ಹೇಳೋರು ಯಾರು ಇಲ್ಲಿ
ಕಿರು ಪ್ರಶ್ನೆಗಳಿಗೆ ಉತ್ತರ
ಕುತೂಹಲ ಕೆರಳಿಸಿದವಿಲ್ಲಿ
ಸಿಗದ ಪರಿಹಾರಕೆ ತತ್ತರ

ವಿಶಾಲ ಸಮುದ್ರದ ಒಳಕ್ಕೆ
ನೀರು ತುಂಬಿದವರಾರು
ತೀರದಿಂದ ತೀರಕ್ಕೆ ತೀರದ
ಅಲೆಗಳನು ಎಬ್ಬಿಸಿದವರಾರು

ರವಿಯು ರಥ ಏರಿ ಬರುವ
ಮೂಡಣದ ಬಾಗಿಲ ತೆರೆದು
ಕರ್ಮ ಸಂದೇಶವ ಸಾರುವ
ಹೊಸ ಬೆಳಕ ಭಾಷೆ ಬರೆದು

ಜೀವದ ಮೀನುಗಳ ಬಳಗ
ಬೆಳೆಯಿತು ತಾ ಹೇಗೆ ಇಲ್ಲಿ
ಹೇರಳ ಮರಳ ರಾಶಿ ಸೆರಗ
ಯಾರ ತುಂಬಿದರು ಹೇಳಿ

✍️ಕಾವ್ಯಸುತ
(ಷಣ್ಮುಗಂ ವಿವೇಕಾನಂದ)
ಧಾರವಾಡ