ಕೋಗಿಲೆ ಕೂಗಿತ್ತ ! ಪಂಚಮ ಸ್ವರವು ಕೇಳಿತ್ತ !
ಮಾಮರ ತೂಗಿತ್ತ !
ಬೇವಿನ ತಂಪು ಹರಡಿತ್ತ !!

ರವಿಯ ಕಿರಣ ಚಿಮ್ಮಿತ್ತ !
ನವ ಯುಗಾದಿ ಬಂದಿತ್ತ !
ಹೊಂಗೆ ಹೂವು ಅರಳಿತ್ತ !
ಘಮ ಘಮ ಪರಿಮಳ ಬೀರಿತ್ತ !!

ದುಃಖ ದುಮ್ಮಾನ ಕಳೆದಿತ್ತ !
ನವ ಜೀವನ ತಂದಿತ್ತ !
ಹೆಜ್ಜೆ ಮೇಲೆ ಹೆಜ್ಜೆ ಹಾಕುತ !
ಹೊಸ ವರುಷವು ಸಾಗಿತ್ತ !!

ತಳಿರು ತೋರಣ ಹೂಗುಚ್ಛ !
ಮನೆ ಮಂದಿರದಿ ಕಟ್ಟಿತ್ತ !
ಅಂಗಳದಲ್ಲಿ ರಂಗೋಲಿ ಚಿತ್ತಾರ !
ಎಲ್ಲೆಡೆ ಬಿಡಿಸಿತ್ತ ಕಿರು ನಗೆ ಬೀರಿತ್ತ!!

✍️ ಡಾ.ಎಸ್.ಬಿ.ಹಿರೇಮಠ
ಶಿಕ್ಷಕರು
ಎಸ್.ಆರ್.ಪಾಟೀಲ್ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ,ರೋಣ.