸಿ,
ಬದುಕು ಬಯಲಾಗಲು ಬದುಕಲೇ ಸಂದೇಶ ತಿಳಿಸಿ,
ತಮ್ಮದೇ ಅಸ್ತಿತ್ವವನ್ನು ನೀಡಿ ಶರಣರೊಂದಿಗೆ ಮನುಷ್ಯತ್ವವ ನಿಲ್ಲಿಸಿ,
ವಚನಗಳ ಮೂಲಕ
ಪ್ರಚುರ ಪಡಿಸಿ, ಸಾಂಸ್ಕೃತಿಕ ಬದಲಾವಣೆಗೆ ಹರಿಕಾರನಾದವ ಬಸವಣ್ಣ.

ನಿಮ್ಮಂತೆ ನಾವಾಗಲಾರೆವು ಅಣ್ಣ,
ನಿಮ್ಮನ್ನೇ ಜಾತಿಯ ರಾಯಭಾರಿಯನ್ನಾಗಿ ಮಾಡಿರುವೆವು ವಿಪರ್ಯಾಸವು ಅಣ್ಣ,
ಸಣ್ಣತನವ ತೋರಿರುವೆವು
ಕ್ಷಮಿಸಿ ಬಸವಣ್ಣ-ಕ್ಷಮಿಸು ಬಸವಣ್ಣ.

✍️ರಾಘವೇಂದ್ರ ಸಿ.ಎಸ್.
ಕನ್ನಡ ಉಪನ್ಯಾಸಕರು
ಮೈಸೂರು