ಇನಿಯನು ರಂಗಿಸಿದ ರಂಗೋಲಿ
ಚಂದ್ರ ಚೆಂದದ ಕಳೆಯಾ
ಕಣ್ಣಲಿ
ನೈದಿಲೆ ಬಳಿದು ಬೆರೆತ ಹೃದಯ
ಆಸೆ ಸುಮಗರಳಿ ನಾಚಿಸಿದಾ
ಪರಿಯಾ
ಕಡಲ ರಾಣಿಯ ತೆರೆಯ
ಹೊಂಗಿರಣ
ಸುಂದರಿ ವದನಕೆ ಮೆತ್ತಿದ
ಗೋಧೂಳಿ
ರಾಧಾ ಮನೋಹರ ಪ್ರೇಮ
ಸ್ಫುರಿಪಾಕರ್ಷಣ
ಕಾಮ ಸೋಮನ ಪುಷ್ಪಗಳಾ
ಸಪ್ತವರ್ಣಾವಳಿ
ತೋರಿ ಸೆಳೆದಿದೆ ರಾಧೆ ಮುರಳಿ
ವಲವಾ
ಸಾರಿ ಕರೆದಿದೆ ಜೋಡಿಯ
ಶ್ಯಾಮಲ ರಂಗಿಸುತ
ಭೇದ ಮರೆತು ಹೆಣ್ಣುಗಂಡಿನ ಹೋಳಿ ಆಟವಾ
ಬಣ್ಣದ ಮನಸುಗಳು ಮುಖ
ಚಿತ್ರವು ಬಿಡಿಸುತ
ಸಂಭೃಮಿಸುವರೆಲ್ಲ ಕಾಮಬಿಲ್ಲ
ಮುಖಗಳಿದ್ದಂತೆ ಭಾವ ಕೆನ್ನೆಲ್ಲ
ವಿರಹಾಗ್ನಿಗೆ ಬೆಂದು ನೊಂದು ಮನ
ಆ ರತಿಮನ್ಳಥರ ಶಿವ ಕೊಟ್ಟು
ವರ್ಣದಾ ಐದಿನ.
✍️ಶ್ರೀಧರ.ಭ.ಸತ್ತಿಗೇರಿ.
ಹುಬ್ಬಳ್ಳಿ
