ಓ! ಬನ್ನಿ ಬನ್ನಿರಿ ನನ್ನ ಮಿತ್ರರೇ
ರಂಗು ರಂಗಿನ ರಂಗಿನಾಟಕೆ
ತುಂಬಿ ತುಳುಕುತಿಹ ರಂಗನೆಲ್ಲವ
ತುಂಬಿ-ತುಂಬಿ ಗೊಜ್ಜ ಬನ್ನಿ
ರಂಗು ರಂಗಿನ ಮೇಘ ಮಾಲೆಯ
ಇಲ್ಲಿ ಎಲ್ಲ ತೋರ ಬನ್ನಿ
ಬದುಕು ಬಣ್ಣದ ನೆಲದ ಮೇಲೆ
ನೆನಪು – ಬಣ್ಣವ ನೆನಸ ಬನ್ನಿ
ನೆನಪಿನಂಗಳದ ಬಯಲ ಮೇಲೆ
ನೂರು ಅನುಭವ ಹೇಳ ಬನ್ನಿ
ಕೇಕೆ ಹಾಕುತ ಕಿರುಚಿ ಒದರಲು
ನಕ್ಕು ನಗಿಸಲು ನಗುವ ತನ್ನಿ
ರಂಗು ರಂಗಿನ ಕವಿತೆ ಕೇಳಲು
ನಿಮ್ಮ ಹೃದಯದ ಕಿವಿಯ ತನ್ನಿ
ರಂಗು ರಂಗಿನ ಕನಸುಗಳನು
ನನಸುಗೊಳಿಸಲು ರಂಗು ತನ್ನಿ
ಐಕ್ಯ ಭಾವವ ಬಿತ್ತಿ ಬೆಳೆಯಲು
ನೂರು ನೋವುಗಳ ಮರೆತು ಬನ್ನಿ

✍️ಶ್ರೀ ವೈಭವ ಪೂಜಾರ
ಹುಬ್ಬಳ್ಳಿ

ಕವಿಗಳು ಬರಿ ಕವಿತೆ ಬರಿಯೋದಲ್ಲಾ ,ವೈಯಕ್ತಿಕವಾಗಿ ಸೇರುವ,ಭೇಟಿ ಆಗುವ ಯೋಚನೆನು ಮಾಡಿ,ಶುಭವಾಗಲಿ
LikeLiked by 1 person