ಬಣ್ಣಾ, ಒಲವಿನ ಬಣ್ಣಾ,
ಈ, ಬದುಕಿನ ಬಣ್ಣಾ
ಈ ಜೀವನ ವೆಂಬುದು ಬಗೆ ಬಗೆ ವರ್ಣಾ
ಕಾಮನೆ ಬಿಟ್ಟರೆ ಅದುವೇ ಸುವರ್ಣಾ
ಅಂದು ಮನ್ಮಥ ನ ಹೂ ಬಾಣ
ನಮ್ ಶಿವನ ತಪ ಹರಣ
ಬೆಂದ, ನಮ್ಮ ಕಾಮ ದೇವ ಆದಿನ
ನೊಂದ ರತಿ ಮನ್ಮಥರ ಅಮರ ಕಥನ
ತ್ಯಾಗದಿ ರತಿ ಮನ್ಮಥ ರ ತುಂಬು ಶ್ಲಾಘನ
ಪರ ಶಿವ, ಪಾರ್ವತಿ ಅನನ್ಯ ಕಲ್ಯಾಣ
ಜಗದೀಶನಿಂದ ಜಗಕೇ ಶುಭ ತೋರಣ
ಅದುವೇ ಈ ಸ್ಮರಣೀಯ ಹೋಳಿ ಹುಣ್ಣುವಿ ದಿನ
“ಮರೆಯ ದಿರೋಣ, ರತಿ ಮನ್ಮಥರಂಥ ತ್ಯಾಗಿ ಜೀವಿಗಳನ”
✍️ಶ್ರೀ ಆರ್.ಪಿ.ಕುಲಕರ್ಣಿ
ಧಾರವಾಡ
