ಏಕೆ ಈ ವ್ಯಾಕುಲ, ಪ್ರೀಯ ಮಮ್ಮಗಳೇ?
ಖಿನ್ನಳಾಗದಿರು, ಹೇ ನಮ್ಮ ಹಸುಳೆ
ಉಪಾಯ ಉಂಟು ಎಲ್ಲದಕೂ ತಿಳಿ ಕರುಳೆ
ಜೀವನ ಸುಧೀರ್ಗವಾಗಿದೆ, ಓ ಮರುಳೆ!
ಹಿರಿಯರಿಹರು, ಮಿಡಿದು ಓದಿಸಲು
ಗುರುಗಳಿಹರು ಬೆಳಕು ಹಿಡಿಯಲು
ತಾಯಿ, ತಂದೆಯಂತೂ, ಮಕ್ಕಳಿಗೇ ಮೀಸಲು
ಅವರೇ ನಿಜದಿ ದೇವರು,ಕಲ್ಯಾಣ ಮಾಡಲು
ಮರುಗದೇ, ಕೊರಗದೇ, ನೀ ಏಳು.
ಏಳು, ಎದ್ದೇಳು, ಎಚ್ಚರಾಗು ಎಂಬ ವಿವೇಕರ ನುಡಿ ಕೇಳು, ನೀ ಕೇಳು
ಮಾರ್ಗ ಬಹಳವಿದೆ, ನಿನಗಿನ್ನೂ ಕ್ರಮಿಸಲು
ಮಮ್ಮಗಳೇ, ನಗು, ತುಸು ನಗು
ಅರಿತು, ಮರೆತು, ಮನದ ಕೊರಗು
ಪ್ರಸಂಗಗಳು ಬರುವವು ಎಲ್ಲರಿಗೂ
ಸಂಯಮದಿ, ಪರಿಶ್ರಮದಿ ನೀ ಜಯಿಸುವಿ ಅವ್ವಾ, ನೀ ನಗು ನಗುತಿರು

 ✍️ಶ್ರೀ ಆರ್.ಪಿ.ಕುಲಕರ್ಣಿ ಅಜ್ಜಾ. ಪುಣೆ.