ನನ್ನೀ ಜೀವನದ
ಪ್ರತೀ ತಿರುವಿಗೆ
ಉಸಿರಿಗೆ
ಪ್ರತೀ ಬಯಕೆಗೆ
ಭಾವನೆಗೆ
ದುಃಖವನ್ನು ತುಂಬಿಸಿ ಹೋದ
ನೀನು, ನಗು ನಗುತಾ
ನಲಿಯುತಲಿರುವೆ||೧||

ನನ್ನ  ಜೀವನಕ್ಕೆ
ಕಾರಿರುಳು
ಕರಿಮುಗಿಲು
ಕಪ್ ನೆರಳು
ಇಟ್ಟು ನಗುತಿರುವ
ನೀನು,ನಗುವಿಗೆ ಹುಟ್ಟಿದವಳಾ?
ಅಥವಾ ನಗುತ್ತಲೇ ಹುಟ್ಟಿದವಳಾ!||೨||

ನನ್ನ ಬಾಳಲಿ
ಬರೀ ಮೃಗನಯನಿ ನೀ
ಮೃಗಜಲವು ನೀ
ಮೃಗವಾಂಛೆಯು.
ನೀ ಬಂದ ಉದ್ದೇಶವೆ
ನನ್ನ  ಮೃಗವಧೆ
ಮಾಡಲೇಬೇಕೆಂಬ
ಹಂಬಲವ ತುಂಬಿದ್ದ
ನೀನೆಂಬ  ಮಮಕಾರ||೩||

ನಿನ್ನ  ಕೈಯಿಡಲೆಂದು
ನಾ ಚಾಚಿದ ಕರವ
ನುಂಗಿ ನೀರು ಕುಡಿಯಬೇಕಂಬ
ನಿನ್ನ  ಬಯಕೆಯು ಎಂದಿಗೂ
ತೀರದು, ಗೋವಲ್ಲ  ನೀ
ನನ್ನ  ಸಾವಲ್ಲವೆ.
ನೀನೆ ಮೃಗ,
ಆಗಿದ್ದೆ ನೀನೆ ನನ್ನ  ಜಗ.
ಮರೆತಿರುವೆ  ಹೇಗೆ
ನನಗೂ ಹೇಳಿ ಕೊಡು
ಮರೆತಿರುವುದೇಗೆ?||೪||

ಪ್ರೀತಿಸಲು ಕಾದಿದ್ದೆ
ಪ್ರೀತಿಯನೆ ಬಯಸಿದ್ದೆ
ಪ್ರೀತಿಗಾಗಿಯೆ ಉಸಿರಿದ್ದೆ
ಪ್ರೀತಿಯೊಂದಿಗೆ, ನನ್ನನ್ನೂ
ಕೊಂದ ನಿನ್ನ
ಹೃದಯ ಪೂರ್ಣ
ತುಂಬಿರುವುದು
ಬರೀ ವಿಷವೆ ಅಲ್ಲದೆ
ಮತ್ತಿನ್ನೆನು?
ಪ್ರೀತಿಯ ನಟಿಸಿದ
ರಾಕ್ಷಸಿ? ||೫||

✍️ಜ್ಯೋತಿ ಕುಮಾರ್.ಎಂ(ಜೆ.ಕೆ.)
ಡಾವಣಗೆರೆ