ತಾಯಿ ತುಳಸಿ ಸೌಭಾಗ್ಯಧಾಯಿನಿ
ಪವಿತ್ರ ಪಾವನ ಸಸ್ಯ ಸಂಜೀವಿನಿ ॥ಪ॥
ನೀನಿರುವ ಮನೆಗಿರದು ರೋಗದಾ ಬಾಧೆ
ಆರೋಗ್ಯ ನೆಮ್ಮದಿ ನೀಡಿ ಸಲಹುವ ಶುಭದೆ
ತಡೆವೆ ಬಾಗಿಲಲೆ ಭೂತ ಪಿಶಾಚ ಪ್ರೇತ ಗಣ
ಮಾಟ ಮಂತ್ರ ಕ್ಷುದ್ರ ಶಕ್ತಿಗಳ ದುಷ್ಟ ಬಣ ॥೧॥
ಸುಪ್ರಭಾತ ಸಂಧ್ಯೆಯಲಿ ನಿನ್ನ ಉಪಾಸನ
ಕಾರ್ತಿಕದಲಿ ಆಚರಿಸುವ ನಿನ್ನ ಆರಾಧನಾ
ಶ್ರೀಹರಿಯೊಂದಿಗೆ ಮಾಡುವೆವು ಕಲ್ಯಾಣ
ರಕ್ಷಿಸಿ ಶ್ರೀ ಮಾತೆ ದಯಪಾಲಿಸು ಸದ್ಗುಣ ॥೨॥
ಮನೆ ಮನೆಗಳ ಮುಂದಿರಲಿ ಬೃಂದಾವನ
ಶೋಭಿಸುವುದಾಗ ಗೃಹಗಳಲಿ ದಿವ್ಯಚೇತನ
ರಾಘವೇಂದ್ರ ಗುರು ನೆಲೆಸಿರುವ ನಿಕೇತನ
ಇಹ ಪರಗಳಿಗೆ ದಾರಿ ತೋರುವ ಸಾಧನ ॥೩॥
ಉತ್ಥಾನ ದ್ವಾದಶಿಯ ಶುಭಕಾಮನೆಗಳು.
✍️ ಸುಜಾತಾ ರವೀಶ್, ಮೈಸೂರು
*
