ಸ್ವಾರ್ಥಿ ದುರುಳ ಪರಕೀಯರ ಆಳ್ವಿಕೆ
ನಲುಗಿತ್ತು ದೇಶ ಸಹಿಸಿ ದಬ್ಬಾಳಿಕೆ
ವಿಮೋಚನೆಗೊಳಿಸಿ ಮಾಡಲು ಸ್ವತಂತ್ರ
ಒಬ್ಬೊಬ್ಬರದು ಒಂದೊಂದು ಹಾದಿ ಪಥ ತಂತ್ರ.

ಗಾಂಧಿ ಮಹಾತ್ಮರದ್ದು ಶಾಂತಿಯ ಮಂತ್ರ
ಸುಭಾಷರು ಏರಿದ್ದು ಕ್ರಾಂತಿಯ ರಥ
ದೇಶದ ಜನತೆ ಹಿಂಬಾಲಿಸಿತು ಇವರ
ಎಲ್ಲರ ಧ್ಯೇಯವೂ ಒಂದೇ ಧರ್ಮ ಸಮರ.

ಶಿವರಾಮ ಹರಿ ರಾಜಗುರು
ಇನ್ನೂ ಇಪ್ಪತ್ತೆರಡರ ಹರೆಯದವರು
ಓಗೊಟ್ಟ ದೇಶದ ಸ್ವಾತಂತ್ರ್ಯ ಕರೆಗೆ
ಕೊರಳೊಡ್ಡಿದ ನೇಣು ಕುಣಿಕೆಯ ಗಂಟಿಗೆ
ಇವನ ಹೆಸರಿಂದ ಅಲಂಕೃತವಾಯಿತು ಅವನೂರು
ಇವರ ತ್ಯಾಗ ಬಲಿದಾನಗಳು ನಮಗುಸಿರು.

ದೇಶದ ಹುತಾತ್ಮರ ಹೆಸರಲ್ಲಿ ಅಗ್ರ ಸಾಲು ಭಗತ್ ಸಿಂಗ್
ಬಾಲ್ಯದಲ್ಲೇ ಜಲಿಯನ್ ವಾಲಾಬಾಗ್ ಕಂಡು ಮರುಗಿ
ತಾಯ ದಾಸ್ಯ ಸಂಕೋಲೆ ಬಿಡಿಸಲು ಯತ್ನಿಸಿದ ತ್ಯಾಗಿ
ಅದಕ್ಕಾಗೇ ಸಂಗ್ರಾಮದ ಹಾದಿ ಕ್ರಾಂತಿಕಾರಿಯಾಗಿ.

ಹಿಂದೂಸ್ತಾನ್ ಸೋಷಿಯಲ್ ರಿಪಬ್ಲಿಕ್ ನಲ್ಲಿ ಹಿರಿಯ
ಬಾಳ ಲೆಕ್ಕಾಚಾರದಲ್ಲಿ ಇನ್ನೂ ಇಪ್ಪತ್ತ್ಮೂರರ ಹರೆಯ
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿ ಕೊಟ್ಟ ವೀರ
ಕ್ರಾಂತಿಕಾರಿಯಾಗಿ ಬ್ರಿಟಿಷರನ್ನು ನಡುಗಿಸಿದ ಧೀರ.

ದೇಶಕ್ಕಾಗಿ ತಮ್ಮ ಸ್ವಹಿತವನ್ನು ಮರೆತ
ಸ್ವಾರ್ಥರಹಿತವಾಗಿ ಸ್ವಾತಂತ್ರ್ಯ ಸಂಗ್ರಾಮ ನಿರತ
ಪ್ರಾಣತ್ಯಾಗ ಮಾಡಿದ ಇವರು ಎಂಥ ಮಾತೆಯ ಸುಪುತ್ರರು
ಎನಿತು ಧನ್ಯಳೋ ತಾಯಿ ಭಾರತ ಮಾತೆ ಇವರನ್ನು ಪಡೆದು

✍️ಸುಜಾತಾ ರವೀಶ್
ಮೈಸೂರು