ಇನ್ನು, ಹೆಚ್ಚಾಗಿ ಯೋಚಿಸುವುದು ಏನಿದೆ?
ನನ್ನ ಪ್ರಾಯ, ಇಗೋ ನಾಲ್ಕು ದಶಕದ ವಸಂತಕ್ಕೆ ನಡುಘಟ್ಟವ ತಲುಪಿ
ಶತಪಥ ತುಳಿಯಲಿದೆ.

ಹೆಜ್ಜೆ ಹೆಜ್ಜೆಗು ಕನಸುಗಳನ್ನು ಹೊತ್ತು
ಸಾಕಾರಗೊಳ್ಳದ ತವಕ ತಲ್ಲಣಗಳೆಲ್ಲವು ಆ ಹೊತ್ತಿಗೆ ಅಂತ್ಯಗೊಳ್ಳಲಿದೆ.ಆಗ! ನನ್ನ ಆಸೆ ಆಕಾಂಕ್ಷೆಗಳು ನಿರಂತರವಾಗಿ
ನಿದ್ರಿಸುತ್ತ ಚಿರಂತನವಾಗಿ ವಿರಮಿಸಿಕ್ಕೊಳ್ಳುತ್ತವೆ.

ಕಾಲ ಗತಿಸಿದ ತರುವಾಯ ಕನಸುಗಳ ಬೆದಕಾಟದಲ್ಲಿ ತಲ್ಲೀನರಾಗುವುದು ಬರೀ ಹುಡುಗಾಟಿಕೆಯಲ್ಲದೇ ಇನ್ನೇನು?

ತ್ರಾಣವಿರದೆ ಸಾಧಿಸುವುದಾದರು ಏನನ್ನ? ಗುರಿಗಳಿಲ್ಲದೇ ಜೀವಿಸುವುದಾದರು ಏಕಿನ್ನ?
ಕಾಲಸಂದು ಹೋಗುವುದರ ಒಳಗೆ
ಕಂಡ ಕನಸುಗಳು ಕೈಗೂಡಲಿಲ್ಲವೆಂದಾದರೆ ಜೀವಿತಾದವಧಿಯ ಉದ್ದಕ್ಕೂ ನಾನು ಜೀವಿಸಲಿಲ್ಲವೆಂಬುದೇ ನಿಜದಲ್ಲಿ ವಾಸ್ತವ, ಕಟುಸತ್ಯ ಎಲ್ಲವು!

✍️ಶಿವಮೊಗ್ಗ ಎಂ ಸುಮಿತ್ರ
ಶಿವಮೊಗ್ಗ