ಹಚ್ಚ ಹಸಿರಿನ ಗಿಡವು
ಜೀವಕ್ಕೆ ಜೀವವು
ನೀಡಿದೆ ಸುಂದರ ಹೂವು
ನೋಡಿದವರ ಮನಕೆ ಗೆಲುವು
ಮನಕೆ ಆನಂದವು
ಹೃದಯಕೆ ಸಂತಸವು
ಎನು ಹೇಳಲಿ ಪ್ರಕೃತಿಮಾತೆ
ನೀವೇ ಮನುಕುಲಕೆ ಆಧಾರವು
ವನದೇವಿ ಎನೆಂದು ಬಣ್ಣಿಸಲಿ ದೈವಿದತ್ತ ಕೊಡುಗೆ
ಅಂದ ಚಂದದಿ ನೀನು ಧರಿಸಿರುವೆ
ಹಸಿರ ವರ್ಣದ ಉಡುಗೆ
ಕಾನನವು ಕಾಯುತಿದೆ ಆಸರೆ ಯಾಗಿ ಉಸಿರಿಗೆ
ಜಗವ ಕಾಯುವ ಬನದೇವಿ
ನಮನ ನಿನ್ನ ಪಾದಾರವಿಂದಗಳಿಗೆ
ಕಾಡಿದ್ದರೇ ನಾಡು ನಯನ ಮನೋಹರನೋಡು
ಕಾಡು ಬೆಳಸಿ ನಾಡನುಳಿಸಿ
ಕಾಡು ಪ್ರಾಣಿಗಳು ಆಹಾರನರಸಿ
ನಾಡಿಗೆ ಬರುವುದ ಬಿಡಿಸಿ .
✍️ರ.ಗು.ಸುತೆ
(ಡಾ//ಸುಧಾ.ಚ.ಹುಲಗೂರ)
ಧಾರವಾಡ
