ದೀಪಾವಳಿ (ಟಂಕಾ)

ಪ್ರಣತಿಯಲ್ಲಿ
ಬತ್ತಿ ತೈಲವ ಹೀರಿ
ಬೆಳಕ ಬೀರಿ
ಕತ್ತಲ ಸರಿಸುವ
ಕಾತೀ೯ಕದ ಸೊಬಗು.

ದೀಪಾವಳಿ ಹೀಗಿರಲಿ(ಚುಟುಕು)

ಪ್ರಣತಿಗಳು ಬೆಳಗಲಿ
ವಿದ್ಯುತ್ ದೀಪಗಳೂ ಇರಲಿ
ಪಟಾಕಿಗಳ ಹಾವಳಿ ಬೇಡ*
ಪರಿಸರಕ್ಕೆ ಹಾನಿಯು ನೋಡ*

ಅಯೋಧ್ಯೆಯಲ್ಲಿ ದೀಪಾವಳಿ(ತನಗ)

ಶ್ರೀ ರಾಮನ ಊರಿನ
ಅಯೋಧ್ಯೆಯಲ್ಲಿ ದೀಪ
ದೀಪೋತ್ಸವ ಗಿನ್ನಿಸ್
ದಾಖಲೆಗೆ ಸೇಪ೯ಡೆ.

ತನಗ- 2

ವಿಶ್ಲೇಷಣೆಗಿಲ್ಲವು
ವಿಜ್ಞಾನದ ವೇಗವು
ತೈಲ ದೀಪಗಳಿಂದ
ಎಲ್.ಈ.ಡಿ ಗಳೆಡೆಗೆ.

ತನಗ-3

ಎಲ್ಲವೂ ಅತೀ ಈಗ
ಪ್ರಣತಿಗಳೂ ಬೇಕು
ವಿದ್ಯುತ್ ದೀಪಗಳೂ
ಪಟಾಕಿಗಳೂ ಬೇಕು.

ದೀಪಾವಳಿ ಅಂದು- ಇಂದು(ಹನಿಗವನ)

ಅಂದು
ಗಾಢ ಕತ್ತಲಲ್ಲಿ ಮನೆ ಮನೆಗಳ ಮುಂದೆ ಬೆಳಗುತ್ತಿದ್ದ ಪ್ರಣತಿಗಳು.
ಇಂದು
ಝಗ ಝಗಿಸುವ ತರಾವರಿ ವಿದ್ಯುತ್ ದೀಪಗಳ ಮುಂದೆ
ಸೊರಗಿದಂತೆ ಪ್ರಣತಿಗಳು.
ಆಗಸದಲ್ಲಿ ತಾರೆಗಳು, ಮನೆ ಮುಂದೆ ಪ್ರಣತಿಗಳು, ಅಮಾವಾಸ್ಯೆ ಕತ್ತಲು.
ಕಣ್ಮನಕ್ಕೆ ಆನಂದ, ಶಾಂತ ಮನೆ,ಮನಸುಗಳು.
ಅಬ್ಬರ,ಆಭ೯ಟ, ಸಿಡಿಗುಟ್ಟುವ ಪಟಾಕಿಗಳು.
ಮಾನವನ ವಿಕೃತ ಸಡಗರಕ್ಕೆ ನಲುಗುವ ಪ್ರಾಣಿ ಪಕ್ಷಿಗಳು

ಹಾಯ್ಕು

1.

ಆಧ್ಯಾತ್ಮಿಕತೆ
ಹಬ್ಬಗಳ ವಿಶೇಷ
ದೀಪಾವಳಿಯೂ.

2.

ಬಗೆ ಬಗೆಯ
ದೀಪಗಳ ಬೆಳಕು
ಸಂತೋಷಮಯ.
3.

ಮನೆ, ಮನದ
ಮಲಿನ ವಿಚಾರದ
ತಮ ನೀಗಲಿ

ಅಕ್ಷರ ವಿಸ್ತರಣಾ ಕವನ


ದೀಪ
ಹಬ್ಬವೆ,
ಸಡಗರ
ತರುವೆ ನೀನು
ಪೌರಾಣಿಕ ಕಥೆ
ನಿನ್ನೊಡಲ ತುಂಬೆಲ್ಲ.
ಶ್ರೀ ಲಕ್ಷ್ಮೀ ಆರಾಧನೆಯು
ಶಿಶಿರದಲ್ಲಿ ದೀಪೋತ್ಸವ.
ಸೌಹಾರ್ದಯುತ ಪರಿಸರವು
ಪ್ರಣತಿಗಳ ಬೆಳಕದು
ಶಾಂತಿಯಿಂದ ಬೆಳಗಲು
ಕಣ್ಮನಕ್ಕೆ ಆನಂದ
ಕತ್ತಲ ದೂಡಲು
ವಿದ್ಯುತ್ ಇಲ್ಲ
ಹಾಗಾಗಿ
ಪ್ರಣತಿ
ದೀಪ
ತಾ.

ರುಬಾಯಿ

ಆಶ್ವೀಜದ ಧನ ತ್ರಯೋದಶಿಯಿಂದ ಮೊದಲಾಗಿ
ಕಾತೀ೯ಕದ ತುಳಸಿ ವಿವಾಹದವರೆಗೆ ಸಾಗಿ.
ದೀಪೋತ್ಸವ,ಸಡಗರ ಲಕ್ಷ್ಮಿಯ ಆರಾಧನೆಯು.
ಬಲೀಂದ್ರ,ಪಾಂಡವರು,ಪಗಡೆಆಟ ನೆನಪಾಗಿ.
(16ಆಕ್ಷರಗಳು)

✍️ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ)
ಹುಬ್ಬಳ್ಳಿ.