ವರ್ಷದಿಂದ ವರ್ಷಕ್ಕೆ
ಹೀಗೇ ಸಾಗುತಿರುವುದು ಬಾಳು
ಎಲ್ಲಾ ಬರೀ ಓಳು ಓಳು
ವರ್ಷದಿಂದ ವರ್ಷಕೆ ಜಿಗಿದಾಟ
ಎಲ್ಲಾ ಒಂಥರಾ ಗೋಳು ಗೋಳು.

ಹೀಗೇ ಸಾಗುತಿರುವುದು ಬಾಳು
ಎಲ್ಲಾ ಬರೀ ಓಳು ಓಳು
ವರ್ಷದಿಂದ ವರ್ಷಕೆ ಜಿಗಿದಾಟ
ಎಲ್ಲಾ ಒಂಥರಾ ಗೋಳು ಗೋಳು.

ಈ ಹುಡುಕಾಟದ ಅವಿರತ ಆಟದಲಿ
ನಿಂತು ತೆಗೆದುಕೊಂಡಿರುವೆವೇ ವಿರಾಮ?
ಜೀವನದರ್ಥಗಳˌಸುತ್ತಣ ಸೊಗದೈಸಿರಿಯಲಿ
ಅನುಭವಿಸಿದ್ದೇವೆಯೇ ಒಂದರೆಕ್ಷಣ ಆರಾಮ?

ಬಾಲ್ಯದಲ್ಲೆಲ್ಲಾ ವಿದ್ಯಾಭ್ಯಾಸˌಹುಡುಗಾಟ
ಉದ್ಯೋಗˌಬಡ್ತಿ ಸಂಪಾದನೆಗಳಿಗಾಗಿ ಪರದಾಟ
ಸಿಗದ ಸುಖದ ಬೆಂಬತ್ತಿ ಪೇಚಾಟ ತೊಳರಾಟ
ಸಿಕ್ಕಿದೆಯೇ ಈ ಅನ್ವೇಷಣೆಗೊಂದು ಗಮ್ಯ?

ನಿರಂತರ ಪ್ರಯಾಣದಲಿ ಗುರಿಯಲ್ಲ ಅಂತ್ಯ
ಅದಕಾಗಿ ಬರೀ ಶ್ರಮಪಡುವುದು ನಿರರ್ಥ
ನಡುನಡುವೆ ನಿಂತು ಆಸ್ವಾದಿಸು ಸೌಂದರ್ಯ
ಹೆಚ್ಚುವುದಾಗ ಪಯಣದ ಸೊಗ ಜೀವನದ ಮೌಲ್ಯ.

✍️ಸುಜಾತ ರವೀಶ್
ಮೈಸೂರು