ನಿಸರ್ಗ, ದೇವ ನಿರ್ಮಿತ ನಿರ್ಮಾಣ
ಅದೆಷ್ಟು ವರ್ಣಮಯ ಈ ಜೀವನ
ಖಂಡಿತಾ ಭವ್ಯ ವಾಗಿದೆ ಈ ಭೂ ತಾಣ
ಸವಿಯೋಣ ನಿತ್ಯ, ಈ ಭೂ ಗಗನ

ಖುಷಿಯಾಗಿದೆ ನನಗೆ, ಈ ಮಧುರತೆಗೆ
ಈ ಜಗವೇ ಸಕಾರಣ ಪ್ರತಿ ಜೀವಿಗೆ
ಹನಿ ಉದರಲು, ನೆನೆಯಲು ಖುಷಿ ನನಗೆ
ಸಪ್ತ ಸ್ವರಗಳಲಿ ನಲಿವೆ ಈ ಬಣ್ಣಗಳ ಒಳಗೆ

ವರುಣಾ, ಸುರಿ ಸುರಿಸು ಮಳೆ,
ನಿನ್ನಿಂದಲೇ, ಬುವಿಗೆ ಕಳೆ, ಬೆಳೆ
ಗಿರಿ ಕನ್ಯೆಯಾಗೇ ನಲಿವೆ ನವಿಲಿನ ಹಾಗೇ
ಸೃಷ್ಟಿಯೇ, ಶಬ್ದಗಳು ಸಾಲವು ವರ್ಣಿಸಲು ಎನಗೆ
ಮಿತ್ರರೆ,ಎದ್ದೇಳಿರಿ, ಸವಿಯೋಣ ಜೀವನದ ಬಗೆ
ವಂದಿಸುತಾ, ಭೂ ತಾಯಿ, ಭಾರತ ಮಾತೆಗೆ.

✍️ ಶ್ರೀ ಆರ್.ಪಿ.ಕುಲಕರ್ಣಿ.
ಪುಣೆ,ಮಹಾರಾಷ್ಟ್ರ