ಪ್ರೇಮಿಗಳ ದಿನಾಚರಣೆ ೧೪ ಫೆಬ್ರುವರಿ.
ನೀನೇನೂ ಮಾಡಬೇಡ ವರಿ.
ಹಿಡಿ ಕೈಯಲ್ಲಿ ಕೆಂಪು ಗುಲಾಬಿ ಕುಚ್ಚು.
ಗುಲಾಬಿ ಎಂದರೆ ಪ್ರೇಮಿಗಳಿಗೆ ಅಚ್ಚು ಮೆಚ್ಚು.
ನೀ ಮೆಚ್ಚಿದ ಹುಡುಗಿಗೆ ಕೊಟ್ಟು ನೋಡು ಕೆಂಪು ಗುಲಾಬಿ.
ಮತ್ತೊಬ್ಬ ಹುಡುಗನನ್ನು ಮೆಚ್ಚಿದ ಹುಡುಗಿಗೆ ಮಾಡಬೇಡ ನೀ ಲಾಬಿ.
ಲಾಬಿ ಮಾಡಿ ಎಣಿಸಬೇಡ ಕಂಬಿ.
ಕೆಂಪು ಬಣ್ಣ ಸೂಚಿಸುವದು ಪ್ರಬುದ್ಧತೆ.
ಇರಲಿ ನಿಮಗೆ ಬದ್ಧತೆ.
ನೀ ಕೊಟ್ಟು ನೋಡು ನೀ ಮೆಚ್ಚುವ ಹುಡುಗಿಗೆ ಕೆಂಪು ಗುಲಾಬಿ ಕುಚ್ಚು.
ಪ್ರೀತಿಯ ಗುಲಾಬಿ ಕೊಡಲು ಬೇಕು ಕೆಚ್ಚು.
ಹುಡುಗಿ ಸ್ವೀಕರಿಸಿದರೆ ನೀನವಳಿಗೆ ಅಚ್ಚುಮೆಚ್ಚು.
ಹುಡುಗಿ ತಿರಸ್ಕರಿಸಿದರೆ ನಿನಗೆ ಹಿಡಿಯುವದು ಹುಚ್ಚು.
ಅದಕ್ಕಾಗಿ ಈ ಹುಚ್ಚು ಹಿಡಿಸುವ ಪಾಶ್ಚಾತ್ಯ ಆಚರಣೆ ಬೇಡ ಯುವಕ ಯುವತಿಯರೆ
✍️ ಶ್ರೀನಿವಾಸ ಪಾಟೀಲ,ಕಡಿವಾಲ
ಕಲ್ಯಾಣ ನಗರ,ಧಾರವಾಡ
