ಕಂಗಳಿಗೆ ಸಿದ್ದರನು ಕಾಣುವ ತವಕ
ಮನಸಿಗೆ ಸಿದ್ದರ ದರ್ಶನವೆ ಭಾವುಕ
ಭಕ್ತಿಯಲಿ ನೆನೆದರೆ ಸೌಭಾಗ್ಯ ಪುಳಕ
ಮಗು ಕಾಯುವ ಸಿದ್ದ ಬರುವ ತನಕ
ಗುರುಕಥೆಯ ಶ್ರವಣಕೆ ಮನನವು ಜೀವ
ಗುರುಪಾದಕೆ ವಂದಿಸುತ ಶರಣಾದ ಭಾವ
ಗುರು ಕೀರ್ತನೆಗೆ ಆತ್ಮನಲಿ ತಾನೂ ಬೆರೆವ
ಗುರು ಪ್ರಾರ್ಥನೆಗೆ ಪರಮಾತ್ಮನೆ ತಾ ಕರೆವ
ಕಿರು ಕ್ಷಣಕೆ ಅರಿವಿಗೆ ಮೊರೆ ಹೋಗಿ ನೆಲೆಸಿದ್ದರು
ತ್ರಿಜ್ಞಾನ ಸುಜ್ಞಾನ ಶಿವನ ಜ್ಞಾನವನು ಕಲಿಸಿದ್ದರು
ಆತ್ಮದೊಳಗೆ ಪರಮಾತ್ಮ ಸಂತೃಪ್ತಿ ಕರುಣಿಸಿದ್ದರು
ಶರಣಾತ್ಮನಲಿ ಜೀವತತ್ವವ ಬೆಳಗಿಸಿದರು ಸಿದ್ದರು
ನಿಮ್ಮ ಶ್ರೀ ಚರಣಕೆ ಶರಣು ಗುರುಶ್ರೀ ಸಿದ್ಧಾರೂಢರೆ
ನಿಮ್ಮ ಕರುಣೆ ಕೋರಿಹೆನು ಗುರುಶ್ರೀ ಸಿದ್ದಾರೂಢರೆ
ನಿಮ್ಮ ಸೇವೆಯ ಕೇಳಿಹೆನು ಗುರುಶ್ರೀ ಸಿದ್ದಾರೂಢರೆ
ನಿಮ್ಮನಗಲಿ ನಾನೀರಲಾರೆ ಗುರುಶ್ರೀ ಸಿದ್ದಾರೂಢರೆ
✍️ಕಾವ್ಯಸುತ
(ಷಣ್ಮುಗಂ ವಿವೇಕಾನಂದ)
ಧಾರವಾಡ
