ಕತ್ತಲನು ಕರಗಿಸಿ ಜಗವನು ಬೆಳಗಿಸಲು
ಅಜ್ಞಾನವ ತೊಲಗಿಸಿ ಸುಜ್ಞಾನವ ಸೂಸಲು
ಮತ್ತೆ ಬಂದಿತು ನೋಡಿ ಬೆಳಕಿನ ಹಬ್ಬ
ಸಂಭ್ರಮ ಸಡಗರದ ದೀಪಾವಳಿ ಹಬ್ಬ
ಮನೆ ಮುಂದೆ ರಂಗಿನ ರಂಗೋಲಿಗಳು
ಝಗಮಗಿಸುವ ಬಣ್ಣದ ದೀಪದ ಸರಗಳು
ವಿವಿಧ ವಿನ್ಯಾಸದ ಆಕಾಶ ಬುಟ್ಟಿಗಳು
ಎಲ್ಲೆಡೆ ಪಟಾಕಿ ಸುರ್ ಸುರ್ ಬತ್ತಿಗಳು
ನೀರು ತುಂಬುವ ದಿನ ಅಭ್ಯಂಜನ ಸ್ನಾನ
ಗಂಡು ಮಕ್ಕಳಿಗೆಲ್ಲ ಆರತಿಯ ನಮನ
ಮಹಾಲಕ್ಷ್ಮಿ ಪೂಜೆ ಅಮವಾಸ್ಯೆಯ ದಿನ
ಅಂಗಡಿಗಳ ಪೂಜೆ ಪಾಡ್ಯೆಯ ಶುಭದಿನ
ದೇವಿ ನೈವೇದ್ಯಕ್ಕೆ ಹೋಳಿಗೆ ಪಾಯಸವು
ಕರ್ಚಿಕಾಯಿ ಚಕ್ಕುಲಿ ಚೂಡದ ಪರಾಳವು
ಹೊಸ ಬಟ್ಟೆಗಳ ಉಡುಗೆಯ ಸಂಭ್ರಮವು
ನೆಂಟರೆಲ್ಲರ ಜೊತೆ ಸೇರಿ ಸಂತಸದ ನಲಿವು
ಮನದಲ್ಲಿರುವ ನೋವು ಮರೆಯಾಗಿ
ಬದುಕಿನಲ್ಲಿ ಬರುವ ಕಷ್ಟಗಳು ದೂರವಾಗಿ
ಲಕ್ಷ್ಮಿ ಕೃಪೆಯಿಂದ ಸಿರಿ ಸಂಪತ್ತಿನ ಹರವು
ದ್ವೇಷ ತೊಲಗಿ ಪ್ರೀತಿ ತುಂಬಿ ಬಾಳು ಬಂಗಾರವು

✍️ಜಯಶ್ರೀ ಎಸ್ ಪಾಟೀಲ
ಧಾರವಾಡ
