ಹೊಸ ವರುಷದ ಸಂಭ್ರಮವು ತುಂಬಿದಿಂದು ಜಗದಲಿ
ಒಂದು ವರುಷದ ಕಾಲಮಾನ ಕಳೆಯಿತಿಂದು ಯುಗದಲಿ
ನಿನ್ನೆಯ ದಿನದ ಛಾಯೆಯು ಕಂಡಿತಿಂದು ಜನ ಮನದಲಿ
ಬದಲಾವಣೆ ಇನಿತು ಇರದು ಹೊಸತು ಬಂದ ದಿನದಲಿ

ಅರಿತ ಮನದಿ ಬೆರೆತ ಬದುಕು ಶುಭ ತಂದಿತು ಬಾಳಿನಲಿ
ನಾನು ನನ್ನದು ದೂರವಿಟ್ಟರೆ ಸುಖದ ಜೀವನ ಬದುಕಲಿ
ಹೊಸತು ದಿನವು ಬರದು ಎಂದು ಜಗದ ಕಾಲಮಾನದಲಿ
ಜೀವನಕ್ರಮ ಬದಲಿಸಲು ಹೊಸತನವಿಹುದು ಜೀವನದಲಿ

ಕಳೆದ ದಿನವನು ನೆನೆದು ಕೊರಗದಿರಿ ವ್ಯರ್ಥ ಚಿಂತೆಯಲಿ
ಹೊಸತು ಯೋಜನೆಯಿಂದ ಬದುಕು ಬದಲಿಸಿ ಸತ್ಯದಲಿ
ದೊರೆತ ಪ್ರತೀ ದಿನವನು ಮುಡುಪಾಗಿಸಿಡಿ ಜನಸೇವೆಯಲಿ
ಉಸಿರು ನಿಂತೊದ ಮೇಲೆ ಕೂಡಾ ಹಸಿರಾಗಿರಿ ಜನಮದಲಿ

✍️ಡಾ. ವಾಣಿಶ್ರೀ ಕಾಸರಗೋಡು