ಬಗೆದು ನೋಡಬೇಕೆಂಬ ಹಂಬಲ
ಇರಬೇಕು ನಮ್ಮವರೆಲ್ಲರಲ್ಲೂ ಛಲ
ನಮಗಿರಬೇಕು ನಮ್ಮವರೆಂಬ ಮಿಡಿತ
ಎಲ್ಲರಿಗು ಸಮಭಾವವನ್ನೇ ಬಯಸುತ್ತ

ಗಾಣಿಗನೆಂದರೆ ಅದೇನೋ ಶಾಪ, ಹಾಂ?
ಅಡಗಿಕೂತಿದೆ ಕುಟಿಲತೆ, ಕಾಲೆಳೆಯುತ್ತ!
ತಪ್ತತೆಯಿಂದ ಮನವು ಖೇದಗೊಂಡು
ಮುರುಟಿದಂತಾಯ್ತು ಸಣ್ಣತನ ಕಂಡು

ಬಾರದಿದ್ದರು ಕರೆ ಅದೇನೋ ಓಗೊಟ್ಟು
ಕಂಡದ್ದೇನು ಹೋದರೆ ಅಭಿಮಾನವಿಟ್ಟು
ಕನಲಿದ ಕೆನೆತ, ಅಲೆಅಲೆಗಳ ಮೊರೆತ
ನಿಸ್ಪೃಹತೆಗೆ ಅಲ್ಲೊಂದಿಷ್ಟು ನಿಟ್ಟುಸಿರು!

ನಮಗಿದೆಂತಹ ಪರಿಪರಿಯಾದ ಪೀಡನೆ?
ಗಾಣದೈವವೆ ಭಿನ್ನೈಸುವೆವು ನಾವ್ ನಿನಗೆ
ನೀನಲ್ಲದೆ ಮತ್ತಾರಿಹರು ಇನ್ಮುಂದೆ ನಮಗೆ
ಕರುಣೆದೋರುವೆಯಾ ನೀನೆಮ್ಮ ದೈವವು?

✍️ಅಮರ್ಜಾ
(ಅಮರೇಗೌಡ ಪಾಟೀಲ) ಜಾಲಿಹಾಳ
ಬುತ್ತಿ ಬಸವೇಶ್ವರ ನಗರ,ಕುಷ್ಟಗಿ)