ಕನವರಿಕೆ, ಕನವರಿಕೆ, ಬಾಳಿನಲಿ ಹೊಂದಾಣಿಕೆ
ಹೊಂದಾಣಿಕೆ ಹೊಂದಾಣಿಕೆ ಅದೊಂದೇ ಕನವರಿಕೆ
ಅರಿಯದ ಮನಸೊಂದಿಗೆ, ಅರಿಂತಂತೆ ಹೊಂದಾಣಿಕೆ
ಜಗದ ತೋರಿಕೆಗೆ, ಬದುಕಿನ ನಟನೆಯ ಹೊಂದಾಣಿಕೆ.
ಬಿಟ್ಟ ಹೋಗೋ ಗಳಿಗೆ ಬಂದಾಗಲೂ, ಬಂಧುಗಳ ಬಂದು, ನೀರು ಬಿಡುವಂತ ಕಳ್ಳ ಹೊಂದಾಣಿಕೆ..
ಬಡತನ ಬಂದಾಗ,ಸಹಾಯ ಮಾಡುವಂತೆ,
ಮಾತನಾಡಿ, ದೂರ ಸರಿಯುವ ಜಾಣ ಕುರುಡ ಹೊಂದಾಣಿಕೆ…
ದಾಂಪತ್ಯದಲ್ಲಿ ವೈವಾಹಿಕತೆ ತೋರ್ಪಡಿಸಿ,
ವ್ಯವಹಾರದ ಹೊಂದಾಣಿಕೆ..
ಗುಣಕ್ಕಿಂತ, ಹಣವೊಂದಿದ್ದರೆ, ಹೆಣದ ಜೊತೆ ಹೊಂದಾಣಿಕೆ…
ಹೊಂದಾಣಿಕೆ…. ಬರಿ,,, ಕನವರಿಕೆ
ಮಾತಿನ ಜಗದಲಿ,ಮೌನದ ಒತ್ತಾಯದ ಹೊಂದಾಣಿಕೆ
ದುಡ್ಡಿನ ದರ್ಪದಲಿ, ಬಡತನದ ಕೂಲಿಯ ಹೊಂದಾಣಿಕೆ…
ಗುರುವಿನ ಮುಂದೆ, ಶಿಷ್ಯನ ಭಯದ ಹೊಂದಾಣಿಕೆ..
ಶಿಷ್ಯನಿಗೆ, ಗುರುವೇ ಕೈಮುಗಿದು ಕಲಿಸುವ
ಹೊಂದಾಣಿಕೆ..
ಇಲ್ಲೆಲ್ಲವೂ ಇದ್ದು ಇಲ್ಲದಂತೆ, ಇಲ್ಲದಿದ್ದದ್ದು, ಇದ್ದಂತೆ ಹೊಂದಾಣಿಕೆ…
ಹೊಂದಾಣಿಕೆ,, ಇದೊಂದು, ಅನಿವಾರ್ಯದ ಕನವರಿಕೆ…
ಯಾರಿಂದ ಲಾಭವಿದೆಯೋ, ಅವರೊಂದಿಗೆ ವಿನಯದ ಹೊಂದಾಣಿಕೆ…..
ಏನು ಇಲ್ಲದವರಲ್ಲಿ, ಗತ್ತಿನ ಹೊಂದಾಣಿಕೆ..
ಕೊಟ್ಟು,ತೆಗೆದು ಕೊಳ್ಳುವರಲ್ಲಿ, ಬಿಡೆಯ ಹೊಂದಾಣಿಕೆ..
ಮೆಟ್ಟಿ ,ಬಿಡುವವರಲ್ಲಿ, ಸಮಯದ ಹೊಂದಾಣಿಕೆ
ದೇವರಿಗೂ, ಭಕ್ತನಿಗೂ, ಕಾಣಿಕೆಯ ಹೊಂದಾಣಿಕೆ
ಪೂಜಾರಿಗೂ, ಭಕ್ತನಿಗೂ, ಕಾಣಿಕೆ ಇದ್ದಷ್ಟೇ, ತೀರ್ಥ ಪ್ರಸಾದದ ಹೊಂದಾಣಿಕೆ..
ಆತ್ಮದ ಜೊತೆಗೆ ದೇಹವು, ಪರಮಾತ್ಮನಲ್ಲಿ ಲೀನವಾಗುವ ತನಕ ಹೊಂದಾಣಿಕೆ…
ಹೊಂದಾಣಿಕೆ ಆಗದಿದ್ದರೂ, ಹೊಂದಿಕೊಳ್ಳಲೇ ಬೇಕಾದ ಮನವರಿಕೆ…..
ಹೊಂದಿಕೊಳ್ಳಿ ಇಲ್ಲಾ, ಹೊಂದಿಸಿಕೊಳ್ಳಿ, ಇದೆ ನನ್ನ ಕೋರಿಕೆ…
✍️ರೇವಣಸಿದ್ದಯ್ಯ ಶಿಪ್ಪಯ್ಯನಮಠ
ಹೂಲಿ, ಜಿ:ಬೆಳಗಾವಿ
