ಯಾರಿಗೆ ಗೊತ್ತು ಮತ್ತೆ ಬಾಳಿಗೆ ಹೋಳಿ
ಸಿಗುವುದೊ ಇಲ್ಲವೊ
ಬಣ್ಣವಾಡಲು ಮತ್ತೆ ನಾಳೆಗೆ ಹೋಳಿ
ಸಿಗುವುದೊ ಇಲ್ಲವೊ
ಆಡಿಬಿಡು ಹೋಳಿ ಬದುಕು ಬಣ್ಣ ಬದಲಿಸುವ
ಮೊದಲು
ತುಂಬಿಬಿಡು ರಂಗು ಮನದೊಳಗೆ ಹೋಳಿ
ಸಿಗುವುದೊ ಇಲ್ಲವೊ
ಆಮೇಲೆ ಎನುತ ನಲಿವು ನೆಮ್ಮದಿಗಳಿಗೆ
ಬೇಕೆ ಸಮಯ?
ಕಾಯದು ಕಾಲ ಕಾಯುವ ವೇಳೆಗೆ ಹೋಳಿ
ಸಿಗುವುದೊ ಇಲ್ಲವೊ
ಗಡಿಬಿಡಿ ಬದುಕಿನಲಿ ಸುಡುಗಾಡು ಎಷ್ಟೆಲ್ಲ
ಒತ್ತಡಗಳು
ಬಿಡಿಗಾಸಿನ ಈ ಹೊಣೆಗಳಿಗೆ ಹೋಳಿ
ಸಿಗುವುದೊ ಇಲ್ಲವೊ
ಬೆನ್ನೇರಿದ ಬವಣೆಗಳಿಗೆ ಬೇಸತ್ತು ಹೋಗಿದೆ
ಈ ಜೀವನ
ಬಣ್ಣಗಳೆ ಮಾಸುತಿವೆ ಕೊನೆಗೆ ಹೋಳಿ
ಸಿಗುವುದೊ ಇಲ್ಲವೊ

✍️ಡಾ.ಶ್ರೀಶೈಲ ಮಾದಣ್ಣವರ
ಧಾರವಾಡ
