ನಾಡಿನ ದೇವಾಲಯಗಳಲ್ಲಿ ಹಲವು ದೇವರಿಗೆ ದೇವಾಲಯಗಳು ನಿರ್ಮಾಣ- ವಾಗಿದ್ದರೂ ವಿಜಯನಗರ ಮತ್ತು ನಂತರದ ಕಾಲದಲ್ಲಿ ಹಲವು ವೆಂಕಟರಮಣ ಹಾಗೂ ರಂಗನಾಥನ ದೇವಾಲಯ ಗಳು ನಿರ್ಮಾಣ ವಾಗಿದೆ. ರಾಜ್ಯದ ಬಹುತೇಕ ಕಡೆ ನಂತರ ವೆಂಕಟರಮಣ ದೇವಾಲಯವನ್ನು ನೋಡ ಬಹದು. ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪಿಳ್ಳಂಗೇರಿಯ ದೇವಾಲಯವೂ ಒಂದು.
ಇತಿಹಾಸ ಪುಟದಲ್ಲಿ ಪಿಳ್ಳಂಗೇರಿ ಒಂದು ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದ್ದು ಸಿಕ್ಕ ಒಂದು ಶಾಸನ ಇಲ್ಲಿನ ಈಶ್ವರ ದೇವಾಲಯದ ಉಲ್ಲೇಖ ವನ್ನು ನೋಡ ಬಹುದು. ಆದರೆ ವೆಂಕಟರಮಣ ದೇವಾಲಯ ನಂತರ ಕಾಲದಲ್ಲಿ ಪಾಳೇಗಾರ ರಿಂದ ಆದ ನಿರ್ಮಾಣ. ಈ ದೇವಾಲಯ ಪಿಳ್ಳಯ್ಯ ಎಂಬ ಪಾಳೇಗಾರ ತನ್ನ ಕನಸಿ ನಲ್ಲಿ ಬಂದ ರಂಗನಾಥನ ಕೋರಿಕೆ ಮೇರೆಗೆ ಈ ದೇವಾಲಯ ನಿರ್ಮಿಸಿದ ಕಾರಣ ಪಿಳ್ಳಂಗೇರಿ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿನ ಮೂರ್ತಿಯನ್ನು ರಂಗನಾಥ, ವೆಂಕಟರಮಣ ಎಂದೇ ಕರೆಯ ಲಾಗುತ್ತದೆ. ಸ್ಥಳಿಯ ಪುರಾಣದಂತೆ ಇಲ್ಲಿ ಮಹೇಂದ್ರ ತನ್ನ ಶಾಪವನ್ನು ಇಲ್ಲಿ ತುಂಗಾ ನದಿಯಲ್ಲಿ ಪರಿಹರಿಸಿಕೊಂಡ ಕಾರಣ ಇಲ್ಲಿಗೆ ಮಹೇಂದ್ರಗಿರಿ ಎಂಬ ಹೆಸರು ಬಂದಿದ್ದೆ ಎನ್ನಲಾಗಿದೆ. ಇಲ್ಲಿ ನದಿಯಲ್ಲಿ ಮಹೇಂದ್ರ ಮಂಟಪ ಈಗಲೂ ಇದೆ.

ದೇವಾಲಯ ಮೂಲತ: ಸುಮಾರು 16 – 17 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಗರ್ಭಗುಡಿ, ಸುಖನಾಸಿ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ರಂಗನಾಥ ಎಂದು ಕರೆಯುವ ಶಿಲ್ಪವಿದೆ. ಶ್ರೀ ಲಕ್ಷ್ಮೀ ವೆಂಕಟರಮಣ ಎಂದೇ ಪೂಜಿತನಾಗುವ ಈ ಶಿಲ್ಪ ಇಲ್ಲಿನ ಪ್ರಮುಖ ದೇವರು. ಗರ್ಭ ಗುಡಿಯ ಬಾಗಿಲ ವಾಡದಲ್ಲಿ ಲೋಹದ ಹೊದಿಕೆ ಇದ್ದು, ದಶಾವತಾರ ಗಳ ಕೆತ್ತನೆ ನೋಡಬಹುದು.ಚಕ್ರ, ಶಂಖ, ಗಧಾ ಹಾಗೂ ಪದ್ಮಧಾರಿಯಾದ ಶಿಲ್ಪದ ಪ್ರಭಾವಳಿ ಸರಳ ವಾಗಿದ್ದು, ಕೀರ್ತಿಮುಖವಿದೆ. ಕೊಳಗದ ಮಾದರಿಯ ಕಿರೀಟವಿದ್ದು, ಕಾಲಿನ ಕಡಗ, ಕೊರಳಿನ ಹಾರಗಳು ಗಮನ ಸೆಳೆಯುತ್ತದೆ.

