ಬದುಕ ಬೆಳೆಗುವ ಬೆಳಕೇ
ನೀ ಬಂದು ಬಿಡು
ಜೀವ ಬೆಳಗುವ ಬೆಳಕೇ
ನೀ ನಿಂದು ಬಿಡು

ಆತ್ಮದ ಒಳಗೆ ಬಂದು
ನೀ ನೆಲೆಸಿ ಬಿಡು
ಪರಮಾತ್ಮನ ಸ್ವರೂಪವೇ
ನೀ ಹರಿಸಿ ಬಿಡು

ಚೈತನ್ಯ ಮೂರುತಿಯೇ
ಭಕುತಿಯ ಚೇತನವ ಮಾಡಿಬಿಡು
ಸುಜ್ಞಾನ ಸಾರಥಿಯೇ
ವಿಶ್ವಜ್ಞಾನವ ಬೋಧಿಸಿಬಿಡು

ಮೊಗ್ಗಾದ ಮನವನು
ಹೂವಂತೆ ಅರಳಿಸಿಬಿಡು
ಕೃತಿ ನಾನು ಕತೃ ನೀನು
ನಿನ್ನ ಮನದಂತೆ ನನ್ನ ನಡೆಸಿಬಿಡು

ಶ್ರೀ ಚರಣದಲಿ ನನ್ನ ಒಪ್ಪಿಸಿರುವೆ
ಅಮ್ಮಾ ಸ್ವೀಕರಿಸಿಬಿಡು
ಜಗ ಬೆಳಗುವ ದೀವಿಗೆಯೇ
ನನ್ನನ್ನು ಬೆಳಗಿ ಬಿಡು

✍️ಕಾವ್ಯಸುತ
(ಷಣ್ಮುಗಂ ವಿವೇಕಾನಂದ)
ಧಾರವಾಡ