ಸೂರ್ಯ ಸರಿಯಲು ಸಂಜೆ ಹೊತ್ತಲಿ
ಧೈರ್ಯ ಸಾಲದು ಮಬ್ಬು ಗತ್ತಲಿ
ಮೌನ ತಾಳಿದೆ ಮುಪ್ಪು ವಯಸಲಿ ಹೃದಯ ಮಿಡಿದಿದೆ ಕರುಳ ಕುಡಿಗೆ ದಾರಿ ಕಾಯುತಲಿ

ಅಡಿಗೆ ಮಾಡಿದ ಪ್ರೀತಿ ಕರಗಳು
ಊಟ ಬಡಿಸಲು ಕಾದು ಕುಳಿತಳು
ಕರುಳ ಬಳ್ಳಿಯ ಕಾಪಾಡು ಎಂದಳು
ಶಿರವ ಬಾಗುತ ಶಿವನ ನೆನೆವಳು

ಹಡೆದ ತಾಯಿಯು ಪಡೆದ ದೈವವು
ಬಿಡದೆ ರಕ್ಷಿಸು ಇವಳನು ಪ್ರೀತಿಯ ದೇವತೆ
ದುಡಿದು ಸವೆದ ಜನುಮ ದಾತೆ
ಸವೆಸುತ ಬದುಕನು ಬೆಳಕು ನೀಡುತ

✍️ರ.ಗು.ಸುತೆ
(ಡಾ//ಸುಧಾ.ಚ.ಹುಲಗೂರ)
ಧಾರವಾಡ