ಬೇವು ಚಿಗುರಿ ಹೂ ಬಂತು.
ಕಬ್ಬು ಗಣಿಕೆ ಬೆಲ್ಲ ತಂತು
ಬೇವು ಬೆಲ್ಲ ಸೇರಿ ನಿಂತು
ಯುಗಾದಿ ಹಬ್ಬ ಮಾಡಿರೆಂತು..
ಬೇವು ಬೆಲ್ಲ ಹಂಚಿರೆಂತು…..
ಹೂ, ಚಿಗುರೂ ಎಳೆ ಕೂಸಿನಂತೆ
ಭೃಂಗ ನೂರು..ಆಡಿಸ ಬಂತು
ಅಳುವ ಹೂ, ಅರಳಿ ನಿಂತು
ಯುಗಾದಿ ಮತ್ತೆ ಮರಳಿ ಬಂತು
ಬೇವು ಬೆಲ್ಲ ತಿನ್ನಿರೆಂತು….
ನೋವು, ಬೇವು ಸೂಚಕಾ
ನಲಿವು , ಬೆಲ್ಲ ದ್ಯೋತಕಾ
ಬೇವು ಬೆಲ್ಲ ಮಿಶ್ರಣ, ಬದುಕಿಗಿಂದು ಪ್ರೇರಕಾ
ನೋವು ಮರೆತು ನಕ್ಕರೊಮ್ಮೆ,ನಮ್ಮ ಯುಗಾದಿ ಸಾರ್ಥಕಾ..
ನೋವು, ನಲಿವಿನ ಹಾಡಿನ, ಯುಗಾದಿ ನಮ್ಮ ಗಾಯಕಾ..
ಯುಗಾದಿಯ, ಬಿರು ಬಿಸಿಲಿನ ಧಗೆಗೆ, ಬೆಂದು ಬಳಲುವ ಬದಲು……
ಹಸಿರು, ಉಸಿರು ನೀಡಿ, ಜೀವ ಕುಲಕ್ಕೆ ಹಾಲುಣಿಸುವ ಮಡಿಲು.
ಹಾಡುವ ಕೋಗಿಲೆಗೆ, ದಾಹವಿದು ಯುಗಾದಿ ಬಿಸಿಲು..
ಬದಲಿಗೆ ಯುಗಾದಿ,,ಜೀವ ಜಲ, ಕೋಗಿಲೆಗೆ ಮಾವು ಚಿಗುರುಂಡು ಹಾಡಲು…
ಬೇವು ಬೆಲ್ಲ ತಿಂದುಂಡು, ತೂಗಬನ್ನಿ ಯುಗಾದಿ ತೊಟ್ಟಿಲು……..
✍️ರೇವಣಸಿದ್ದಯ್ಯ V ಶಿವಪೈಯ್ಯನಮಠ
ಹೂಲಿ, ಜಿ: ಬೆಳಗಾವಿ
