ಚೈತ್ರವು ಬಂದಿದೆ ಮೆಲ್ಲನೆ ಮೆಲ್ಲನೆ
ಹೂಗಳ ಅರಳಿಸಿ ಬಿಮ್ಮನೆ ಬಿಮ್ಮನೆ
ಹಕ್ಕಿಯ ಕೊರಳಿಗೆ ಕಚುಗುಳಿಯಿಟ್ಟೂ
ಚಿಲಿಪಿಲಿಯಾಮೋದವನೆಕೊಟ್ಟೂ

ಪ್ರಕೃತಿಗೆ ಹಸಿರೂ ಸೀರೆಯನುಡಿಸುತ
ನಾನಾಬಣ್ಣದ ರವಿಕೆಯತೊಡಿಸುತ
ಹೂವಿನ ಕುಸುರಲಿ ಪನ್ನೀರ ಚೆಲ್ಲೀ
ಬಂದಿದೆ ಚೈತ್ರವು ಸಂತಸದೋರೀ

ಜೀವನ ರಾಗಕೆ ರಾಗವ ಬೆರೆಸುತ
ಯಾಂತ್ರಿಕಬದುಕಿಗೆ ಹೊಸತನ ತರಿಸುತ
ಹಳೆಯಾರಾಗಕೆ ಹೊಸದನಿ ಕೂಡಿಸಿ
ಬಂದಿದೆ ಚೈತ್ರವುಸಂಭ್ರಮಸುರಿಸೀ

ಒಣಗಿದಾ ಮರಕೆ ಜೀವತುಂಬುತ
ವಸಂತನಾಗಮನವನೇ ಸಾರುತ
ವರುಷ ವರುಷವು ಹೊಸತನವ ತೋರುತ
ಜೀವಜಾತಕೆ ಹೊಸಚೇತನ ನೀಡುತ

✍️ಡಾ.ಸತ್ಯವತಿಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್