ದೇವಾ ಜಗದೀಶನೇ ಹರಸು ಕರುಣಾ ಸಾಗರನೆ
ಬಿಡದೆ ಸಲಹುತಾ ಪೊರೆಯೆ ಶ್ರೀಕೈಲಾಸನಾಥನೆ
ಬೇಡಿದ ವರಗಳ ಕೊಟ್ಟು ಕರುಣಿಸೊ ಶ್ರೀಹರನೆ
ಭಜಕರ ಮೊರೆಯ ಆಲಿಸು ದೇವಾ ಭಗವಂತನೆ
ಮಾಘ ಮಾಸದ ಬಹುಳ ಚತುರ್ದಶಿ ಶುಭ ದಿನವು
ಲಿಂಗರೂಪ ತಾಳಿ ಹರ ಹರಸಿದ ಸರ್ವಶ್ರೇಷ್ಠ ದಿನವು
ಅಜ್ಞಾನ ಕಳೆದು ಸುಜ್ಞಾನ ಬೆಳಗಲು ಬೇಡುವ ದಿನವು
ಮಹಾ ಶಿವರಾತ್ರಿ ಎಂಬ ಶ್ರೀ ಪರಮೇಶ್ವರನ ದಿನವು
ಶಿವಪ್ರಿಯ ಬಿಲ್ವ ಪತ್ರೆ ತಿಲಗಿ ಪುಷ್ಪ ತುಳಸಿ ಅರ್ಪಿಸಲು
ಶಿವ ಭಜನೆ ಉಪವಾಸ ಜಾಗರಣೆ ಮಾಡಿ ಭಜಿಸಲು
ಶುಭ್ರ ಚಂದ್ರನ ಬೆಳಕಿನಲಿ ಅಭಿಷೇಕದಿ ಆರಾಧಿಸಲು
ಶಿವನೊಲಿಯುವನು ಜಗದಿ ಸಕಲರನು ಪೊರೆಯಲು

ಡಾ.ವಾಣಿಶ್ರೀ ಕಾಸರಗೋಡು