ಸುಖನಾಸಿಯ ದ್ವಾರದಲ್ಲಿ ವೈಷ್ಣವ ದ್ವಾರಪಾಲಕ- ರಿದ್ದು, ತ್ರಿಶಾಖ ಮಾದರಿಯ ದ್ವಾರವಿದೆ. ನವರಂಗದಲ್ಲಿ ನಾಲ್ಕು ಕಂಭಗಳಿದ್ದು, ಇಲ್ಲಿನ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತದೆ.
ದೇವಾಲಯದ ಆವರಣದಲ್ಲಿ ಪ್ರತ್ಯೇಕ ಮಂದಿರದಲ್ಲಿ ಆಂಜನೇಯನ ದೇವಾಲಯ ವಿದೆ. ಈ ಶಿಲ್ಪವನ್ನು ಕೂಡಲಿಯ ಅಕ್ಷೋಬ ತೀರ್ಥರು ಒಮ್ಮೆ ಇಲ್ಲಿಗೆ ಬಂದಾಗ ಆಂಜನೇಯನ ಶಿಲ್ಪವಿರದಕಾರಣ ಅಂಗಾರ ದಲ್ಲಿ ಆಂಜನೇಯನ ಆಕೃತಿಯನ್ನು ಬರೆದರು ಎಂಬ ನಂಬಿಕೆ ಇದೆ. ವಿಜಯ ನಗರ ಕಾಲದ ಈ ಶಿಲ್ಫ ಸುಮಾರು ಆರು ಅಡಿ ಎತ್ತರವಿದ್ದು ಪಾರ್ಶ್ವಕ್ಕೆ ತಿರುಗಿದೆ. ಒಂದು ಕೈಯನ್ನು ಮೇಲೆ ಎತ್ತಿದ್ದು, ಮತ್ತೊಂದು ಕೈ ಸೊಂಟದ ಹತ್ತಿರವಿದ್ದು, ಮಾವಿನ ಗೊಂಚಲನ್ನು ಹಿಡಿದಂತೆ ಇದೆ. ಕೆಳಭಾಗ ದಲ್ಲಿ ಅಕ್ಷಯ ಕುಮಾರನ ಕೆತ್ತನೆ ನೋಡಬಹುದು. ನೂತನವಾಗಿ ನಿರ್ಮಾಣ ವಾದ ಆಂಜನೇಯನ ದೇವಾಲಯದ ಮೇಲೆ ರಾಮಾಂಜನೇಯರ ನೂತನ ಶಿಲ್ಪವಿದೆ.

ಇಲ್ಲಿ ಅಂಡಾಳಮನ್ನ ಶಿಲ್ಪವಿದ್ದು, ಧನುರ್ ಮಾಸದಲ್ಲಿ ಅಂಡಾಳಮ್ಮ ತುಳಸಿಯಲ್ಲಿ ಮೂರ್ತಿಯನ್ನ ಅರ್ಚಿಸಿದ ನೆನಪಲ್ಲಿ ಭೂ ದೇವಿ ಸ್ವರೂಪದಲ್ಲಿ ಅಂಡಾಳಮ್ಮನ ಶಿಲ್ಪವನ್ನು, ಹಾಗೂ ಶ್ರೀದೇವಿ ಸ್ವರೂಪ ದಲ್ಲಿ ಲಕ್ಷ್ಮೀಯನ್ನು ಊರಿನ ಒಳಗೆ ಪೂಜಿಸಲಾಗುತ್ತಿದೆ. ಇಲ್ಲಿ ನೂತನವಾಗಿ ಯಾಗ ಶಾಲೆಯನ್ನು ನಿರ್ಮಿಸಲಾಗಿದೆ. ಹೊಸದಾಗಿ ಭೋಜನಶಾಲೆ, ದರ್ಪಣ ಮಂದಿರ, ಮುಂತಾದ ಕೆಲಸಗಳನ್ನು ಈಗ ನಿರ್ಮಿಸಲಾಗಿದೆ. ಆವರಣದಲ್ಲಿ ಕ್ಷೇತ್ರ ಪಾಲಕರ ಮಂದಿರವಿದೆ.
ಇಲ್ಲಿ ಧನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ವೈಕುಂಠ ಏಕಾದಶಿಯಂದು ವಿಶೇಷ ಅಲಂಕಾರಗಳು ನಡೆಯಲಿದೆ.
ತಲುಪುವ ಬಗ್ಗೆ : ಶಿವಮೊಗ್ಗದಿಂದ ಕೂಡಲಿ ಹೊಳೆಹೊನ್ನೂರು ಮಾರ್ಗದಲ್ಲಿ ಸುಮಾರು 08 ಕಿ.ಮೀ. ದೂರದಲ್ಲಿ ಶಿವಮೊಗ್ಗದಿಂದ ಇದೆ. ಸಮೀಪದ ಕೂಡಲಿಯ ಹೊಯ್ಸಳರ ರಾಮೇಶ್ವರ ದೇವಾಲಯ ಹಾಗೂ ಶಂಕರ ಮಠವನ್ನು ನೋಡಬಹುದು.
✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು
