ಹಸಿರೆಲೆ ಚಿಗುರಿತು
ಕೋಗಿಲೆ ಕೂಗಿತು
ಪ್ರಕೃತಿ ಕರೆಯಿತು
ಯುಗಾದಿ ಬಂದಿತು.
ಕಹಿಯನು ಕಳೆದು
ಸಿಹಿಯನು ಸವಿದು
ಹಳೆಯದು ಮರೆತು
ಹೊಸತನಕೆ ಸ್ವಾಗತ.
ಹಣ್ಣೆಲೆ ಉದುರಿ
ಮಾಮರ ಚಿಗುರಿ
ಜನರ ಬಾಳಲಿ
ಸಮೃದ್ಧಿ ಮೂಡಲಿ.
ಬಾಗಿಲಿಗೆ ತೋರಣ
ರಂಗೋಲಿಯ ಚಿತ್ರಣ
ಪ್ರಕೃತಿಯ ಗುಣಗಾನ
ದೇವರ ನಾಮಸ್ಮರಣ.
ಹಸಿರಾಯಿತು ಪ್ರಕೃತಿ
ಮೂಡಲಿ ಮನದಿ ಸುಕೃತಿ
ನಶಿಸಲಿ ಮನದ ವಿಕೃತಿ
ಬೆಳಗಲಿ ನಮ್ಮ ಸಂಸ್ಕೃತಿ.
ಹಗೆತನ ಅಡಗಲಿ
ಪ್ರೀತಿಯ ಹಂಚಲಿ
ಪ್ರತಿ ದಿನ ಯುಗಾದಿ ಆಗಲಿ
ಸರ್ವರ ಬಾಳಲಿ

✍️ಶಿವು ಎಂ ಖನ್ನೂರ
ಶಿಕ್ಷಕರು, GHPS ಲಕಮಾಪೂರ
ಧಾರವಾಡ
