ಬಿಲ್ವಿದ್ಯೆ,ಬಿಲ್ಲು ಬಾಣ ಅಂದಿನ ಕ್ಷಾತ್ರವಂತರ ಆಯುಧವಾಗಿತ್ತು/
ಶಾಸ್ತ್ರೀಯವಾಗಿ ಅಭ್ಯಸಿಸಿ ಶಸ್ತ್ರ ಧಾರಣೆ ಮಾಡುವುದಾಗಿತ್ತು//
ಬದಲಾವಣೆ ಜಗದ ನಿಯಮ,ರಣಾಸ್ತ್ರಗಳು ಬದಲಾದವು/
ಬಿಲ್ವಿದ್ಯೆ ಗತ ಕಥೆಗಳ ಅಂಶವಾಗಿ ಇತಿಹಾಸ ಸೇರಿದವು//
ಸುಮ ಬಾಣ ಹೂಡಿ ಮುಕ್ಕಣ್ಣನ ಕೆಂಗಣ್ಣಿಗೆ ಗುರಿಯಾದ ಮನ್ಮಥ/
ಬಿಲ್ವಿದ್ಯೆಯಲ್ಲಿ ಪಾಥ೯ನ ಮೀರಿಸಿ ಬೆಳೆದ ಕಣ೯ ಮಹಾರಥ//
ಮುಲೋ೯ಕ ಪ್ರಸಿದ್ಧ ಧನಂಜಯ ಪರಶಿವನಿಂದ ಪಾಶುಪತಾಸ್ತ್ರ ಪಡೆದ/
ಕೋದಂಡಪಾಣಿ ಶ್ರೀ ರಾಮನ ಬಾಣಕ್ಕೆ ರಾವಣ ಹತನಾದ//
ಕಲಿಯುಗದಲ್ಲಿ ಹದಿವೀರರು ಹಲವರು
ಕಿಶೋರಿಯರ ನೇತ್ರ ಬಾಣಕ್ಕೆ ತತ್ತರಿಸುವರು/
ಕಣ್ಬಾಣದ ಉರಿಯ ನಿಯಂತ್ರಿಸಲಾಗದೆ ವಿಲಿವಿಲಿಯಾಗುವರು//
ಹೆಂಗಳೆಯರು ಪುಷ್ಪಗಳಿಂದಲಂಕೃತ ಬಿಲ್ಲು ಬಾಣಗಳ ರಚಿಸಿಹರು/
ಅಯೋಧ್ಯಾಪುರಿಯಲ್ಲಿ ಪ್ರತಿಷ್ಠಾಪಿಸಲಿರುವ ಶ್ರೀರಾಮನಿಗೆ ಅಪಿ೯ಸಲಿರುವರು//

✍️ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ)
ಹುಬ್ಬಳ್ಳಿ.
