ಮದುವೆಯಾಗಿ ಹತ್ತು
ವರ್ಷಗಳ ನಂತರ..
ಮಹಾಶಿವರಾತ್ರಿಯಂದು
ಪತಿರಾಯ ನುಡಿದ..
“ಸತಿ ಇಂದಾದರೂ
ಮಾಡೋಣ ಜಾಗರಣೆ
ಶಿವನಿಗೆ ಭಕ್ತಿಸಮರ್ಪಣೆ”
ದುಃಖದಿ ಕಣ್ಣೀರಿಡುತ
ಮಡದಿ ನುಡಿದಳು..
“ಇಂದಲ್ಲ ಪ್ರತಿರಾತ್ರಿ
ನಿಮ್ಮ ಕೈ-ಹಿಡಿದ
ದಿನದಿಂದಲೂ ನಾನು..
ಮಾಡುತಿಹೆ ಜಾಗರಣೆ
ನಿತ್ಯರಾತ್ರಿ ಶಿವಸ್ಮರಣೆ”
“ಸಲ್ಲಿಸುತಿಹೆ ಹರಕೆ
ನಿಲ್ಲಿಸೆಂದು ನಿಮ್ಮ-ಗೊರಕೆ
ತಿಳಿಯಿತಾ ನಿದ್ರಾಕಂಟಕ
ನನ್ನ ಪತಿಪರಮೇಶ್ವರಾ
ಘನಘೋರ ಗೊರಕೇಶ್ವರಾ”!

✍️ಎ.ಎನ್.ರಮೇಶ್. ಗುಬ್ಬಿ
